ಭಾರತಕ್ಕೆ ಪಾಕ್ ಏಕೆ ಸಹಕರಿಸಬೇಕು: ಮುಷರಫ್ ಉದ್ಧಟತನ
ಲಾಹೋರ್: ಭೂಗತ ದೊರೆ ದಾವೂದ್ ಇಬ್ರಾಹಿಂ ಕರಾಚಿಯಲಿದ್ದಾನೆ. ಅವನ ಬಂಧನಕ್ಕೆೆ ಪಾಕಿಸ್ತಾನ ಏಕೆ ಸಹಕಾರ ನೀಡಬೇಕು ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೆಜ್ ಮುಷರಫ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಟಿವಿಯೊಂದಕ್ಕೆ ಪ್ರತಿಕ್ರಿಿಯೆ ನೀಡಿರುವ ಮುಷರಫ್, ಭಾರತ ಬಹುಕಾಲದಿಂದ ಪಾಕಿಸ್ತಾನವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ. ಭಾರತದಲ್ಲಿ ಮುಸ್ಲಿಂರನ್ನು ಹಿಂಸಿಸಲಾಗುತ್ತಿಿದೆ, ಅದಕ್ಕೆ ದಾವೂದ್ ತಕ್ಕ ಪ್ರತಿಕ್ರಿಿಯೆ ನೀಡುತ್ತಿದ್ದಾರೆ. ದಾವೂದ್ ಇಬ್ರಾಹಿಂ ಭಾರತಕ್ಕೆ ತಕ್ಕ ಸೂಚನೆ ನೀಡುತ್ತಿದ್ದಾರೆ ಎಂದು ಹೇಳುವ ಮೂಲಕ ಭೂಗತ ಪಾತಕಿಯನ್ನು ಮುಷರಫ್ ಬೆಂಬಲಿಸಿದ್ದಾಾರೆ.
ಬುಧವಾರ ಗೃಹ ಇಲಾಖೆ ಕಾರ್ಯದರ್ಶಿ ರಾಜೀವ್ ಮೆಹ್ರಿಶಿ ಪಾಕಿಸ್ತಾನ ಅಂತಾರಾಷ್ಟ್ರೀಯ ನಿಯಮಗಳನ್ನು ಮೀರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಆಶ್ರಯ ನೀಡಿದೆ. ಭಾರತ ಎಲ್ಲ ಪ್ರಯತ್ನಗಳನ್ನು ಮುಂದುವರಿಸಿದೆ. ಆದರೆ ಪಾಕಿಸ್ತಾನ ಭಾರತದ ತನಿಖಾ ತಂಡಗಳಿಗೆ ಸಹಕಾರ ನೀಡದೆ ಉದ್ಧಟತನ ಪ್ರದರ್ಶಿಸುತ್ತಿದೆ. ಮುಂಬೈನಲ್ಲಿ 1993ರಲ್ಲಿ ನಡೆದ ಬಾಂಬ್ ಬ್ಲಾಾಸ್‌ಟ್‌ನಲ್ಲಿ 260 ಜನರು ಮೃತಪಟ್ಟಿದ್ದು, 700 ಜನ ಗಾಯಗೊಂಡಿದ್ದರು. ಇದರ ಪ್ರಮುಖ ಆರೋಪಿ ದಾವೂದ್ ಇಬ್ರಾಾಹಿಂ ಎಂದು ಹೇಳಿದ್ದರು.
ಭಾರತದ ಗೃಹ ಇಲಾಖೆ ಕಾರ್ಯದರ್ಶಿ ರಾಜೀವ್ ಮೆಹ್ರಿಿಶಿ ದಾವೂದ್ ಇಬ್ರಾಾಹಿಂ ಪಾಕಿಸ್ತಾನದಲ್ಲಿದ್ದಾನೆ. ಆತನ ಬಂಧನಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದರು.
.
Leave A Reply