ನಳಿನ್ ವಿರುದ್ಧ ಏಕ್ಸ್ ನಲ್ಲಿ ವೇಷ ಮರೆಸಿ ತಂತ್ರ ಹೂಡಿದ್ದೇ ಪರಮ ಅಸಹ್ಯ!
ನಳಿನ್ ಕುಮಾರ್ ಕಟೀಲ್ ಅವರು ಸಾರ್ವಜನಿಕವಾಗಿ ಟ್ರೋಲ್ ಗೆ ಒಳಗಾಗಬೇಕು ಎಂದು ಯಾರೋ ಕುಹಕಿಗಳು ಮಾಡಿದ ಪ್ಲಾನ್ ಈಗ ಬಯಲಾಗಿದೆ. ನಳಿನ್ ಕುಮಾರ್ ಫಾರ್ ದಕ್ಷಿಣ ಕನ್ನಡ ಎಂದು ಹ್ಯಾಶ್ ಟ್ಯಾಗ್ ಹಾಕಿ ಟ್ವಿಟರ್ (ಈಗ ಏಕ್ಸ್ ಎಂದು ಬದಲಾಗಿದೆ) ನಲ್ಲಿ ಅದನ್ನು ಟ್ರೆಂಡ್ ಮಾಡುವ ಪ್ರಯತ್ನ ನಡೆಸಲಾಗಿದೆ. ಸಾಮಾನ್ಯವಾಗಿ ಉನ್ನತ ನೀತಿ ನಿರೂಪಣೆಯ ಸ್ತರದಲ್ಲಿರುವವರು ಟ್ವಿಟರ್ ನಲ್ಲಿ ಟ್ರೆಂಡಿಂಗ್ ನಲ್ಲಿರುವ ವಿಷಯವನ್ನು ಗಮನಿಸುತ್ತಾ ಇರುತ್ತಾರೆ. ಒಂದು ವಿಷಯ ಹೈ ಲೆವೆಲಿಗೆ ತಲುಪಬೇಕು ಎಂದರೆ ಅದನ್ನು ಟ್ವಿಟರ್ ನಲ್ಲಿ ಮೊದಲ ಟ್ರೆಂಡಿಂಗ್ ನಲ್ಲಿ ತರುವ ಅಭಿಯಾನವನ್ನು ನಡೆಸಲಾಗುತ್ತದೆ. ಒಂದು ಹ್ಯಾಶ್ ಟ್ಯಾಗ್ ಸಬ್ಜೆಕ್ಟನ್ನು ಒಂದು ದಿನದಲ್ಲಿ ಎಷ್ಟು ಸಾವಿರ ಮಂದಿ ಬಳಸುತ್ತಾರೆ ಎನ್ನುವುದರ ಮೇಲೆ ಆ ವಿಷಯ ಟ್ರೆಂಡಿಂಗ್ ನಲ್ಲಿ ಬರುತ್ತದಾ ಎನ್ನುವುದು ನಿರ್ಧಾರವಾಗುತ್ತದೆ. ಟ್ರೆಂಡಿಂಗ್ ಆರ್ಗಾನಿಕ್ ಮತ್ತು ಪೇಯ್ಡ್ ಆಗಿ ಮಾಡುವ ಕ್ರಮ ಇದೆ. ಪೇಯ್ಡ್ ಟ್ರೆಂಡಿಂಗ್ ಮಾಡಲು ಬಯಸುವವರಿಗೆ ಅದು ಫೇಕ್ ಆದರೂ ಪರವಾಗಿಲ್ಲ, ಒಟ್ಟಿನಲ್ಲಿ ಅದು ಟ್ರೆಂಡಿಂಗ್ ಆಗಬೇಕು ಎನ್ನುವ ದುರುದ್ದೇಶ ಇರುತ್ತದೆ. ಸಾಮಾನ್ಯವಾಗಿ ಫೇಕ್ ಟ್ರೆಂಡಿಂಗ್ ಮಾಡಲು ಯಾರಾದರೂ ಸೋಶಿಯಲ್ ಮೀಡಿಯಾ ಚೆನ್ನಾಗಿ ಗೊತ್ತಿರುವ ವ್ಯಕ್ತಿಗೆ ಗುತ್ತಿಗೆ ಕೊಟ್ಟರೆ ಮುಗಿಯಿತು. ಆತ ಅದೆಷ್ಟೋ ಫೇಕ್ ಐಡಿಗಳನ್ನು ಬಳಸಿ ಟ್ರೆಂಡಿಂಗ್ ಸೃಷ್ಟಿಸಬಲ್ಲ. ಅಂತವುದೇ ಒಂದು ಫೇಕ್ ಟ್ರೆಂಡಿಂಗ್ ಸೃಷ್ಟಿಸಲು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ವಿರೋಧಿಗಳು ಹೊರಟಿರುವುದು ಈಗ ಬಟಾಬಯಲಾಗಿದೆ. ಒಬ್ಬ ವ್ಯಕ್ತಿಯ ಇಮೇಜ್ ಹಾಳು ಮಾಡಲು ಎರಡು ವಿಧಾನಗಳಿವೆ. ಒಂದು ನೇರವಾಗಿ ಅವನ ವ್ಯಕ್ತಿತ್ವದ ಮೇಲೆ ದಾಳಿ ಮಾಡುವುದು. ಇನ್ನೊಂದು ಅವನಿಗೆ ಒಳ್ಳೆಯದು ಬಯಸುತ್ತಿದ್ದೇವೆ ಎಂದು ನಾಟಕ ಮಾಡುತ್ತಲೇ ಹಿಂದಿನಿಂದ ಚೂರಿ ಹಾಕುವುದು.
ಫೇಕ್ ಐಡಿ ಬಳಸಿ ಟ್ರೋಲ್ ಗೆ ಸರಕು!
ಟ್ವಿಟರ್ ನಲ್ಲಿ ಫೇಕ್ ಐಡಿಗಳನ್ನು ಬಳಸಿ ಹ್ಯಾಶ್ ಟ್ಯಾಗ್ ನೊಂದಿಗೆ ನಳಿನ್ ಕುಮಾರ್ ಕಟೀಲ್ ಫಾರ್ ದಕ್ಷಿಣ ಕನ್ನಡ ಎನ್ನುವುದನ್ನು ಟ್ರೆಂಡಿಂಗ್ ಮಾಡಲಾಗಿದೆ. ಸಡನ್ನಾಗಿ ಒಂದು ವಿಷಯ ಟ್ರೆಂಡಿಂಗ್ ಲಿಸ್ಟ್ ನಲ್ಲಿ ಟಾಪ್ ಒನ್ ನಲ್ಲಿ ಬಂದಾಗ ಎಲ್ಲರೂ ಆ ಕಡೆ ದೃಷ್ಟಿ ಹರಿಸುವುದು ಸಹಜ. ಇನ್ನು ಒಂದು ಕ್ಷೇತ್ರದ ಸಂಸದರು ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತಿದ್ದಾರೆ ಎನ್ನುವುದು ಗೊತ್ತಾದಾಗ ಅವರ ವಿರೋಧಿ ಪಕ್ಷದವರು ಮತ್ತು ಅವರದ್ದೇ ಪಕ್ಷದ ವಿರೋಧಿಗಳು ಅದರ ಮೂಲಕ್ಕೆ ಹೋಗುವುದು ವಿಶೇಷವೇನಲ್ಲ. ಹಾಗೆ ಹೋದಾಗ ಅಲ್ಲಿ ಟ್ರೆಂಡಿಂಗ್ ನಲ್ಲಿ ಬಳಕೆಯಾದ ಹೆಸರುಗಳು ಪಾಯಲ್ ಪಾಲ್, ಧಿವ್ ಜಿ ಪಟೇಲ್, ಅದಿತಿ ಅಗರ್ವಾಲ್, ರಶೀದ್ ಖಾನ್, ಕ್ಯೂಟಿ ಪೈ ಈ ರೀತಿಯ ಹೆಸರುಗಳು ಕಾಣಸಿಕ್ಕಿವೆ. ಅವರ ಹಿನ್ನಲೆ ನೋಡಿದಾಗ ಅವರ್ಯಾರು ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರೇ ಅಲ್ಲ ಎನ್ನುವುದು ಗೊತ್ತೇ ಆಗುತ್ತದೆ. ಫೇಕ್ ಐಡಿಗಳನ್ನು ಬಳಸಿರುವುದು ಸ್ಪಷ್ಟವಾಗುತ್ತದೆ. ಈ ಮೂಲಕ ನಳಿನ್ ವಿರೋಧಿಗಳು ನಳಿನ್ ಕುಮಾರ್ ಕಟೀಲ್ ಅವರನ್ನು ಟ್ರೋಲ್ ಮಾಡಲು ಇವರೇ ಟ್ರೋಲಿಗರ ಕೈಯಲ್ಲಿ ಬ್ರಹ್ಮಾಸ್ತ್ರ ನೀಡಿದ್ದಾರೆ. ನಳಿನ್ ಹಿತೈಷಿಗಳು ಫೇಕ್ ಐಡಿಗಳನ್ನು ಬಳಸಿ ನಳಿನ್ ಕುಮಾರ್ ಕಟೀಲ್ ಹೆಸರು ಏಕ್ಸ್ ನಲ್ಲಿ ಟ್ರೆಂಡಿಂಗ್ ಮಾಡಿದ್ದಾರೆ ಎಂದು ಕಿಚಾಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕುಳಿತು ನಳಿನ್ ರಾಜಕೀಯ ಮಾಡಿದವರಲ್ಲ!
ಚುನಾವಣೆ ಎಂದರೆ ಒಬ್ಬ ವ್ಯಕ್ತಿ ಒಂದು ಪಕ್ಷದಿಂದ ಮತ್ತು ಇನ್ನೊಬ್ಬ ವ್ಯಕ್ತಿ ಇನ್ನೊಂದು ಪಕ್ಷದಿಂದ ನಿಂತು ಜನ ತಮಗೆ ಬೇಕಾದ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಹೆಚ್ಚು ಮತ ಪಡೆದವರು ಗೆಲ್ಲುವುದು ಎನ್ನುವುದಿಷ್ಟೇ ಆಗಿದ್ದರೆ ಯಾವ ತಲೆನೋವು ಕೂಡ ಇರಲಿಲ್ಲ. ಆದರೆ ಚುನಾವಣೆ ಎಂದರೆ ಅದು ಅಪ್ಪಟ ರಾಜಕೀಯ ಕಲ್ಮಶ. ವಿರೋಧಿ ಪಕ್ಷದವರು ಎಸೆಯುವ ಬಾಣಗಳು ಒಂದೆಡೆಯಾದರೆ ತಮ್ಮದೇ ಪಕ್ಷದ ಟಿಕೆಟ್ ಅಕಾಂಕ್ಷಿಗಳು ಬಟ್ಟೆಯಲ್ಲಿ ಸುತ್ತಿ ಎಸೆಯುವ ಬಾಂಬ್ ಗಳನ್ನು ಕೂಡ ಅಷ್ಟೇ ಎಚ್ಚರಿಕೆಯಿಂದ ಎದುರಿಸಬೇಕಾಗುತ್ತದೆ. ಏಕ್ಸ್ ನಲ್ಲಿ ಟ್ರೆಂಡಿಂಗ್ ಮಾಡುವುದರಿಂದ ಟಿಕೆಟ್ ದೊರಕುತ್ತದೆ ಎಂದು ಅಂದುಕೊಳ್ಳುವಷ್ಟು ನಳಿನ್ ಅವರಾಗಲೀ ಅವರ ಬೆಂಬಲಿಗರು ರಾಜಕೀಯ ಶೂನ್ಯತೆ ಹೊಂದಿಲ್ಲ. ಸಾಮಾಜಿಕ ಜಾಲತಾಣವನ್ನೇ ನಂಬಿ ರಾಜಕಾರಣ ಮಾಡಬಹುದು ಎಂದು ನಳಿನ್ ಅವರು ಯಾವತ್ತೂ ಅಂದುಕೊಂಡಿಲ್ಲ. ಆದರೆ ಒಬ್ಬರ ತೇಜೋವಧೆ ಹೀಗೂ ಮಾಡಬಹುದು ಎಂದು ಕೆಲವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕಾಗಿ ಅವರು ಅಂತಹ ದಾರಿಯನ್ನು ಕಂಡುಕೊಂಡಿದ್ದಾರೆ. ಅದು ಯಾರದ್ದೋ ಷಡ್ಯಂತ್ರ ಎನ್ನುವುದು ಈಗ ಪತ್ತೆಯಾಗಿದೆ. ಬೇರೆಯವರ ವ್ಯಕ್ತಿತ್ವವನ್ನು ಹಾಳು ಮಾಡಲು ಹೀಗೆ ತನು, ಮನ, ಧನ ಸುರಿಯುವವರು ತಮ್ಮ ಇಮೇಜ್ ಉಳಿಸಲು ಶ್ರಮ ಹಾಕಿದ್ದರೆ ಕನಿಷ್ಟ ಒಂದಿಷ್ಟು ಒಳ್ಳೆಯದಾದರೂ ಆಗುತ್ತಿತ್ತು!!
Leave A Reply