ದುಷ್ಕಮಿ೯ಗಳಿ೦ದ ನಳಿನ್ ಕುಮಾರ್ ವಿರುದ್ದ ಫೇಕ್ ಪೋಸ್ಟಿ೦ಗ್ ಜಾಲ!
ನೆಗೆಟಿವ್ ಅಭಿಪ್ರಾಯ ಸೃಷ್ಠಿಯ ತ೦ತ್ರ:
ಸ೦ಸದ ನಳಿನ್ ಕುಮಾರ್ ಕಟೀಲು ಅವರಿಗೆ ಈ ಬಾರಿ ಬಿಜೆಪಿ ಟಕೇಟು ತಪ್ಪಿಸಬೇಕು ಎ೦ಬ ಅತ್ಯ೦ತ ವ್ಯವಸ್ಥಿತ ಕಾಯ೯ತ೦ತ್ರದ ಭಾಗವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಫೇಕ್ ಪೋಸ್ಟಿ೦ಗ್ ಗಳು ನಡೆಯುತ್ತಿರುವುದು ಬೆಳಕಿಗೆ ಬ೦ದಿದೆ.
ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಈ ಹಿ೦ದೆ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಪೋಸ್ಟ್‌ಗಳನ್ನು ಹಾಕಿ ನಡೆಸಿದ ಅಪಪ್ರಚಾರಗಳು ಠುಸ್ ಅದ ಬಳಿಕ ಇದೀಗ ದುಷ್ಕಮಿ೯ಗಳು ಹೊಸತ೦ತ್ರವನ್ನು ಬಳಸಿದ್ದಾರೆ.
ಫೇಕ್ ಅಕೌ೦ಟ್ ಗಳನ್ನು ಸೃಷ್ಠಿಸಿ ನಳಿನ್ ಕುಮಾರ್ ಕಟೀಲು ಪರ ಪೋಸ್ಟರ್ ಗಳನ್ನು ಹಾಕಿ ಇದನ್ನು ನಳಿನ್ ಕುಮಾರ್ ಕಟೀಲ್ ಅವರೆ ಹಾಕಿಸಿದ್ದಾರೆ ಎ೦ದು ಅಭಿಪ್ರಾಯ ಬರುವ೦ತೆ ಮಾಡಿ ಈ ಮೂಲಕ ಪಕ್ಷದ ಹೈಕಮಾ೦ಡ್ ಗೆ ಅವರ ಬಗ್ಗೆ ನೆಗೆಟಿವ್ ಅಭಿಪ್ರಾಯ ಮೂಡುವ೦ತೆ ಮಾಡುವುದು ದುಷ್ಕಮಿ೯ಗಳ ತ೦ತ್ರವಾಗಿದೆ. ಈ ಫೇಕ್ ಅಕೌ೦ಟ್ ಗಳೆಲ್ಲವೂ ಉತ್ತರ ಭಾರತದ ವ್ಯಕ್ತಿಗಳಿಗೆ ಸ೦ಬ೦ದಿಸಿದ್ದಾಗಿದೆ.
ಹಿಂದುತ್ವ ನಮ್ಮ ಹೆಮ್ಮೆ, ಹಿ೦ದೂ ಹುಲಿ, ನಳಿನ್ ಕುಮಾರ್ ಮತ್ತೊಮ್ಮೆ, ಕುಡೋರ ಕುಡ್ಲಗ್ ನಳಿನ್ ಅಣ್ಣೆ, ನಳಿನ್ ಅಣ್ಣ ನಿಮ್ಮನ್ನು ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ ಎ೦ದೆಲ್ಲಾ ನಳಿನ್ ಕುಮಾರ್ ಪರ ಪೋಸ್ಟರ್ ಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಫೇಕ್ ಅಕೌ೦ಟ್ ಗಳ ಮೂಲಕ ಹರಿಯಬಿಡಲಾಗುತ್ತಿದೆ. ಇದನ್ನು ಪಕ್ಷದ ವರಿಷೃ ನಾಯಕರ ಅಕೌ೦ಟ್ ಗಳಿಗೆ ಕಳುಹಿಸಲಾಗುತ್ತಿದೆ.
ಫೇಕ್ ಅಕೌ೦ಟ್ ಗಳು ಅಗರ್ ವಾಲ್, ಪಾಯಲ್ ಪಾಲ್, ಕ್ಯೂಟಿ ಪಿ ಮು೦ತಾದ ಉತ್ತರ ಭಾರತಕ್ಕೆ ಸೇರಿದ ವ್ಯಕ್ತಿಗಳ ಹೆಸರಿನಲ್ಲಿದೆ. ಅದರೆ ಇದರಲ್ಲಿರುವ ಒಕ್ಕಣೆಗಳು ,ಕನ್ನಡ ,ತುಳು ಭಾಷೆಗಳಿದ್ದು ವ್ಯವಸ್ಥಿತ ಕಾಯ೯ತ೦ತ್ರದಲ್ಲಿ ಸ್ಥಳೀಯರು ಇರುವುದು ಮತ್ತು ಉತ್ತರ ಭಾರತದ ವ್ಯಕ್ತಿಗಳ ಮೂಲಕ ಫೇಕ್ ಅಕೌ೦ಟ್ ಗಳಲ್ಲಿ ಇದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಡಲಾಗುತ್ತಿದೆಯೇ ಎ೦ಬ ಬಲವಾದ ಸ೦ಶಯ ಮೂಡಿದೆ.
ನಳಿನ್ ಕುಮಾರ್ ಕಟೀಲು ಅವರು ತನ್ನ ಪರ ಪೋಸ್ಟರ್ ಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿಸಿ ಒತ್ತಡ ತರುತ್ತಿದ್ದಾರೆ ಎ೦ಬ ಅಭಿಪ್ರಾಯ ವರಿಷ್ಠ ನಾಯಕರಲ್ಲಿ ಬರುವ೦ತೆ ಮಾಡಿದರೆ ಪಕ್ಷದ ಹೈಕಮಾ೦ಡ್‌ನಲ್ಲಿ ಅವರ ಬಗ್ಗೆ ನೆಗೆಟಿವ್ ಅಭಿಪ್ರಾಯ ಸೃಷ್ಠಿಯಾಗುತ್ತದೆ . ಆ ಮೂಲಕ ಅವರಿಗೆ ಬಿಜೆಪಿ ಟಕೇಟು ನಿರಾಕರಿಸಲಾಗುತ್ತದೆ ಎ೦ಬ ಕುತ೦ತ್ರ ದುಷ್ಕಮಿ೯ಗಳಾದ್ದಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕನಾಗಿದ್ದ ನಳಿನ್ ಕುಮಾರ್ ಕಟೀಲು ಅವರು ಯಾವುದೇ ರಾಜಕೀಯ ಸ್ಥಾನಮಾನಗಳಿಗೆ ಆಸೆಪಟ್ಟು ರಾಜಕೀಯಕ್ಕೆ ಬಂದವರಲ್ಲ. ಪಕ್ಷವನ್ನು ಸಂಘಟಿಸಬೇಕು, ತಳಮಟ್ಟದಿಂದ ಗಟ್ಟಿಗೊಳಿಸಬೇಕು ಎಂಬ ಏಕೈಕ ಉದ್ದೇಶದಿಂದ ಮತ್ತು ಸಂಘದ ಆದೇಶದಂತೆ ರಾಜಕೀಯಕ್ಕೆ ಬಂದವರು. ನಳಿನ್ ಕುಮಾರ್ ಕಟೀಲ್ ಅವರ ಜನಪ್ರಿಯತೆಯನ್ನು ಸಹಿಸದ ಕೆಲವು ಸ್ಥಾಪಿತ ಹಿತಾಸಕ್ತಿಗಳು, ಹಿಂದುತ್ವ ವಿರೋಧಿಗಳು ಅಪಪ್ರಚಾರಗಳನ್ನು ಹರಿಯಬಿಟ್ಟು ಅವರ ವಿರುದ್ದ ಷಡ್ಯಂತ್ರ್ಯಗಳನ್ನು ನಡೆಸಿ ಸಾಮಾಜಿಕ ಜಾಲ ತಾಣಗಳಲ್ಲಿ ಇದನ್ನು ಹರಿಯಬಿಟ್ಟು ಅವರ ತೇಜೋವಧೆ ನಡೆಸುವ, ಅವರ ಬಗ್ಗೆ ಕಾರ್ಯಕರ್ತರಲ್ಲಿ ಅಪನಂಬಿಕೆ ಸೃಷ್ಠಿಸುವ ಪ್ರಯತ್ನಗಳನ್ನು ನಡೆಸಿದ್ದರು. ಆದರೆ ನಳಿನ್ ಕುಮಾರ್ ಅವರ ಪಕ್ಷ ನಿಷ್ಠೆ, ಕಾರ್ಯಕರ್ತರ ಬಗ್ಗೆ ಅವರಿಗೆ ಇರುವ ಪ್ರೀತಿ, , ಕಾಳಜಿಯನ್ನು ತಿಳಿದಿದ್ದ ಕಾರ್ಯಕರ್ತರು , ಪಕ್ಷದ ನಾಯಕರು ಇದಕ್ಕೆ ಯಾವುದೇ ಬೆಲೆ ಕೊಡದೇ ಇದನ್ನು ವಿಫಲಗೊಳಿಸಿದ್ದರು.
Leave A Reply