ಉಳ್ಳಾಲ ಠಾಣಾಧಿಕಾರಿ ವಿರುದ್ಧ ಪ್ರಕರಣ ದಾಖಲು
ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಮಹಿಳಾ ಕಾರ್ಯದರ್ಶಿಗೆ ಹಲ್ಲೆ :
ಉಳ್ಳಾಲ ಠಾಣಾಧಿಕಾರಿ ವಿರುದ್ಧ ಪ್ರಕರಣ ದಾಖಲು
ಉಳ್ಳಾಲ: ಟ್ರಸ್ಟ್ ಅಧೀನದ ಜಾಗಕ್ಕೆ ಬೇಲಿ ಹಾಕುವ ಸಂದರ್ಭ ಟ್ರಸ್ಟ್ ನ ಮಹಿಳಾ ಕಾರ್ಯದರ್ಶಿಗೆ ತಡೆಯೊಡ್ಡಿ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿರುವ ಉಳ್ಳಾಲ ಠಾಣಾಧಿಕಾರಿ ಹೆಚ್. ಎನ್ ಬಾಲಕೃಷ್ಣ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ IPC 1860 (U/s-354,506,323) ರಡಿ ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡದ ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಗೆ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ, ಸರ್ವೆ ನಂ. 149/* ರಲ್ಲಿ, ಸುಮಾರು 2 ಎಕರೆ ಜಮೀನು ಮಂಜೂರಾಗಿರುತ್ತದೆ. ಜ.26 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಟ್ರಸ್ಟ್‌ನ ಕಾರ್ಯದರ್ಶಿ ಲತಾ ರೈ ಹಾಗೂ ಸದಸ್ಯರಾದ ಡಾ.ಸಿ.ಎನ್.ಶಂಕರ್ ರಾವ್, ಪ್ರೊ.ಕೆ.ಎಂ.ಬಾಲಕೃಷ್ಣ, ಜಗದೀಶ್ ಕಾಪುಮಲೆ ಎಂಬವರೊಂದಿಗೆ ಟ್ರಸ್ಟ್ ನ ಜಾಗದ ಗಡಿಯಲ್ಲಿ, ಬೇಲಿ ಹಾಕಲು ಸೈಟ್ ಗೆ ತೆರಳಿದ ಸಮಯ ಸುಮಾರು 11 ಗಂಟೆಗೆ ಅಂದು ಕೊಣಾಜೆ ಠಾಣೆಯ ಜವಾಬ್ದಾರಿ ಹೊಂದಿದ್ದ ಉಳ್ಳಾಲದ ಸರ್ಕಲ್ ಇನ್ಸ್‌ಕ್ಟರ್ ಬಾಲಕೃಷ್ಣ, ಎಚ್ ಎನ್ ರವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಸೈಟ್‌ನಲ್ಲಿದ್ದವರೆಲ್ಲರನ್ನೂ ನಿಂದಿಸಿ ಅವಾಚ್ಯ ಶಬ್ದಗಳಿಂದ ಬೈದು , ಲತಾ ರೈ ಅವರು ಹೈಕೋರ್ಟ್ ಆದೇಶದ ಬಗ್ಗೆ ತಿಳಿಸಿದರೂ ಕೂಡಾ ಅದನ್ನು ಒಪ್ಪಿಕೊಳ್ಳದೇ ಸೈಟ್‌ನಲ್ಲಿ ಕೆಲಸಗಳನ್ನು ನಿಲ್ಲಿಸಲು ಇಲಾಖೆಯ ಮೇಲಾಧಿಕಾರಿಗಳ ಆದೇಶವಿದೆ ಎಂದು ಅವರು ಹೇಳಿ, ಅವರ ಕೈಗೆ ಹೊಡೆದು, ಕೈಯನ್ನು ಎಳೆದು ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ಎಳೆದು ನೆಲದ ಮೇಲೆ ಹೊಡೆದು ಫೋನ್ ಒಡೆಯಲು ಪ್ರಯತ್ನಿಸಿದ್ದಾರೆ. ರಕ್ಷಣೆಗೆ ಬಂದ ಅಭಿಷೇಕ್ ಭಂಡಾರಿ ಎಂಬವರಿಗೆ ಸರ್ಕಲ್ ಇನ್ಸ್ ಪೆಕ್ಟರ್ ರವರು ಹೊಡೆದು, ಘಟನೆಯನ್ನು ರೆಕಾರ್ಡ್ ಮಾಡುವಾಗ ಅವರ ಫೋನ್ ಕಿತ್ತುಕೊಳ್ಳಲು ಪ್ರಯತ್ನಿಸಿ ಅವರನ್ನು ತಳ್ಳಿ, ದೊಡ್ಡ ಧ್ವನಿಯಲ್ಲಿ ಕೂಗುತ್ತಾ ಬೆದರಿಕೆ ಹಾಕಿ ಎಲ್ಲರನ್ನು ಬಂಧಿಸುವುದಾಗಿ ಬೆದರಿಸಿ ಪೋಲೀಸ್ ವ್ಯಾನ್‌ನಲ್ಲಿ ಹಾಕುವಂತೆ ಪೊಲೀಸ್ ಸಿಬ್ಬಂದಿಯವರಿಗೆ ತಿಳಿಸಿದ್ದಾರೆ. ಈ ಕುರಿತು ಲತಾ ರೈ ನೀಡಿರುವ ದೂರಿನಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave A Reply