ಮಾಧ್ಯಮಗಳು ಮೋದಿಪರ ಎಂಬ ಟೀಕೆಗೆ ಇಲ್ಲಿದೆ ಉತ್ತರ!
ಮಾಧ್ಯಮಗಳು ವಿಪಕ್ಷಗಳ ಪಾತ್ರವನ್ನೇ ವಹಿಸಬೇಕಾಗಿಲ್ಲ ಎಂದು ಇಂಡಿಯಾ ಟುಡೇ ಗ್ರೂಪ್ ಉಪಾಧ್ಯಕ್ಷೆ ಕಾಳ್ಳಿ ಪುರಿ ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮಗಳು ಮೋದಿಯವರನ್ನೇ ಹೈಲೈಟ್ ಮಾಡುತ್ತಿವೆ ಎನ್ನುವ ಆರೋಪಗಳನ್ನು ಕಾಂಗ್ರೆಸ್ಸಿಗರು ಮಾಡುತ್ತಲೇ ಬಂದಿದ್ದಾರೆ. ವಿಪಕ್ಷಗಳಿಗೆ ಮಾಧ್ಯಮಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎನ್ನುವ ಟೀಕೆ, ವ್ಯಂಗ್ಯಗಳನ್ನು ಮಾಧ್ಯಮಗಳು ಎದುರಿಸುತ್ತಿವೆ. ಕೆಲವರು ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿಯವರ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತಿರುವುದರಿಂದ ಮೋದಿಯವರ ಮೈಲೇಜ್ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ಹೇಳುತ್ತಾ ಬಂದಿದ್ದಾರೆ. ಕೆಲವರು ಮೋದಿಯವರ ಕಾರ್ಯಕ್ರಮಗಳನ್ನು ತೋರಿಸುವ ಮಾಧ್ಯಮಗಳಿಗೆ ಗೋಧಿ ಮೀಡಿಯಾ ಎಂದು ಹಣೆಪಟ್ಟಿ ಕಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿರುವ ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ಇಂಡಿಯಾ ಗ್ರೂಪ್ ಇದರ ಉಪಾಧ್ಯಕ್ಷೆ ಕಾಳ್ಳಿ ಪುರಿಯವರು ಗೋಧಿ ಮೀಡಿಯಾ, ಮೋದಿ ಮೀಡಿಯಾ ಹೀಗೆ ಏನೇನೋ ವರ್ಗಿಕರಣ ಮಾಡುವುದು ಸರಿಯಲ್ಲ, ದೇಶದ ಪ್ರಜಾಪ್ರಭುತ್ವದಲ್ಲಿ ಪ್ರಬಲವಾಗಿರಬೇಕಾದ ವಿಪಕ್ಷಗಳು ಅಸ್ತವ್ಯಸ್ತವಾಗಿ ತಮ್ಮೊಳಗೆ ಎಲ್ಲವೂ ಸರಿಯಿಲ್ಲ ಎಂದು ಜನಸಾಮಾನ್ಯರ ಕಣ್ಣಿಗೂ ಕಾಣುವಂತೆ ವರ್ತಿಸುತ್ತಿರುವಾಗ ಮಾಧ್ಯಮಗಳನ್ನು ದೂರುವುದು ಸರಿಯಲ್ಲ. ಆಡಳಿತ ಪಕ್ಷದಷ್ಟೇ ವಿಪಕ್ಷಗಳು ಸ್ಟ್ರಾಂಗ್ ಆಗಿದ್ದರೆ ಆಗ ಅವುಗಳಿಗೂ ಮಾಧ್ಯಮಗಳಲ್ಲಿ ಅಷ್ಟೇ ಪ್ರಾಧ್ಯಾನತೆ ಕೊಡಲು ಸಾಧ್ಯ. ಇಲ್ಲದೆ ಹೋದರೆ ತಾವಾಗಿಯೇ ಮಾಧ್ಯಮಗಳು ಏನು ಮಾಡಲು ಆಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮಗಳು ಬಾಕ್ಸಿಂಗ್ ಅಂಕಣದಲ್ಲಿ ನಡೆಯುವ ಜಂಗಿ ಕುಸ್ತಿಯ ವೀಕ್ಷಕರು ಅಷ್ಟೇ ವಿನ: ತಾವೇ ಸ್ವತ: ಆಟಗಾರರಲ್ಲ. ಒಂದು ವೇಳೆ ಒಂದು ಸೈಡ್ ದುರ್ಬಲವಾಗಿದ್ದರೆ, ಮಾಧ್ಯಮಗಳೇ ಅಂಗಣದೊಳಗೆ ನುಗ್ಗಿ ವೀಕ್ ತಂಡವನ್ನು ಎತ್ತಿ ಹಿಡಿಯಲು ಅಸಾಧ್ಯ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ದೇಶದಲ್ಲಿ ವಿಪಕ್ಷಗಳು ತಾವಾಗಿಯೇ ಗಟ್ಟಿತನವನ್ನು ತೋರಿಸದೇ ಹೋದಲ್ಲಿ ತಮ್ಮನ್ನು ಎತ್ತಿಹಿಡಿಯಿರಿ ಎಂದು ಮಾಧ್ಯಮಗಳನ್ನು ಸಹಾಯಕ್ಕೆ ಕರೆಯುವುದು ನಂತರ ತಮಗೆ ಪ್ರಾತಿನಿಧ್ಯ ಕೊಡಲಿಲ್ಲ ಎಂದು ದೂರುವುದು ಎಷ್ಟು ಸರಿ ಎಂದು ವಿಪಕ್ಷಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
Leave A Reply