ಸಿಎಎನಿಂದ ಸಿಕ್ಕಿತ್ತು ಭಾರತೀಯ ಪೌರತ್ವ!
Posted On March 20, 2024
ಪಾಕಿಸ್ತಾನದಲ್ಲಿ ನಡೆಯುತ್ತಿರುವ ದೌರ್ಜನ್ಯದಿಂದ ಬೇಸತ್ತು ಭಾರತಕ್ಕೆ ಬಂದು ಅಹಮದಾಬಾದಿನಲ್ಲಿ ನೆಲೆಸಿದ್ದ ಹದಿನೆಂಟು ಪಾಕಿಸ್ತಾನಿ ಹಿಂದೂಗಳಿಗೆ ಗುಜರಾತ್ ಗೃಹಸಚಿವ ಹರ್ಷ್ ಸಾಂಗ್ವಿ ಅವರು ಭಾರತೀಯ ಪೌರತ್ವ ನೀಡಿದರು. ಅದರೊಂದಿಗೆ ಅಗತ್ಯವಿರುವ ದಾಖಲೆ ಪ್ರಮಾಣಪತ್ರಗಳನ್ನು ಕೂಡ ಸಚಿವರು ಹಸ್ತಾಂತರಿಸಿದರು. ಅಂದಾಜು 1200 ಹಿಂದೂ ನಿರಾಶ್ರಿತರು ಗುಜರಾತ್ ರಾಜ್ಯದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದು, ಅವರಿಗೆ ಭಾರತೀಯ ಪೌರತ್ವವನ್ನು ಮಾನ್ಯ ಮಾಡಲಾಗಿದೆ.
ಸಿಎಎ ಕಾನೂನನ್ನು ಲೋಕಸಭಾ ಚುನಾವಣೆಯ ಮೊದಲು ಜಾರಿಗೆ ತರುತ್ತೇವೆ ಎಂದು ದೇಶದ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಅವರು ತಮ್ಮ ಮಾತಿನಂತೆ ನಡೆದುಕೊಂಡಿದ್ದಾರೆ. 2014 ರ ಮೊದಲು ಭಾರತಕ್ಕೆ ಬಂದ ನೆಲೆಸಿರುವ ಹಿಂದೂ, ಕ್ರೈಸ್ತ, ಸಿಖ್, ಪಾರ್ಸಿ ಸಹಿತ ಮುಸ್ಲಿಮೇತರ ಧರ್ಮದವರಿಗೆ ಈ ಕಾನೂನಿನಡಿಯಲ್ಲಿ ಭಾರತದ ಪೌರತ್ವವನ್ನು ನೀಡಲಾಗುತ್ತದೆ. ಇದರಿಂದ ಅವರು ಭಾರತೀಯ ಪ್ರಜೆಗಳಂತೆ ಇಲ್ಲಿ ಬದುಕಲು, ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply