ಐಸಿಸ್ ಮುಖ್ಯಸ್ಥನ ಬಂಧನ!
ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಭಾರತದ ಮುಖ್ಯಸ್ಥ ಹಾಗೂ ಆತನ ಆಪ್ತರನ್ನು ಭಾರತದಲ್ಲಿ ಬಂಧಿಸುವಲ್ಲಿ ನಮ್ಮ ರಕ್ಷಣಾ ಪಡೆಗಳು ಯಶಸ್ವಿಯಾಗಿವೆ. ಅಸ್ಸಾಂನ ದುಬ್ರಿ ಜಿಲ್ಲೆಯಲ್ಲಿ ಬಾಂಗ್ಲಾದೇಶದಿಂದ ನುಸುಳಿ ಭಾರತಕ್ಕೆ ಬಂದು ತಲೆಮರೆಸಿಕೊಂಡಿದ್ದ ಈ ಉಗ್ರರನ್ನು ಬಂಧಿಸಲಾಗಿದೆ.
ಆರೋಪಿ ಹ್ಯಾರಿಸ್ ಫರೂಖಿ ಆಲಿಯಾಸ್ ಹರೀಶ್ ಅಜ್ಮಲ್ ಫಾರೂಖಿಯನ್ನು ಮೂಲತ: ಡೆಹ್ರಾಡೂನ್ ನ ಚಕಾರ್ತದವನು ಎಂದು ಹೇಳಲಾಗುತ್ತಿದೆ. ಅಸ್ಸಾಂನ ಪೊಲೀಸ್ ನ ವಿಶೇಷ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಣಾಬಜ್ಯೋತಿ ಗೋಸ್ವಾಮಿ ” ನಾವು ಧರ್ಮಾಶಾಲಾದಲ್ಲಿ ಗುಪ್ತ ಮಾಹಿತಿಯಿಂದ ಈ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ” ಎಂದು ತಿಳಿಸಿದರು.
ಇದು ಸದ್ಯದ ಮಟ್ಟಿಗೆ ಭಾರತೀಯ ಜನತಾ ಪಾರ್ಟಿಗೆ ಚುನಾವಣೆಯ ಸಂದರ್ಭದಲ್ಲಿ ಸಿಕ್ಕಿದ ಅತೀ ದೊಡ್ಡ ಮೈಲೇಜ್ ಆಗಿದೆ. ರಾಷ್ಟ್ರೀಯ ತನಿಖಾದಳಕ್ಕೆ ಮೋಸ್ಟ್ ವಾಟೆಂಡ್ ಉಗ್ರಗಾಮಿಗಳಾಗಿದ್ದ ಈ ಐಸಿಸ್ ಭಯೋತ್ಪಾದಕರು ಕೆಲ ಸಮಯದಿಂದ ಬಾಂಗ್ಲಾದೇಶದಲ್ಲಿ ಅವಿತುಕೊಂಡಿದ್ದರು. ಕೆಲವು ದಿನಗಳ ಹಿಂದೆ ಈ ಉಗ್ರರು ಭಾರತಕ್ಕೆ ಬಂದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಏನಾದರೂ ದುಷ್ಕರ್ತ್ಯ ಮಾಡುವ ಸಾಧ್ಯತೆ ಇತ್ತು. ಈ ಉಗ್ರಗಾಮಿಗಳ ಬಂಧನದಿಂದ ಭಾರತೀಯರು ನಿಟ್ಟುಸಿರುಪಡುವಂತಾಗಿದೆ.
Leave A Reply