ಕಾಂಗ್ರೆಸ್ ಸಚಿವರ ಪತ್ನಿ, ಮಕ್ಕಳಿಗೆ, ಸಹೋದರರಿಗೆ ಟಿಕೆಟ್!!
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ಸಚಿವರುಗಳ ಕುಟುಂಬಸ್ಥರಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧರಿಸಿದೆ. ರಾಜ್ಯದ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರ ಮಗಳು ಜಯನಗರ ಶಾಸಕಿ ಸೌಮ್ಯ ರೆಡ್ಡಿಯವರಿಗೆ ಬೆಂಗಳೂರು ದಕ್ಷಿಣದಿಂದ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಮಗಳು ಪ್ರಿಯಾಂಕಾ ಜಾರಕಿಹೊಳಿಯವರಿಗೆ ಚಿಕ್ಕೋಡಿಯಿಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಮಗ ಮೃಣಾಲ್ ಅವರಿಗೆ ಬೆಳಗಾಂನಿಂದ ಟಿಕೆಟ್ ಸಿಗಲಿದೆ .
ಕೃಷಿ ಸಚಿವ ಶಿವಾನಂದ ಪಾಟೀಲ್ ಅವರ ಮಗಳು ಸಂಯುಕ್ತಾ ಅವರಿಗೆ ಬಾಗಲಕೋಟೆಯಿಂದ, ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರ ಮಗ ಸಾಗರ್ ಖಂಡ್ರೆಯವರಿಗೆ ಬೀದರ್ ನಿಂದ, ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ರಾಧಾಕೃಷ್ಣ ದೊಡ್ಡಮನಿಯವರಿಗೆ ಕಲ್ಬುರ್ಗಿಯಿಂದ, ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರ ಸೊಸೆ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ ದಾವಣಗೆರೆಯಿಂದ, ಮಾಜಿ ರಾಜ್ಯಸಭಾ ಸದಸ್ಯರಾದ ಕೆ ರೆಹಮಾನ್ ಅವರ ಮಗ ಮನ್ಸೂರ್ ಅಲಿ ಖಾನ್ ಅವರನ್ನು ಬೆಂಗಳೂರು ಸೆಂಟ್ರಲ್ ನಿಂದ, ಸಚಿವ ಎಚ್ ಸಿ ಮಹದೇವಪ್ಪನವರ ಮಗ ಸುನೀಲ್ ಬೋಸ್ ಅವರಿಗೆ ಚಾಮರಾಜಪೇಟೆಯಿಂದ ಹೀಗೆ ಪಟ್ಟಿ ಇನ್ನೂ ಬೆಳೆಯುತ್ತಿದೆ.
ಒಟ್ಟು ಎಂಟರಿಂದ ಹತ್ತು ಸಚಿವರುಗಳ ಕುಟುಂಬದವರಿಗೆ ಟಿಕೆಟ್ ಕೊಡುವ ಸಾಧ್ಯತೆ ದಟ್ಟವಾಗಿದೆ. ಕೆಲವೇ ಹೊತ್ತಿನಲ್ಲಿ ಅಧಿಕೃತ ಘೋಷಣೆ ಆಗಲಿದ್ದು ಕಾಂಗ್ರೆಸ್ ಕಾರ್ಯಕರ್ತರು ಕೇವಲ ಕಾರ್ಯಕರ್ತರಾಗಿಯೇ ಇರಬೇಕಾ ಎನ್ನುವುದಕ್ಕೆ ಉತ್ತರ ಸಿಗಲಿದೆ. ರಾಜ್ಯದ ಪ್ರಭಾವಿ ಸಚಿವರುಗಳನ್ನು ಕಣಕ್ಕೆ ಇಳಿಸಿ ಹೆಚ್ಚಿನ ಸೀಟುಗಳಲ್ಲಿ ಜಯಗಳಿಸಲು ಎರಡು ತಿಂಗಳ ಹಿಂದೆ ರಣತಂತ್ರ ಹೆಣೆಯಲಾಗಿತ್ತು. ಆದರೆ ಯಾವುದೇ ಸಚಿವರು ಈ ಸವಾಲಿಗೆ ಸಿದ್ಧರಿಲ್ಲ. ಅದರ ಬದಲು ತಮ್ಮ ಕುಟುಂಬದವರಿಗೆ ಕೊಟ್ಟರೆ ಗೆಲ್ಲಿಸಿ ತರುತ್ತೇವೆ ಎಂದು ಹೈಕಮಾಂಡಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
Leave A Reply