ಕಾಲೇಜು ಶೌಚಾಲಯದಲ್ಲಿ ವಿಡಿಯೋ: ವಿದ್ಯಾರ್ಥಿನಿಯರ ಕೃತ್ಯ ದೃಢ
ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಟಾಯ್ಲೆಟಿನಲ್ಲಿ ಮೊಬೈಲ್ ಇಟ್ಟು ಅದರಿಂದ ವಿಡಿಯೋ ಮಾಡಿದ್ದ ಪ್ರಕರಣ ಈಗ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಈ ಬಗ್ಗೆ ರಾಜ್ಯ ಸರಕಾರ ಸಿಐಡಿಗೆ ತನಿಖೆ ಮಾಡಲು ಸೂಚಿಸಿತ್ತು. ಪ್ರಕರಣದ ಸಂಬಂಧ ಸಿಐಡಿ ಅಧಿಕಾರಿಗಳು ಉಡುಪಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಶಬನಾಜ್, ಅಲ್ಫಿಯಾ ಹಾಗೂ ಅಲಿಮತ್ ಉಲ್ ಶಫಾ ಎಂಬ ವಿದ್ಯಾರ್ಥಿನಿಯರು ಸಹಪಾಠಿಯ ವಿಡಿಯೋ ಚಿತ್ರೀಕರಣ ಮಾಡಿರುವುದು ದೃಢಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ.
ಆರೋಪಿಗಳು ಬೇರೆ ಯುವತಿಯ ಟಾಯ್ಲೆಟ್ ವಿಡಿಯೋ ಮಾಡಲು ಪ್ಲಾನ್ ಮಾಡಿದ್ದರು. ಆದರೆ ಅದರಲ್ಲಿ ಇನ್ನೊರ್ವ ಯುವತಿಯ ವಿಡಿಯೋ ಚಿತ್ರೀಕರಣವಾಗಿತ್ತು. ಕೂಡಲೇ ವಿಡಿಯೋ ಡಿಲೀಟ್ ಮಾಡಿ ಸಂತ್ರಸ್ತೆಗೆ ವಿಡಿಯೋ ಮಾಡಿರುವ ವಿಚಾರ ತಿಳಿಸಿ ಕ್ಷಮೆಯಾಚಿಸಿದ್ದರು. ಆದರೆ ಈ ವಿಷಯ ಕಾಲೇಜಿನ ಆಡಳಿತ ಮಂಡಳಿಗೆ ಗೊತ್ತಾಗಿದೆ. ಅವರು ವಿದ್ಯಾರ್ಥಿನಿಯರನ್ನು ವಿಚಾರಣೆಗೆ ಒಳಪಡಿಸಿದಾಗ ವಿಡಿಯೋ ಮಾಡಿರುವುದು ಗೊತ್ತಾಗಿದೆ. ಆಡಳಿತ ಮಂಡಳಿಯ ಸೂಚನೆ ಪ್ರಕಾರ ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದರು. ಇದೆಲ್ಲಾ ನಡೆದದ್ದು 2023 ರ ಜುಲೈ 18 ರಂದು.
ಆ ದಿನಗಳಲ್ಲಿ ಇದು ಕರಾವಳಿಯಲ್ಲಿ ಬಹಳ ದೊಡ್ಡ ಸುದ್ದಿಯಾಗಿ ರಾಜ್ಯಮಟ್ಟದಲ್ಲಿಯೂ ಸಾಕಷ್ಟು ಗಮನ ಸೆಳೆದಿತ್ತು. ಕೇಸರಿಪಡೆಗಳು ಸಾಕಷ್ಟು ಪ್ರತಿಭಟನೆ ನಡೆಸಿದ್ದವು. ಅಂತಿಮವಾಗಿ ಸಿಐಡಿ ಅಧಿಕಾರಿಗಳು ಚಾರ್ಚ್ ಶೀಟ್ ಸಲ್ಲಿಸಿದ್ದಾರೆ. ಜತೆಗೆ ಕಾಲೇಜಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ವಿದ್ಯಾರ್ಥಿನಿಯರ ಮೇಲಿನ ಆರೋಪಗಳಿಗೆ ಪೂರಕವಾಗಿದೆ ಎಂದು ಉಲ್ಲೇಖಿಸಲಾಗಿದೆ.
Leave A Reply