ಸಹಕಾರಿ ಬ್ಯಾಂಕುಗಳಲ್ಲಿರುವ ಜನಸಾಮಾನ್ಯರ ಹಣ ಕೊಳ್ಳೆಹೊಡೆಯಲಾಗಿದೆ ಎಂದ ಬಿಜೆಪಿ ಅಭ್ಯರ್ಥಿ!
ಪ್ರಧಾನಿ ನರೇಂದ್ರ ಮೋದಿಯವರು ಕೇರಳದ ಅಳತ್ತೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಸರಸು ಅವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದರು. ಈ ಸಂದರ್ಭದಲ್ಲಿ ಕೇರಳದ ವಸ್ತುಸ್ಥಿತಿಯನ್ನು ವಿವರಿಸಿದ ಸರಸು ಅವರು ” ಕೇರಳದಲ್ಲಿರುವ ಸಹಕಾರಿ ಬ್ಯಾಂಕುಗಳು ಸಿಪಿಐ(ಎಂ} ಮುಖಂಡರ ಆಡಳಿತದಲ್ಲಿವೆ. ಅವರು ಜನಸಾಮಾನ್ಯರು ಬ್ಯಾಂಕಿನಲ್ಲಿಟ್ಟಿರುವ ಡೆಪಾಸಿಟ್ ಗಳನ್ನು ಲೂಟಿ ಹೊಡೆಯುತ್ತಿದ್ದಾರೆ. ಇದರಿಂದ ಪಾಪದ ಜನ ತಮ್ಮ ಡೆಪಾಸಿಟ್ ಹಿಂತೆಗೆದುಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಅನೇಕ ದೂರುಗಳು ಜನರಿಂದ ಬರುತ್ತಿವೆ. ಇದಕ್ಕೆ ತಾವು ಏನಾದರೂ ಕ್ರಮ ತೆಗೆದುಕೊಳ್ಳಬಹುದೇ?” ಎಂದು ವಿನಂತಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮೋದಿಯವರು ” ಚುನಾವಣೆಯ ಮೊದಲೇ ಕೇವಲ ಅಭ್ಯರ್ಥಿಯಾಗಿ ನೀವು ಜನಸಾಮಾನ್ಯರ ಬಗ್ಗೆ ಇಷ್ಟು ಕಾಳಜಿ ವಹಿಸುತ್ತಿರುವುದು ನಿಜಕ್ಕೂ ಖುಷಿಯ ವಿಷಯ. ಇದು ಜನಸೇವಕರ ಉತ್ತಮ ಲಕ್ಷಣವೂ ಹೌದು. ತಾವು ಹೇಳಿರುವ ವಿಷಯ ನನ್ನ ಅರಿವಿಗೆ ಬಂದಿದೆ. ಈ ಬಗ್ಗೆ ಕೊಂಚ ಮಾಹಿತಿ ನನ್ನ ಬಳಿ ಇದೆ. ಅನೇಕ ಬಡ ಕುಟುಂಬಗಳು ಇದರಿಂದ ನಷ್ಟಕ್ಕೆ ಒಳಗಾಗಿರುವುದು ನಿಜ. ನಮ್ಮ ಸರಕಾರ ಈ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಇದರಲ್ಲಿ ಭಾಗಿಯಾಗಿರುವ ಎಲ್ಲರಿಗೂ ಶಿಕ್ಷೆ ಅನುಭವಿಸುವ ಹಾಗೆ ಮಾಡಿ ಬಡವರ ಹಣ ಅವರಿಗೆ ಮರಳಿಸುವ ಕೆಲಸ ಮಾಡಲಿದೆ. ನಾನು ಈ ಬಗ್ಗೆ ಕಾನೂನಾತ್ಮಕ ಸಲಹೆಗಳನ್ನು ಪಡೆಯುವೆ. ಒಂದು ವೇಳೆ ಜನಸಾಮಾನ್ಯರ ಹಣ ಹಿಂದಿರುಗಿಸಲು ಆರೋಪಿಗಳ ಆಸ್ತಿಯನ್ನು ಕೂಡ ಮುಟ್ಟುಗೋಲು ಹಾಕಲು ಇಡಿ ಮುಂದಾದರೆ ಆಗ ಪ್ರತಿ ಅಸಹಾಯಕರ ಹಣ ಅವರಿಗೆ ಹಿಂದಿರುಗಿಸುವ ಕೆಲಸವೂ ನಡೆಯಲಿದೆ. ನಾವು ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.
Leave A Reply