• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ಸರ್ವಶ್ರೇಷ್ಠ ಹಿಂದೂಧರ್ಮದ ಆಚಾರ ಪದ್ಧತಿ ದೋತಿಯ ಧರಿಸುವ ಬಗ್ಗೆ ನಿಮಗೆ ತಿಳಿದಿದೆಯೇ?

TNN Correspondent Posted On September 1, 2017
0


0
Shares
  • Share On Facebook
  • Tweet It

ಮೋಹನ ಗೌಡ,
ಹಿಂದೂ ಜನಜಾಗೃತಿ ಸಮಿತಿ, ಬೆಂಗಳೂರು
ಹೇಗೆ ಧರಿಸಬೇಕು? ಧರಿಸುವುದರಿಂದ ಏನು ಪ್ರಯೋಜನ ಆಗುತ್ತದೆ? ಎಂಬುದನ್ನು ವೈಜ್ಞಾನಿಕ ಉಪಕರಣದಿಂದ ಶೋಧನೆ ಮಾಡಿದ ಸಂಶೋಧನೆಯ ಆಧ್ಯಾತ್ಮಿಕ ಮಾಹಿತಿ ಇದೆ. ಇದರಿಂದ ಹಿಂದೂಧರ್ಮದ ಸಾತ್ವಿಕ ಉಡುಗೆ ತೊಡುಗೆಗಳ ಪದ್ದತಿ ಸಂರಕ್ಷಣೆ ಆಗುವುದು. ಇದು ನಮ್ಮ ಧರ್ಮಕರ್ತವ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಮನೆಯಲ್ಲಿ ಏನೇ ಶುಭ ಕಾರ್ಯ/ ದೇವಸ್ಥಾನದ ಕಾರ್ಯಕ್ರಮ ಮುಂತಾದ ಮಂಗಳ ಕಾರ್ಯದಲ್ಲಿ ಹಿಂದೂಗಳು ಲುಂಗಿಯನ್ನು ಧರಿಸುತ್ತಾರೆ. ಅದರಲ್ಲಿ ವಿಶೇಷವಾಗಿ ಬಿಳಿ ಲುಂಗಿಯನ್ನು ಧರಿಸುತ್ತಾರೆ. ಕೆಲವರು ಇದು ಹಿಂದೂ ಸಂಪ್ರದಾಯ ಉಡುಪು ಎಂದು ತಿಳಿಯುತ್ತಾರೆ. ಅದರೆ ಅದು ತಪ್ಪು ಎಂಬುದು ಮುಂದಿನ ಮಾಹಿತಿಯಿಂದ ತಿಳಿಯುತ್ತದೆ. ಯಾವಾಗ ಭಾರತಕ್ಕೆ ಬ್ರಿಟಿಷ್/ ಪ್ರೆಂಚ್ ರು ಬಂದ ನಂತರ ಪ್ಯಾಂಟ್ ಧರಿಸುವ ಪದ್ದತಿ ನಾವು ಅಳವಡಿಸಿಕೊಂಡಿದ್ದೇವೋ ಅದೇ ರೀತಿಯಲ್ಲಿ ಲುಂಗಿಯನ್ನು ಸಹ ನಾವು ಮೊಗಲರು/ ಅರಬರು ಭಾರತಕ್ಕೆ ಬಂದಾಗ ಅವರಿಂದ ಕಲಿತ್ತಿದ್ದು ಎಂಬುದನ್ನು ಗಮನದಲ್ಲಿರಲಿ.
ನಾವು ಎಷ್ಟರ ಮಟ್ಟಿಗೆ ನಾವು ಇದನ್ನು ಅಳವಡಿಸಿಕೊಂಡಿದ್ದೇವೆ ಎಂದರೆ ಈಗಿನ ಪೀಳಿಗೆಗೆ ಲುಂಗಿ ಧರಿಸುವುದು ಹಿಂದೂ ಸಂಪ್ರದಾಯ/ ಆಚಾರ ವಿಚಾರ ಎನ್ನುವಷ್ಟು ಮಟ್ಟಿಗೆ ತಲುಪಿದೆ. ದೋತಿಯ ಬಗ್ಗೆ ನಮ್ಮ ವಾದವನ್ನು ಸಮರ್ಥಿಸಲು  ನಾವು ಸಾಕಷ್ಟು ಉದಾಹರಣೆಗಳು ಧಾರ್ಮಿಕವಾಗಿ / ಐತಿಹಾಸಿಕ ವಾಗಿಯೂ ಸಹಕೂಡ ಕೊಡಬಹುದು.
ಉದಾಹರಣೆಗೆ ನಾವು *ಪ್ರಥಮವಾಗಿ ನಮ್ಮ ಧರ್ಮದಲ್ಲಿ ಪ್ರಬಲವಾದ ನಂಬಿಕೆ ದೇವರುಗಳ/ ದೇವತೆಗಳ ಮೇಲೆ ಅಲ್ಲವೇ?
ನೀವು ಯಾವುದೇ ಪುರುಷ ದೇವತೆಯನ್ನು ತೆಗೆದುಕೊಳ್ಳಿ ಯಾವುದಾದರೂ ದೇವತೆಯನ್ನು ಲುಂಗಿ ಧರಿಸಿ ಅಲಂಕಾರ ಮಾಡಿದ ಕನಿಷ್ಠ ಒಂದು ಉದಾಹರಣೆ ಕೊಡಬಹುದೇ? ಉತ್ತರ ಖಂಡಿತವಾಗಿ ಇಲ್ಲ. ಇದಕ್ಕೆ ಕಾರಣ ಎಲ್ಲಾ ಪುರುಷ ದೇವತೆಗೆ ದೋತಿಯ ಅಲಂಕಾರ ಮಾತ್ರ ಮಾಡುವ ಪದ್ದತಿಯನ್ನು ನಮ್ಮ ಋಷಿಗಳು ನಮಗೆ ಹಾಕಿ ಕೊಟ್ಟಿದ್ದಾರೆ. ಅದೇ ರೀತಿಯಲ್ಲಿ ಸ್ತ್ರೀ ದೇವತೆಯನ್ನು ಸೀರೆಯಲ್ಲಿ ಅಲಂಕಾರ ಮಾಡುತ್ತಾರೆ.
 ೨. ಎರಡನೇ ಪ್ರಮುಖ ಆಧಾರ ಸಂತರು
 ಮೊಗಲರು ಬರುವ ಮೊದಲು ಅಥವಾ ಮೊಗಲ್/ ಅರಬರ ಆಕ್ರಮಣದ ಕಾಲವದಿಯ ಹಿಂದೂ ರಾಜರ/ ಹಿಂದೂ ಸಂತರ/ಉಡುಗೆಯಲ್ಲಿ  ಒಂದು ಉದಾಹರಣೆಯನ್ನು ತಾವು ಲುಂಗಿಯನ್ನು ಧರಿಸುವುದನ್ನು ಕೊಡಬಹುದೇ? ಖಂಡಿತಾ ಇಲ್ಲ.  ಆದಿಗುರು ಶಂಕರಾಚಾರ್ಯರು, ಅವರ ಭಕ್ತರು, ರಾಘವೇಂದ್ರ ಸ್ವಾಮಿಗಳು ಅಥವಾ ಇತ್ತೀಚಿನ ಸಂತರು ಕನಕದಸರು, ಪುರಂದರ ದಾಸರು, ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು.
ಅಥವಾ ೫೦ ವರ್ಷದ ಹಿಂದಿನ ತಲೆಮಾರನ್ನು ಪರಿಶೀಲಿಸಿ ಎಲ್ಲರೂ ಕಚ್ವೆಯನ್ನೇ ಧರಿಸುತ್ತಿದ್ದರು.
ಹಾಗಾದರೇ ಭಾರತದಲ್ಲಿ ವಿಶೇಷವಾಗಿ ದಕ್ಷಿಣದಲ್ಲಿ ಲುಂಗಿಯನ್ನು ಹಿಂದೂಗಳು ಧರಿಸಲು ಕಾರಣವೇನು
ಹೌದು ಇದಕ್ಕೂ ಒಂದು ಕಾರಣವಿದೆ. ಒಂದು ಅದ್ಯಯನದ ಪ್ರಕಾರ ನಮ್ಮ ಪೂರ್ವಜರು ಮೊಗಲರ/ಅರಬರ ಭಯಾನಕ ಅತ್ಯಾಚಾರ/ ಹಿಂಸೆ/ದೇವಸ್ಥಾನ ಧ್ವಂಸ/ಸ್ತ್ರೀಯರ ಅತ್ಯಾಚಾರ/ಮತಾಂತರ/ ದೌರ್ಜನ್ಯ/ಹತ್ಯೆ ಹೀಗೆ ಅನೇಕ ಚಿತ್ರಹಿಂಸೆಯನ್ನು ಅನುಭವಿಸಬೇಕಾಯಿತು. ಸಂಪೂರ್ಣ ಭಾರತ ಮೊಗಲರ ಅದಿಪತ್ಯಕ್ಕೆ ಒಳಗಾಗುವ ಭಯಾನಕ ಹಂತದಲ್ಲಿ ಇತ್ತು. ಮೊಗಲ್ ದೊರೆಗಳು ತಮ್ಮ ರಾಜ್ಯ ವಿಸ್ತಾರಕ್ಕೆ ಇಸ್ಲಾಂ ಪ್ರತಿಷ್ಠಾಪನೆಗೆ ಯಾವ ಹಂತಕ್ಕಾದರೂ ಇಳಿಯುತ್ತಿದ್ದರು. ಇತಿಹಾಸಕಾರರ ಪ್ರಕಾರ ಹಿಂದೂಗಳಿಗೆ ಇಸ್ಲಾಂಗೆ ಮತಾಂತರ ಅಥವಾ ಹತ್ಯೆ ಎರಡು ಅಯ್ಕೆ ಮಾತ್ರ ಇತ್ತು. ಅದಕ್ಕಾಗಿ ಆ ಸಂದರ್ಭದಲ್ಲಿ ನಮ್ಮ ಪೂರ್ವಜರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮುಸ್ಲಿಂರು ಹೋಲುವ ಲುಂಗಿಯನ್ನು ಧರಿಸಿ ನಾವು ಮುಸಲ್ಮಾನರು ಎಂದು ತೋರಿಸಲು ತಾತ್ಕಾಲಿಕವಾಗಿ ಕಚ್ಛೆ ಅಥವಾ ದೊತಿಯ ಬದಲು ಲುಂಗಿಯನ್ನು ಧರಿಸಲು ಆರಂಭಿಸಿದರು. ಅದರ ನಂತರ ಈ ರೂಡಿ ವ್ಯಾಪಕವಾಗಿ ಈಗ ಹಿಂದೂ ಧರ್ಮದ ಅವಿಭಾಜ್ಯ ಅಂಗ ಎನ್ನುವ ರೀತಿಯಲ್ಲಿ ಬಿಂಬನೆ ಅಗುತ್ತಿರುವುದು ಆಘಾತಕಾರಿ ಅಂಶವಾಗಿದೆ. ಈಗಲಾದರೂ, ಈ ಪೀಳಿಗೆಯು ವಾಸ್ತವ ಸತ್ಯ ಅರಿತು ಯೊಗ್ಯ ಕೃತಿ ಮಾಡುವುದು ಅತ್ಯಂತ ಅವಶ್ಯವಾಗಿದೆ.
ಅಷ್ಟೇ ಅಲ್ಲದೆ ಈ ಬಗ್ಗೆ ಗೋವಾ ಮೂಲದ *ಮಹರ್ಷಿ ಅಧ್ಯಾತ್ಮಿಕ ವಿಶ್ವ ವಿದ್ಯಾಲಯ* ಭಾರತೀಯ ಉಡುಪು ವಿದೇಶಿ ಉಡುಪು ತುಲನೆಯಲ್ಲಿ ಹೇಗೆ ಸರ್ವ ಶ್ರೇಷ್ಠ ಎಂಬುದನ್ನು ಆದ್ಯಯನ ಮಾಡಲು ವಿದೇಶಿ ಪ್ಯಾಂಟ್, ಲುಂಗಿ ಮತ್ತು ದೋತಿ ಅಥವಾ ಕಚ್ಚೆ, ಸೀರೆ ಇವುಗಳ ಮೇಲೆ ವೈಜ್ಞಾನಿಕ ಉಪಕರಣಗಳ ಆಧಾರದ ಮೇಲೆ ಸಾತ್ವಿಕ ವೈಬ್ರೇಶನ್ ಪರಿಶೀಲಿಸಿ ನೋಡಿದಾಗ ವಿದೇಶಿ ಪ್ಯಾಂಟ್ ಮತ್ತು ಲುಂಗಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ರಜೋ-ತಮೊ ಕಣಗಳು/ ವೈಬ್ರೇಶನ್ ಗಳು ಹೊರಹೊಮ್ಮುತ್ತವೆ. ಆದರೆ ದೋತಿ ಮತ್ತು ಸೀರೆಯಿಂದ ಅತ್ಯಧಿಕ ಪ್ರಮಾಣದಲ್ಲಿ ಸಾತ್ವಿಕ ಕಣಗಳು, ವೈಬ್ರೇಶನ್ ಹೊರಹೊಮ್ಮಿ ವ್ಯಕ್ತಿಯ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀಳುತ್ತದೆ ಎಂಬುದು ಗಮನಕ್ಕೆ ಬರುತ್ತದೆ. ಅದರ ಸಂಶೋಧನೆ ಚಿತ್ರವನ್ನು ಸಹ ಲಗತ್ತಿಸಲಾಗಿದೆ. ಇದನ್ನು ತಾವು ಅಬ್ಯಾಸ ಮಾಡಬಹುದು.
ನಾವೆಲ್ಲರೂ ಕನಿಷ್ಠ ಪಕ್ಷ ಹಬ್ಬ-ಉತ್ಸವ- ಶುಭ ಕಾರ್ಯಗಳಲ್ಲಿ ಲುಂಗಿ/ ಪ್ಯಾಂಟ್ ಬದಲು ದೋತಿ ತೋಡೊಣ. ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ಅಭಿಯಾನ ಮಾಡುತ್ತಿದೆ. ತಾವು ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸಿ.
ಈ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಪಡೆಯಲು ಸನಾತನ ನಿರ್ಮಿತ “ಪುರುಷರ ಬಟ್ಟಗಳು” ಗ್ರಂಥ ಓದಬಹುದು. ಅಥವಾ Www.hindujagruti. org ಸಂಕೇತ ಸ್ಥಳಕ್ಕೆ ಬೇಟಿ ಕೊಡಿ. ಅಥವಾ ನಮ್ಮ ಇಮೇಲ್ [email protected] ಅಥವಾ ನಮ್ಮ ಸಂಪರ್ಕ 7204082609 ಇದಕ್ಕೆ ಸಂಪರ್ಕ ಮಾಡಿರಿ.
0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
Tulunadu News January 10, 2026
ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
Tulunadu News January 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
  • Popular Posts

    • 1
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • 2
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • 3
      ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • 4
      ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?

  • Privacy Policy
  • Contact
© Tulunadu Infomedia.

Press enter/return to begin your search