ಜೈಲಿಗೆ ಹೋಗಲು ಅಪರಾಧಿಗಳು ಭಯಪಡುವ ಕಾಲ ಬಂದಿದೆ – ಸಿಎಂ ಯೋಗಿ
ಉತ್ತರ ಪ್ರದೇಶದಲ್ಲಿ ಈ ಹಿಂದೆ ಜಾಮೀನು ಸಿಕ್ಕಿ ಪರಾರಿಯಾಗುತ್ತಿದ್ದವರು ಈಗ ತಾವಾಗಿಯೇ ಶರಣಾಗುತ್ತಿದ್ದಾರೆ. ಅಪರಾಧಿಕ ಕೃತ್ಯಗಳಲ್ಲಿ ತೊಡಗಿದವರು ಆರಾಮವಾಗಿ ಸುತ್ತಾಡಲು ಭಯಪಡುವುದು ಮಾತ್ರ ಅಲ್ಲ, ಜೈಲಿಗೆ ಹೋಗಲು ಕೂಡ ಭಯಪಡುತ್ತಿದ್ದಾರೆ. ತಾವು ಇನ್ನು ಮುಂದೆ ಯಾವುದೇ ರೀತಿಯ ಅಪರಾಧ ಮಾಡುವುದಿಲ್ಲ. ನಮ್ಮ ಪ್ರಾಣ ಉಳಿದರೆ ನಾವು ಯಾವುದಾದರೂ ಉತ್ಪನ್ನಗಳನ್ನು ಮಾರಿ ಜೀವನ ಸಾಗಿಸುತ್ತೇವೆ ಎನ್ನುವ ಸಂದೇಶ ಇರುವ ಬೋರ್ಡ್ ಹಿಡಿದು ಬರುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.
ಅವರು ಶಂಸಾಬಾದ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಪರ ಮತ ಪ್ರಚಾರ ನಡೆಸಿ ಮಾತನಾಡುತ್ತಿದ್ದರು. ಯಾವುದೇ ರೀತಿಯ ಅಪರಾಧಿಕ ಕೃತ್ಯಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕ್ರಿಮಿನಲ್ ವ್ಯಕ್ತಿಗಳು ಅಪರಾಧವನ್ನು ನಿಲ್ಲಿಸಬೇಕು ಅಥವಾ ಅದಕ್ಕೆ ತಕ್ಕುದಾದ ಬೆಲೆಯನ್ನು ಪಾವತಿಸಲು ಸಿದ್ಧರಾಗಬೇಕು. ಈಗ ಬಹುತೇಕ ಕ್ರಿಮಿನಲ್ ಗಳು ಜೈಲಿಗೆ ಹೋಗಲು ಕೂಡ ಭಯಪಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
2017 ರ ಮೊದಲು ಪೊಲೀಸ್ ಠಾಣೆಗಳು ಕತ್ತಲಾದ ನಂತರ ಬೀಗ ಹಾಕುತ್ತಿದ್ದವು. ಸಾಮಾನ್ಯ ಜನರು ಭಯಭೀತಿಯಿಂದ ಜೀವಿಸುತ್ತಿದ್ದರು. ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿಯ ಸರಕಾರ ಬಂದ ಬಳಿಕವೂ ನಮಗೆ ಏನೂ ತೊಂದರೆ ಇಲ್ಲ ಎಂದು ಅಪರಾಧಿಗಳು ಭಾವಿಸಿದ್ದರು. ಆದರೆ ಅದಕ್ಕೆ ನಮ್ಮ ಸರಕಾರ ಅವಕಾಶ ನೀಡುವುದಿಲ್ಲ. ಕ್ರಿಮಿನಲ್ ಗಳು ಸುಧಾರಣೆಯಾಗಬೇಕು ಅಥವಾ ಅವರು ಬೆಲೆ ತೆರುವ ಆಯ್ಕೆಯನ್ನು ನೀಡಲಾಗಿದೆ ಎಂದು ಯೋಗಿ ಹೇಳಿದರು.
ಹಿಂದಿನಂತೆ ಈಗ ಗಲಭೆ, ಕರ್ಫ್ಯೂ ನಡೆಯುವುದಿಲ್ಲ. ಹಬ್ಬಗಳು, ಉತ್ಸವಗಳು ಚೆಂದ ರೀತಿಯಲ್ಲಿ ನಡೆಯುತ್ತಿವೆ. ಇದು ಮೋದಿಯ ಗ್ಯಾರಂಟಿ ಎಂದು ಅವರು ತಿಳಿಸಿದರು.
Leave A Reply