ಸುಶಾಂತ್ ಆತ್ಮ ಇದೆ ಎನ್ನುವ ವದಂತಿ ತಳ್ಳಿ ಹಾಕಿ ಮನೆ ಖರೀದಿ ಮಾಡಿದ್ಲಾ ಚೆಲುವೆ?
ಬಾಲಿವುಡ್ ನಲ್ಲಿ ಕಿರು ಅವಧಿಯಲ್ಲಿಯೇ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದ ಸುಶಾಂತ್ ಸಿಂಗ್ ರಾಜಪೂತ್ ಅದೆಷ್ಟೋ ಯುವತಿಯರ ಹೃದಯ ಕದ್ದದ್ದು ಸುಳ್ಳಲ್ಲ. ಆತನ ಮೋಹಕ ನಗೆಗೆ ಬೇಸ್ತು ಬಿದ್ದಿದ್ದ ನಟಿಯರು ಕಡಿಮೆ ಏನಲ್ಲ. ಅದರೆ 34 ರ ಹರೆಯದಲ್ಲಿದ್ದ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಸುಶಾಂತ್ ಬಾಲಿವುಡ್ ಪ್ರಿಯರಿಗೆ ಶಾಕ್ ನೀಡಿದ್ದರು. ಎಂ.ಎಸ್.ಧೋನಿ ಅನ್ ಟೋಲ್ಡ್ ಸ್ಟೋರಿ, ಕೇದರಾನಾಥ್, ಚಿಚ್ಚೋರೆ ಸಹಿತ ಕೆಲವು ಸಿನೆಮಾಗಳಲ್ಲಿ ಅವರು ನಟಿಸಿದ್ದಾರೆ. ಬಾಲಿವುಡ್ ಅಂಗಳದಲ್ಲಿ ನಡೆದ ರಾಜಕೀಯದಿಂದ ಈ ಉದಯೋನ್ಮುಖ ನಟ ಬೇಸರಗೊಂಡಿದ್ದರು ಎಂದು ಹೇಳಲಾಗುತ್ತಿತ್ತು. ಅದರಿಂದ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಸುಶಾಂತ್ ಸಾಯುವ ವಾರದ ಮೊದಲು ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಕೂಡ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಳು. ಈ ಬಗ್ಗೆ ಸಾಕಷ್ಟು ಚರ್ಚೆ, ತನಿಖೆ, ವಿಚಾರಣೆಗಳು ನಡೆದಿವೆ. ಅದೆಲ್ಲವೂ ಈಗ ನಿಧಾನವಾಗಿ ಜನಮಾನಸದಿಂದ ಮರೆಯಾಗುವ ಹೊತ್ತಿನಲ್ಲಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಮನೆ ಮತ್ತೆ ಸುದ್ದಿಯಾಗಿದೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನು ಖರೀದಿಸಿ ನಟಿ ಆದಾ ಶರ್ಮಾ ಅಗಲಿದ ನಟ ನೆನಪು ತಮ್ಮ ಹೃದಯದಲ್ಲಿ ಶಾಶ್ವತವಾಗಿ ಇರುವ ಸಂದೇಶವನ್ನು ನೀಡಿದ್ದಾರೆ.
ಯುವ ನಾಯಕನಟ ಸುಶಾಂತ್ ಸಿಂಗ್ ಮುಂಬೈನ ಮೋಂಟದ ಬ್ಲ್ಯಾಂಕ್ ವಸತಿ ಸಂಕೀರ್ಣದಲ್ಲಿ ಹಲವು ವರ್ಷಗಳ ಕಾಲ ವಾಸವಾಗಿದ್ದರು. 2020 ಜೂನ್ 14 ರಂದು ಅದೇ ಅಪಾರ್ಟ್ ಮೆಂಟಿನ ರೂಂನಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಅದರ ಬಳಿಕ ಸುಶಾಂತ್ ಸಿಂಗ್ ಆತ್ಮ ಅಲ್ಲಿದೆ ಎಂದು ಸುದ್ದಿ ಹಬ್ಬಿದ ಕಾರಣ ಯಾರೂ ಅಲ್ಲಿ ವಾಸ ಮಾಡಲು ಬರುತ್ತಿರಲಿಲ್ಲ. ಖಾಲಿ ಬಿದ್ದಿದ್ದ ಆ ಅಪಾರ್ಟ್ ಮೆಂಟನ್ನು ಈಗ ಕೇರಳ ಸ್ಟೋರಿ ಖ್ಯಾತಿಯ ಅದಾ ಶರ್ಮಾ ಖರೀದಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಸಮುದ್ರಕ್ಕೆ ಮುಖ ಮಾಡಿರುವ ಆ ಅಪಾರ್ಟ್ ಮೆಂಟ್ 2500 ಸ್ಕ್ವೇರ್ ಫೀಟ್ ವಿಸ್ತ್ರೀರ್ಣ ಹೊಂದಿದೆ.
Leave A Reply