ಓವೈಸಿ ವಿರುದ್ಧ ಬಿಜೆಪಿ ಅಭ್ಯರ್ಥಿಗೆ ವಿಐಪಿ ಭದ್ರತೆ!
ಹೈದ್ರಾಬಾದ್ ಲೋಕಸಭಾ ಕ್ಷೇತ್ರ ಅಸಾವುದ್ದೀನ್ ಓವೈಸಿಯ ಬಲಿಷ್ಟವಾದ ಕ್ಷೇತ್ರ. ಇಲ್ಲಿ ನಾಲ್ಕು ದಶಕಗಳಿಂದ ಆತನ ಬಿಗಿಹಿಡಿತವಿದೆ. ಇಂತಹ ಕ್ಷೇತ್ರದಲ್ಲಿ ಸನಾತನ ಸಿಂಹಿಣಿಯನ್ನು ಪ್ರಥಮ ಬಾರಿಗೆ ಭಾರತೀಯ ಜನತಾ ಪಾರ್ಟಿ ಕಣಕ್ಕೆ ಇಳಿಸಿದೆ. ಅವರ ಹೆಸರು ಕೊಂಪೆಲ್ಲಾ ಮಾಧವಿ ಲತಾ.
ತಮ್ಮ ಪ್ರಖಂಡ ನಡೆಯಿಂದ ಸುದ್ದಿಯಲ್ಲಿರುವ ಮಾಧವಿ ಲತಾ ಈ ಬಾರಿ ಓವೈಸಿಯನ್ನು ಎದುರಿಸಲಿದ್ದಾರೆ. ಆದರೆ ಇದು ಅಂದುಕೊಂಡಷ್ಟು ಸುಲಭವಲ್ಲ. ಯಾಕೆಂದರೆ ಓವೈಸಿಯ ಬೆಂಬಲಿಗರು ಯಾವ ಕಾರಣಕ್ಕೂ ಆಕೆಯ ಪ್ರಚಾರ ಕಾರ್ಯ ಯಶಸ್ವಿಯಾಗಲು ಬಿಡುವ ಸಾಧ್ಯತೆ ಇಲ್ಲ. ಈಗ ಕೇಂದ್ರ ಗುಪ್ತಚರ ಇಲಾಖೆಗೆ ಮಾಹಿತಿಗಳು ಬಂದಿರುವ ಹಿನ್ನಲೆಯಲ್ಲಿ ಕೇಂದ್ರ ಸರಕಾರದಿಂದ ಮಾಧವಿ ಲತಾ ಅವರಿಗೆ ವಿಐಪಿ ಭದ್ರತೆ ಒದಗಿಸಲಾಗಿದೆ. ಆಕೆಯನ್ನು 11 ಸಿಆರ್ ಪಿಎಫ್ ಪಡೆ ಸಿಬ್ಬಂದಿ ಕಾವಲು ಕಾಯಲಿದ್ದಾರೆ.
ಓವೈಸಿ ವಿರುದ್ಧ ಸತತ ಹೋರಾಟಗಳನ್ನು ಸಂಘಟಿಸುತ್ತಿರುವ ಮಾಧವಿ ಲತಾ ಅವರಿಂದ ಈ ಬಾರಿ ಏನಾದರೂ ಪವಾಡ ಸಂಭವಿಸಬಹುದು ಎಂದು ಬಿಜೆಪಿ ಮುಖಂಡರು ನಂಬಿದ್ದಾರೆ. ಹೈದ್ರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆದರೆ ಓವೈಸಿಯ ಸಂಸತ್ ಪ್ರವೇಶ ಕೂಡ ಮುಗಿದಂತೆ. ಆದರೆ ಅಲ್ಪಸಂಖ್ಯಾತ ಬಾಹುಳ್ಯ ಉಳ್ಳ ಹೈದ್ರಾಬಾದಿನಲ್ಲಿ ಮಾಧವಿ ಲತಾ ಅವರು ತ್ರಿವಳಿ ತಲಾಖ್ ವಿರುದ್ಧ ಬಿಜೆಪಿ ನಡೆಸಿದ ಪ್ರಚಾರದ ನೇತೃತ್ವ ವಹಿಸಿದ್ದರು. ಈ ಮೂಲಕ ಅಲ್ಪಸಂಖ್ಯಾತ ಮಹಿಳೆಯರ ಮನ ಗೆದ್ದಿರುವ ಸಾಧ್ಯತೆ ಕೂಡ ಇದೆ. ಮಾಧವಿ ಲತಾ ಹೈದ್ರಾಬಾದಿನ ವಿರಿಂಚಿ ಆಸ್ಪತ್ರೆಯ ಮುಖ್ಯಸ್ಥೆ ಹಾಗೂ ವೃತ್ತಿಪರ ಭರತನಾಟ್ಯ ಕಲಾವಿದೆ ಆಗಿದ್ದಾರೆ.
Leave A Reply