ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಮೋದಿ ಕೈಗೆತ್ತಿಕೊಳ್ಳುವ ಯೋಜನೆ!?
ನನ್ನ ಬಳಿ ಬಹಳ ದೊಡ್ಡ ಪ್ಲಾನ್ ಇದೆ. ಆದರೆ ಯಾರೂ ಈ ಬಗ್ಗೆ ಹೆದರುವ ಅಗತ್ಯ ಇಲ್ಲ. ನಾನು ತೆಗೆದುಕೊಳ್ಳುವ ಯಾವುದೇ ನಿರ್ಧಾರ ದೇಶದ ಒಟ್ಟಾರೆ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಮೂರನೇ ಬಾರಿ ಅಧಿಕಾರಕ್ಕೆ ಬಂದ ದಿನದಿಂದ ಮುಂದಿನ ನೂರು ದಿನಗಳಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಹೇಳಿದ್ದಾರೆ.
ಅವರು ಎಎನ್ ಐಗೆ ನೀಡಿದ ಸಂದರ್ಶನದಲ್ಲಿ ಈ ಮಾತನ್ನು ಹೇಳಿದ್ದಾರೆ. ಆದರೆ ಆ ಪ್ಲಾನ್ ಏನು ಮತ್ತು ಎಷ್ಟು ದೊಡ್ಡದಿದೆ ಎನ್ನುವುದನ್ನು ಮೋದಿಯವರು ಇದೇ ಮಾತನ್ನು ಕಳೆದ ಬಾರಿ ಬ್ಯಾಂಕುಗಳ ಪ್ರಮುಖರ ಸಭೆಯಲ್ಲಿಯೂ ಹೇಳಿದ್ದರು. ಲೆಕ್ಕ ಪರಿಶೋಧಕರ ಸಭೆಯಲ್ಲಿಯೂ ಹೇಳಿದ್ದರು. ಹಾಗಾದರೆ ಮೋದಿಯವರು ಏನಾದರೂ ದೊಡ್ಡ ಆರ್ಥಿಕ ಬದಲಾವಣೆಯನ್ನು ತರಲಿದ್ದಾರಾ ಎನ್ನುವ ಪ್ರಶ್ನೆ ಮತ್ತೆ ಎಲ್ಲರ ಮನಸ್ಸಿನಲ್ಲಿಯೂ ಮೂಡುತ್ತದೆ.
ಸರಕಾರಿ ಅಧಿಕಾರಿಗಳಿಗೂ ಇದೇ ಅರ್ಥದ ಮಾತನ್ನು ಮೋದಿಯವರು ಹೇಳಿದ್ದಾರೆ ಎನ್ನಲಾಗುತ್ತಿದೆ. ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನೀವು ಮೂರು ತಿಂಗಳು ಬ್ಯುಸಿಯಾಗಲಿದ್ದೀರಿ ಎನ್ನುವ ಅರ್ಥದ ಮಾತುಗಳನ್ನು ಹೇಳಿದ್ದಾರೆ. ಒಟ್ಟಿನಲ್ಲಿ ಮೋದಿಯವರ ಮನಸ್ಸಿನಲ್ಲಿ ಏನೋ ದೊಡ್ಡ ಪ್ಲಾನ್ ಇರುವುದಂತೂ ನಿಜ. ಇನ್ನು ಲಭ್ಯವಿರುವ ಮಾಹಿತಿ ಪ್ರಕಾರ ಭಾರತೀಯ ರೈಲ್ವೆಯಲ್ಲಿ ಹೊಸ ಬದಲಾವಣೆ ಮಾಡುವ ಸಾಧ್ಯತೆ ನಿಚ್ಚಳವಾಗಿದೆ. ನಿಮ್ಮ ಪ್ರಯಾಣ ರದ್ದಾದರೆ 24 ಗಂಟೆಯೊಳಗೆ ಟಿಕೆಟಿನ ಹಣ ರಿಫಂಡ್ ಮಾಡುವ ಗುರಿ, ರೈಲ್ವೆಯಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಒಂದೇ ಕಡೆ ತಿಳಿಸುವ ಆಧುನಿಕ ತಂತ್ರಜ್ಞಾನದ ಏಪ್, ಮೂರು ಕಾರಿಡಾರ್ ನಿರ್ಮಾಣ, ಸ್ಲೀಪರ್ ವಂದೇ ಭಾರತ್ ರೈಲಿನ ನಿರ್ಮಾಣ, ಶೂನ್ಯ ವೇಟಿಂಗ್ ಲಿಸ್ಟ್, 10 – 12 ಲಕ್ಷ ಕೋಟಿ ಬಂಡವಾಳ ಹೂಡಿಕೆ ಸಹಿತ ಹಲವು ಯೋಜನೆಗಳು ಮೋದಿ ಮುಂದಿವೆ ಎಂದು ಹೇಳಲಾಗುತ್ತಿದೆ. ಇನ್ನು ವಿಪಕ್ಷಗಳು ತಮ್ಮ ಸೋಲಿಗೆ ತನಿಖಾ ಸಂಸ್ಥೆಗಳೇ ಹೊಣೆ ಎನ್ನುವ ಉತ್ತರವನ್ನು ಈಗಾಗಲೇ ಸಿದ್ಧಪಡಿಸಿಕೊಂಡಿವೆ ಎಂದು ಕೂಡ ಮೋದಿಯವರು ವಿಪಕ್ಷಗಳ ಕಾಲೆಳೆದಿದ್ದಾರೆ.
ಇನ್ನು ಏಪ್ರಿಲ್ ತಿಂಗಳ ಕೊನೆಯ ಎರಡು ಭಾನುವಾರಗಳಂದು ಸಂಪೂರ್ಣವಾಗಿ ಮೋದಿಗಾಗಿ ಕೆಲಸ ಮಾಡುವಂತೆ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಕರೆ ನೀಡಿದ್ದಾರೆ.
Leave A Reply