ಆ ಹೆಣ್ಣುಮಗಳ ತಪ್ಪೇನಿದೆ?
ಬೇವಿನ ಎಲೆಯನ್ನು ಸಕ್ಕರೆ ನೀರಿನಲ್ಲಿ ಮುಳುಗಿಸಿಟ್ಟರೆ ಎಷ್ಟು ದಿನ ಬಿಟ್ಟರೂ ಕೂಡ ಅದು ಸಿಹಿ ಆಗುವುದಿಲ್ಲ ಹಾಗೆಯೆ ಮನುಷ್ಯನ ಗುಣ ಯಾವುದೇ ವಾತಾವರಣಕ್ಕೂ ಹಾಗೂ ಯಾವುದೇ ಪರಿಸ್ಥಿತಿಗೂ ತನ್ನ ನೈಜತೆಯನ್ನು ಬದಲಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
ಹೇಳಿಕೊಳ್ಳಲು ತಂದೆ ತಾಯಿ ಇಬ್ಬರು ಅಧ್ಯಾಪಕ ವೃತ್ತಿಯಲ್ಲಿರುವವರಂತೆ. ಸಮಾಜದಲ್ಲಿ ಎಲ್ಲಾ ವೃತ್ತಿ ಗಿಂತಲೂ ಮಾನ್ಯತೆಯನ್ನು ಪಡೆದುಕೊಂಡ ಹಾಗೂ ಗೌರವವನ್ನು ಉಳಿಸಿಕೊಂಡಿರುವ ವೃತ್ತಿ ಈ ಅಧ್ಯಾಪನ ವೃತ್ತಿ. ಇಂತಹ ವೃತ್ತಿಯಲ್ಲಿರುವ ತಂದೆ ತಾಯಿಗಳನ್ನು ಪಡೆದುಕೊಂಡಂತಹ ಮಗ ಹಾಡು ಹಗಲೇ ನಟ್ಟ ನಡುವೆ ಒಂದು ಹುಡುಗಿಯನ್ನು ಕೊಚ್ಚಿ ಕೊಂದಿದ್ದಾನೆಂದರೆ ಆತನ ಒಳಗಿರುವ ಕೊಳಕು ಗುಣ ಆ ಕೆಲಸವನ್ನು ಮಾಡಿಸಿದೆ.
ಈ ರಾಕ್ಷಸರ ರಾಕ್ಷಸ ಪ್ರವೃತ್ತಿ ಇದೇನು ಮೊದಲಲ್ಲ ಕೊನೆಯೂ ಅಲ್ಲ. ಆದರೆ ಇದನ್ನು ಆ ರಾಕ್ಷಸರು ಸಮರ್ಥಿಸಿ ಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಹಿಂದೂಗಳು ಕೂಡ ಆ ಶಾಂತಿದೂತರನ್ನು ಅಣ್ಣ-ತಮ್ಮಂದಿರಂತೆ ಕಾಣುವುದನ್ನು ಕಂಡಾಗ ಆಶ್ಚರ್ಯವಾಗುತ್ತದೆ.
ಕೈಯಲ್ಲಿ ರಕ್ತವನ್ನು ಕುಡಿಯುತ್ತಿದ್ದ ಸೊಳ್ಳೆಯನ್ನು ಹೊಡೆಯಬಹುದು. ನಿಜವಾಗಿ ಶಾಂತಿಯನ್ನು ಬಯಸುವವ ಇದನ್ನು ಕೂಡ ಕೊಲ್ಲಲು ಬಯಸುವುದಿಲ್ಲ. ಅಂತದ್ದರಲ್ಲಿ ತನ್ನ ಆಹಾರಕ್ಕಾಗಿ ಕೋಳಿ ಮೀನನ್ನು ಜೀವಂತವಾಗಿ ಹಿಡಿದು ಚಿತ್ರಹಿಂಸೆ ಕೊಟ್ಟು ಕೊಂದು ತಿನ್ನುವುದು ಕೂಡ ಕೆಲವರ ಮನಸ್ಸಿಗೆ ಸರಿ ಕಾಣುವುದಿಲ್ಲ. ಅದರಲ್ಲೂ ಹಸು ಎತ್ತುವಿನಂತ ಬಹುದೊಡ್ಡ ಪ್ರಾಣಿಗಳನ್ನು ನಿಧಾನವಾಗಿ ಚಿತ್ರಹಿಂಸೆಯನ್ನು ಕೊಟ್ಟು ಕೊಟ್ಟು ಹನಿ ಹನಿ ರಕ್ತವನ್ನು ಕೂಡ ಚೆಲ್ಲಿಸಿಕೊಂಡು ಕೊಂದು ತಿನ್ನುವ ಮಂದಿಯ ಮನಸ್ಸು ಇನ್ನೆಷ್ಟು ಭೀಕರತೆಗೆ ಒಳಗಾಗುವುದಿಲ್ಲ. ತಾನು ತಿನ್ನುವ ಆಹಾರ ತನ್ನ ಮನಸ್ಸಿಗೂ ಕೂಡ ಪರಿಣಾಮವನ್ನು ಕೊಡುತ್ತದೆ ಎನ್ನುವುದು ವಿಜ್ಞಾನ ಒಪ್ಪಿಕೊಂಡ ಸತ್ಯ.
ಇಂತಹ ನೀಚತನಕ್ಕೆ ಕೇವಲ ಆಹಾರ ಮಾತ್ರ ಕಾರಣವಲ್ಲ. ಹಾಗೆಂದು ಅಲ್ಲವೇ ಅಲ್ಲ ಎಂದು ಕೂಡ ಹೇಳಲು ಸಾಧ್ಯವಿಲ್ಲ. ನಿತ್ಯವೂ ಮಾಂಸಹಾರ ತಿನ್ನುವುದು. ದೈಹಿಕ ಸುಖಕ್ಕಾಗಿ ಹೆಣ್ಣಾದರೆ ಸಾಕು ಯಾವ ಬಂಧುತ್ವದ ಲೇಪವು ಅವಳಿಗೆ ಇರುವುದಿಲ್ಲ. ಒಟ್ಟಾರೆ ಅವಳ ಸೃಷ್ಟಿಯೇ ಪುರುಷನ ಸುಖಕ್ಕಾಗಿ ಎನ್ನುವ ವಾತಾವರಣ. ತಮ್ಮ ಧರ್ಮದಲ್ಲಿ ತಮಗೆ ಅಭಿಮಾನದಕ್ಕಿಂತಲೂ ಹೆಚ್ಚು ಅಂದಾಭಿಮಾನ. ಈ ಎಲ್ಲಾ ವಾತಾವರಣದ ನಡುವೆ ಬೆಳೆಯುವ ಮಗು ಅದು ಆ ಗುಣವನ್ನು ಪಡೆಯದೆ ಇರಲು ಸಾಧ್ಯವೇ ಇಲ್ಲ. ಆದ್ದರಿಂದ ಅದು ಎಲ್ಲಾ ವಿಚಾರದಲ್ಲೂ ತನಗೆ ಬೇಕಾದಂತೆ ವರ್ತಿಸಲು ಪ್ರಾರಂಭಿಸುತ್ತದೆ. ಲಂಗು ಲಗಾಮಿ ಇಲ್ಲದ ಹುಚ್ಚು ಕುದುರೆಯಂತೆ.
ಸಿಟ್ಟು ನೆತ್ತಿಗೇರಿದರೆ ಮೊದಲು ನಮ್ಮ ಮತಿಯನ್ನು ಕೊಂದುಬಿಡುತ್ತದೆ. ಅದರಲ್ಲೂ ಯುವಕರು ಮತ್ತಷ್ಟು ಈ ಬಗ್ಗೆ ಯೋಚಿಸಬೇಕು. ಒಂದು ಬದಿಯಲ್ಲಿ ಸಿಟ್ಟು ಮತ್ತೊಂದು ಬದಿಯಲ್ಲಿ ಈಗ ಸುಲಭವಾಗಿ ನಮ್ಮ ಮನಸ್ಸನ್ನು ಕೆರಳಿಸುವ ಡ್ರಗ್ಸ್ ಇತ್ಯಾದಿ ಮಾದಕ ಪದಾರ್ಥಗಳು. ಇದೆರಡರಿಂದ ಯುವ ಸಮಾಜ ಇವತ್ತು ತಮ್ಮ ಯೌವನವನ್ನು ಮಾತ್ರವಲ್ಲ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹತ್ತಾರು ಮಕ್ಕಳುಳ್ಳವರಿಗೆ ಒಂದೆರಡು ಮಗ ಈ ರೀತಿಯಲ್ಲಿ ಹಾಳಾಗಿ ಹೋದರೆ ಬೇಸರವಿರುವುದಿಲ್ಲ. ಒಂದೆರಡು ಮಕ್ಕಳ ಉಳ್ಳವರು ಯೋಚಿಸಬೇಕಾಗಿದೆ. ಇಂಥವರೊಂದಿಗೆ ಸೇರಿ ಇರುವ ಒಬ್ಬ ಮಗನನ್ನು ಕೂಡ ಜೈಲಿನಲ್ಲಿ ಕಾಣಬೇಕಾದೀತು.
ಕೈಗೆ ಸಿಗದ ಹೆಣ್ಣು ಯಾರಿಗೂ ಸಿಗಬಾರದು ಎನ್ನುವ ನೆಲೆಯಲ್ಲಿ ಕೊಚ್ಚಿ ಕೊಲ್ಲುತ್ತಾರೆ ಎಂದರೆ ಇವರ ಪ್ರೀತಿಯನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಈ ರೀತಿಯಾಗಿ ಕೊಲೆಯಾಗಿರುವುದು ಇದೇನು ಮೊದಲಲ್ಲ. ಇತ್ತೀಚೆಗಷ್ಟೇ ಪುತ್ತೂರಿನಲ್ಲಿ ಕೂಡ ನಡೆದಿತ್ತು. ನಮಗೆ ಇಷ್ಟ ಆಗಲಿಲ್ಲ ಎನ್ನುವ ಕಾರಣಕ್ಕೆ ತಂದೆ ತಾಯಿಯನ್ನು ಕೂಡ ಕೊಂದವರಿದ್ದಾರೆ. ಕೈಯಲ್ಲಿರುವ ಸೊಳ್ಳೆಗೂ ನಮ್ಮೊಟ್ಟಿಗಿರುವ ವ್ಯಕ್ತಿಗೂ ಏನು ವ್ಯತ್ಯಾಸವಿಲ್ಲದಂತೆ ಬದುಕುವ ಈ ರಾಕ್ಷಸರುಗಳು ಬದುಕುವುದಕ್ಕಿಂತ ಸಾಯುವುದು ಒಳ್ಳೆಯದು.
ಕಲಿತ ವಿದ್ಯೆ ಪಡೆದ ಸಂಸ್ಕಾರ ಎಳ್ಳಿನಿತು ನಮ್ಮ ಬದಲಾವಣೆಗೆ ಸಾಧ್ಯವಾಗಲಿಲ್ಲ ಎಂದರೆ ಆ ವಿದ್ಯೆ ಹಾಗು ಆ ಸಂಸ್ಕಾರಕ್ಕೆ ಏನು ಬೆಲೆ ಬರುತ್ತದೆ. ಸಾಯುವವರಂತೂ ಸಾಯುತ್ತಾರೆ. ಕೊಂದವರ ಮನೆಯಲ್ಲಿ ಹೆಚ್ಚೆಂದರೆ ಎರಡು ವರುಷ ಮತ್ತೆ ಈ ಕೊಂದವನಿಗೂ ಕೂಡ ಆ ಘಟನೆ ಮರೆತು ಹೋಗುತ್ತದೆ. ಆದರೆ ಸತ್ತವರ ಮನೆಯ ವೇದನೆ ಅವರು ಬದುಕಿರುವಷ್ಟು ಕಾಲವು ಶಾಶ್ವತವೇ. ಇನ್ನು ಆ ಜೀವ ಇವರ ಬಳಿ ಬರಲು ಸಾಧ್ಯವಿಲ್ಲ. ಹೆತ್ತು ಹೊತ್ತು ಇಷ್ಟು ವರ್ಷ ಮಲ್ಲಿಗೆ ಹೂವಿನಂತೆ ನೋಡಿಕೊಂಡ ತಂದೆ ತಾಯಿಗಳಿಗೆ ಇನ್ನು ಅವಳ ಫೋಟೋ ಕಂಡಾಗಲೆಲ್ಲಾ ಚೂರಿ ಹಾಕಿದಂತೆ ಅನುಭವವಾಗುವುದರಲ್ಲಿ ಸಂಶಯವಿಲ್ಲ.
ಪ್ರೇಮ ಕನಲೆ ಪಿಶಾಚಿ. ಪ್ರೀತಿ ಕೋಪಕ್ಕೆ ತಿರುಗಿದರೆ ನಾವು ರಾಕ್ಷಸರಾಗುತ್ತೇವೆ. ಪ್ರೀತಿ ಪ್ರೇಮದಲ್ಲಿ ಆದಷ್ಟು ಜಾಗ್ರತೆ ವಹಿಸಿ, ಮನುಷ್ಯರಾಗಿ ಬದುಕುವಲ್ಲಿ ಯುವ ಸಮಾಜ ಯೋಚಿಸಬೇಕು.
Leave A Reply