ಪ್ರಜ್ವಲ್ ಮೊಬೈಲಿನಿಂದ ವಿಡಿಯೋ ಲೀಕ್ ಆದದ್ದು ಹೇಗೆ?
ಪ್ರಜ್ವಲ್ ಅವರ ಖಾಸಗಿ ಮೊಬೈಲಿನಿಂದ ವಿಡಿಯೋ ಲೀಕ್ ಆದದ್ದೇ ಒಂದು ಕುತೂಹಲಕಾರಿ ಸಂಗತಿ ಎನ್ನಬಹುದು. ಮೂಲಗಳ ಪ್ರಕಾರ ಏಳೆಂಟು ತಿಂಗಳ ಹಿಂದೆಯೇ ಪ್ರಜ್ವಲ್ ಅವರ ಮೊಬೈಲ್ ನಾಪತ್ತೆಯಾಗಿತ್ತು. ಎಷ್ಟು ಹುಡುಕಿದರೂ ಸಿಗದೇ ಇದ್ದಾಗ ಅದು ಕಳುವಾಗಿದೆ ಎನ್ನುವ ನಿರ್ಧಾರಕ್ಕೆ ಸಂಸದರು ಬಂದಿದ್ದರು. ಮೊಬೈಲ್ ಕಳುವಾದ ತಕ್ಷಣ ಎಲ್ಲರೂ ಮಾಡುವಂತೆ ಇವರು ಕೂಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆ ಬಳಿಕ ಹೊಸ ಮೊಬೈಲ್ ಖರೀದಿಸಿದ್ದರು. ಕಳುವಾದ ಮೊಬೈಲ್ ಬಗ್ಗೆ ವಿಶೇಷವಾಗಿ ತಲೆಕೆಡಿಸಿಕೊಳ್ಳಲು ಹೋಗಿರಲಿಲ್ಲ. ಆದರೆ ಕಳುವಾದ ಮೊಬೈಲಿನಲ್ಲಿ ಕೆಲವು “ಸೇವ್” ಮಾಡಲ್ಪಟ್ಟ ವಿಡಿಯೋಗಳು ಇವೆ ಮತ್ತು ಅದಕ್ಕಾಗಿಯೇ ಮೊಬೈಲ್ ಕಳುವು ಮಾಡಲಾಗಿದೆ ಎನ್ನುವ ಅನುಮಾನ ಮೂಡುತ್ತಿದ್ದಂತೆ ಪ್ರಜ್ವಲ್ ಜಾಗೃತರಾದರು. ತಕ್ಷಣ ಅವರು ಆ ವಿಡಿಯೋಗಳು ಬಹಿರಂಗವಾಗದಂತೆ ನ್ಯಾಯಾಲಯದಿಂದ ಸ್ಟೇ ತಂದರು.
ಆ ಸ್ಟೇ ರದ್ದುಗೊಳಿಸಲು ಏನಾದರೂ ಮಾಡಿ ಎಂದೇ ಅವರ ಕಾರು ಚಾಲಕ ಭಾರತೀಯ ಜನತಾ ಪಾರ್ಟಿಯ ಮುಖಂಡ ದೇವರಾಜೇಗೌಡರ ಮೊರೆ ಹೋದದ್ದು. ಅದರ ನಂತರದ ವಿಷಯ ಈಗ ಜಗತ್ತಿಗೆ ಗೊತ್ತಿದೆ.
ಇದೆಲ್ಲವು ಗೊತ್ತಾಗುತ್ತಿದ್ದಂತೆ ತಮ್ಮ ಮೊಬೈಲ್ ನ ದತ್ತಾಂಶ ಲೀಕ್ ಆಗದಂತೆ ಬೇರೆ ಬೇರೆ ರೀತಿಯಲ್ಲಿ ಪ್ರಜ್ವಲ್ ಪ್ರಯತ್ನಪಟ್ಟಿದ್ದಾರೆ. ಆದರೆ ಅಷ್ಟರಲ್ಲಿ ಅವರ ಮೊಬೈಲಿನಿಂದ ಡಾಟಾ ಬೇರೆ ಸಿಸ್ಟಂಗೆ ವರ್ಗಾವಣೆ ಆಗಿ ಹೋಗಿದೆ. ಇದೆಲ್ಲವೂ ನಡೆದು ಏಳೆಂಟು ತಿಂಗಳು ಆಗಿ ಹೋಗಿದೆ. ಅಲ್ಲಿಂದ ಇಲ್ಲಿಯ ತನಕ ಆ ವಿಡಿಯೋ ಎಲ್ಲಿದ್ದವು. ಚುನಾವಣೆಗೆ ಐದಾರು ದಿನಗಳು ಇದ್ದಾಗ ಹೇಗೆ ಎಲ್ಲಿಂದ ಹೊರಗೆ ಬಂದವು ಎನ್ನುವುದನ್ನು ವಿಶೇಷ ತನಿಖಾ ತಂಡ ವಿಚಾರಣೆ ಮಾಡುತ್ತಿದೆ.
Leave A Reply