ಕೇರಳದ ಲವ್‌ಜಿಹಾದ್‌ಗೆ ಇನ್ನೆಷ್ಟು ಸಾಕ್ಷ್ಯ ಬೇಕು ಹೇಳಿ?
ಸಿಖ್ (ಪಂಜಾಬಿ ಹುಡುಗಿ)- ₹ 7 ಲಕ್ಷ
ಪಂಜಾಬಿ ಹಿಂದೂ ಹುಡುಗಿ- ₹ 6 ಲಕ್ಷ
ಗುಜರಾತಿ (ಬ್ರಾಹ್ಮಣರ ಹುಡುಗಿ)- ₹ 6 ಲಕ್ಷ
ಹಿಂದೂ (ಬ್ರಾಹ್ಮಣರ ಹುಡುಗಿ)- ₹ 5 ಲಕ್ಷ
ಇದು ಯಾವ ಮಾರುಕಟ್ಟೆಯ ದರಪಟ್ಟಿ ಎಂಬ ಪ್ರಶ್ನೆ ಮೂಡಬಹುದು. ಆದರೆ, ಇದು ಕೇರಳದಲ್ಲಿ ಹಿಂದೂ ಯುವತಿಯರನ್ನು ಮತಾಂತರಗೊಳಿಸಿದರೆ ಮುಸ್ಲಿಂ ಮೂಲಭೂತವಾದಿಗಳಿಗೆ ಸಿಗುವ ಮೊತ್ತವಿದು. ಹೀಗೆ ಮತಾಂತರ ದರ ಪಟ್ಟಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿಿರುವುದನ್ನು ಗಮನಿಸಿರಬಹುದು.
ಏತನ್ಮಧ್ಯೆ, ಹದಿಯಾ ಪ್ರಕರಣವನ್ನು ಲವ್ ಜಿಹಾದ್ ಎಂದು ಪರಿಗಣಿಸಿರುವ ಸುಪ್ರೀಂ ಕೊರ್ಟ್ ಈ ಕುರಿತು ತನಿಖೆ ಮಾಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಸೂಚಿಸಿದೆ.
ಇವುಗಳೆಲ್ಲವುಗಳ ನಡುವೆಯೇ ಕೇರಳದಲ್ಲಿ ನಾಲ್ವರು ಹಿಂದೂ ಮಹಿಳೆಯರನ್ನು ಇಸ್ಲಾಾಂಗೆ ಮತಾಂತರಗೊಳಿಸಿರುವುದು ಸುದ್ದಿಯಾಗಿದೆ. ಇದು ಇಸ್ಲಾಂ ಮೂಲಭೂತವಾದಿಗಳ ಕುತ್ಸಿತ ಮನಸ್ಸಿಗೆ ಹಿಡಿದ ಕನ್ನಡಿಯಲ್ಲದೇ ಮತ್ತೇನು?
ಹಾಗೆಯೇ ಪಲಕ್ಕಾಡ್‌ನ 22 ವರ್ಷದ ಮಹಿಳೆಯೊಬ್ಬರು ನನ್ನನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ. ಎಸ್‌ಡಿಪಿಐ ಪಕ್ಷದವರು ಸತ್ಯಸಾರಣಿ (ಮತಾಂತರಗೊಳಿಸಲು ಮಾಡುವ ಕಾರ್ಯಕ್ರಮ)ಗೆ ಎಳೆದೊಯ್ದು ಮತಾಂತರಗೊಳಿಸಲಾಗಿದೆ ಎಂದು ಕೇರಳ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲ, 2013ರಲ್ಲಿ ನನ್ನನ್ನು ಸಹ ಮದುವೆ ಹೆಸರಿನಲ್ಲಿ ಇಸ್ಲಾಾಗೆ ಮತಾಂತರಗೊಳಿಸಲಾಗಿದೆ ಎಂದು ಪೊನ್ನೈನ 27 ವರ್ಷದ ಮಹಿಳೆಯೊಬ್ಬರು ಸಹ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಗಂಡ ಎಂಬ ನುಸಿಪೀಡೆಯಿಂದ ಬಿಡುಗಡೆಗೊಳಿಸಬೇಕು ಹಾಗೂ ನ್ಯಾಯ ಒದಗಿಸಬೇಕು ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಆದಾಗ್ಯೂ, ಅಖಿಲಾ ಅಶೋಕನ್ (ಈಗ ಹದಿಯಾ) ಪ್ರಕರಣದಲ್ಲಿ ಆಕೆಯ ತಂದೆ ಸುಪ್ರೀಂ ಕೋರ್ಟ್‌ವರೆಗೂ ಹೋಗಿದ್ದ ಕಾರಣದಿಂದಲೇ ಈ ಮಹಿಳೆಯರು ನ್ಯಾಯಾಲಯದ ಮೆಟ್ಟಿಲು ಹತ್ತುವ ಧೈರ್ಯ ಮಾಡುತ್ತಿದ್ದಾರೆ. ಇನ್ನೂ ಅದೆಷ್ಟು ಮಹಿಳೆಯರು ಹಿಂದೂವಾಗಿ ಹುಟ್ಟಿ, ಜಿಹಾದ್ ಬಲೆಗೆ ಬಿದ್ದು ಬುರ್ಖಾ ಹಿಂದೆಯೇ ಕಣ್ಣೀರು ಒರೆಸಿಕೊಳ್ಳುತ್ತಿದ್ದಾರೋ ಯಾರಿಗೆ ಗೊತ್ತು?
ಆ ಪಿಣರಾಯಿ ವಿಜಯನ್‌ಗೆ ಈ ಸತ್ಯ ತಿಳಿಯುವುದು ಯಾವಾಗ? ಹಿಂದೂ ಯುವತಿಯರು ಪೋಷಕರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಎಚ್ಚರ.
-ನಾಗೇಂದ್ರ ಶೆಣೈ, ಉಡುಪಿ
Leave A Reply