ಮೋದಿ ಮೊದಲ ಚುನಾವಣೆಯಲ್ಲಿ ತಾಯಿಗೆ ಕೊಟ್ಟ ವಚನ ಏನು?
ಪ್ರಧಾನಿ ಮೋದಿಯವರು ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. ತಾಯಿಯ ನಿಧನದ ನಂತರ ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ನರೇಂದ್ರ ಮೋದಿಯವರು ತಾಯಿಯ ಬಗ್ಗೆ ಭಾವನಾತ್ಮಕವಾಗಿ ಟೈಮ್ಸ್ ನೌ ವಾಹಿನಿಯಲ್ಲಿ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಮೋದಿಯವರು ಗುಜರಾತ್ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದ ಪ್ರತಿ ಚುನಾವಣೆಯಂದು ನಾಮಪತ್ರ ಸಲ್ಲಿಸುವ ಮೊದಲು ತಾಯಿಯನ್ನು ಭೇಟಿಯಾಗಿ ಅವರ ಆರ್ಶೀವಾದ ಪಡೆದುಕೊಳ್ಳುತ್ತಿದ್ದರು. ತಾಯಿಯ ಕಾಲಿಗೆ ನಮಸ್ಕರಿಸದೇ ಅವರು ಯಾವುದೇ ನಾಮಪತ್ರವನ್ನು ಸಲ್ಲಿಸಲು ತೆರಳುತ್ತಿರಲಿಲ್ಲ. ಒಂದೂವರೆ ವರ್ಷದ ಹಿಂದೆ ಅವರ ತಾಯಿ ನಿಧನರಾದ ಬಳಿಕ ಮೊದಲ ಬಾರಿ ಮೋದಿ ತಾಯಿಯಿಲ್ಲದೆ ನಾಮಪತ್ರ ಸಲ್ಲಿಸಿದ್ದಾರೆ.
ತಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ತಾಯಿ ಹೀರಾ ಬೆನ್ ಹೇಳಿದ ಮಾತೊಂದನ್ನು ಮೋದಿ ಯಾವಾಗಲೂ ಸ್ಮರಿಸುತ್ತಾರೆ. ” ನೀನು ಯಾವಾಗಲೂ ಬಡವರ ಏಳಿಗೆಗಾಗಿ ಮಾತ್ರ ಕೆಲಸ ಮಾಡಬೇಕು ಮತ್ತು ಜೀವಮಾನದಲ್ಲಿ ಏಂದಿಗೂ ಲಂಚವನ್ನು ಸ್ವೀಕರಿಸಬಾರದು” ಮೋದಿಯವರು ಪ್ರಥಮ ಬಾರಿ ಗುಜರಾತ್ ಸಿಎಂ ಆದ ದಿನದಿಂದ ಪ್ರತಿದಿನ ತಾಯಿ ಹೇಳಿದ ಮಾತನ್ನು ಅಕ್ಷರಶ: ಪಾಲಿಸಿಕೊಂಡು ಬರುತ್ತಿದ್ದಾರೆ.
ಪ್ರತಿ ತಾಯಂದಿರು ಚುನಾವಣೆಗೆ ಸ್ಪರ್ಧಿಸುವ ತಮ್ಮ ಮಗ, ಮಗಳಿಂದ ಪ್ರಾಮೀಸ್ ಮಾಡಿಸಿಕೊಳ್ಳಬೇಕು. ಅದೇನೆಂದರೆ ತಾನು ಏಂದಿಗೂ ಲಂಚ ಸ್ವೀಕರಿಸುವುದಿಲ್ಲ ಎನ್ನುವ ವಚನವನ್ನು ತೆಗೆದುಕೊಂಡರೆ ಅದರಿಂದ ಆ ಅಭ್ಯರ್ಥಿಗೂ ಒಳ್ಳೆಯದು, ಊರು, ಗ್ರಾಮ, ರಾಜ್ಯ, ದೇಶಕ್ಕೂ ಒಳ್ಳೆಯದು.
Leave A Reply