ನದಿ ಜೋಡಣೆಗೆ ಕೇಂದ್ರ ಸರಕಾರದಿಂದ 5.5 ಲಕ್ಷ ಕೋಟಿ ರೂ.
ದೆಹಲಿ: ದೇಶದಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಬರ, ನೆರೆ ಪ್ರವಾಹ ತಡೆಗಟ್ಟಲು ಮತ್ತು ರೈತರ ಸಂಕಷ್ಟ ನೀಗಿಸಲು ಕೇಂದ್ರ ಸರಕಾರ ನದಿ ಜೋಡಣೆ ಯೋಜನೆಗೆ 5.5 (5,55,593) ಲಕ್ಷ ಕೋಟಿ ರೂಪಾಯಿ ನೀಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಮೂಲಕ ಲಕ್ಷಾOತರ ಹೆಕ್ಟೆೆರ್ ಜಮೀನಿಗೆ ನೀರಾವರಿ ಒದಗಿಸಲು ಕೇಂದ್ರ ಸರಕಾರ ಯೋಜನೆ ರೂಪಿಸಿದೆ. ಈ ಬೃಹತ್ ಯೋಜನೆಯಲ್ಲಿ 60 ನದಿಗಳನ್ನು ಜೋಡಿಸುವ ಕುರಿತು ಸಿದ್ಧತೆ ನಡೆದಿದ್ದು, ರೈತರನ್ನು ಮಳೆ ಆಶ್ರಯದಿಂದ ಹೊರ ತಂದು ಎಲ್ಲರಿಗೂ ನೀರಾವರಿ ಒದಗಿಸುವ ಯೋಜನೆ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಆಸಕ್ತಿ ಈ ಯೋಜನೆಯಲ್ಲಿದೆ. ಈ ಮೂಲಕ ಸಾವಿರಾರು ಮೇಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಮಾಡುವ ಯೋಚನೆಯೂ ಇದೆ. ಪರಿಸರವಾದಿಗಳ, ಪ್ರಾಣಿ ದಯಾ ಸಂಘಗಳ ಮತ್ತು ಜಮೀನ್ದಾರ್ರ ವಿರೋಧದ ಮಧ್ಯೆೆಯೂ ಕೇಂದ್ರ ಸರಕಾರ ಈ ಯೋಜನೆ ಕೈಗೊಳ್ಳಲು ಮುಂದಾಗಿದೆ.
ಆರಂಭದಲ್ಲಿ ನದಿ ಜೋಡಣೆ ಕಾಮಗಾರಿಗಳನ್ನು ಬಿಜೆಪಿ ಅಧಿಕಾರದಲ್ಲಿರುವ ಮಧ್ಯ ಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಆರಂಭಿಸಲು ಚಿಂತನೆ ನಡೆಸಲಾಗಿದೆ. ನಂತರದ ದಿನಗಳಲ್ಲಿ ರಾಷ್ಟ್ರಾದ್ಯಂತ ವಿಸ್ತರಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಪ್ರಮುಖವಾಗಿ ಹಲವು ನದಿಗಳಿಗೆ ಡ್ಯಾಮ್ ನಿರ್ಮಿಸುವ ಯೋಜನೆ ಇದ್ದು, ಇದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ನದಿ ಜೋಡಣೆಯ ನೆಪದಲ್ಲಿ ಪರಿಸರಕ್ಕೆೆ ಭಾರಿ ಹಾನಿಯಾಗಲಿದೆ ಎಂದು ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
Leave A Reply