ಯೋಗಿ ಬುಲ್ಡೋಜರ್ ಬಗ್ಗೆ ಮೋದಿ ಮಾತು!
ಒಂದು ವೇಳೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ರಾಮ ಮಂದಿರದ ಮೇಲೆ ಬುಲ್ಡೋಜರ್ ಏರಿಸಲು ಕೂಡ ಅವು ಹೇಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಈ ಎರಡೂ ಪಾರ್ಟಿಗಳು ಬುಲ್ಡೋಜರ್ ಯಾವುದರ ಮೇಲೆ ಓಡಿಸಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಟ್ಯೂಶನ್ ತೆಗೆದುಕೊಳ್ಳಬೇಕು ಎಂದು ಮೋದಿ ಕೀಚಾಯಿಸಿದ್ದಾರೆ. ವಿಪಕ್ಷದ ಮೈತ್ರಿಕೂಟ ದೇಶದ ರಾಜಕೀಯದಲ್ಲಿ ಈಗಾಗಲೇ ಅಸ್ಥಿರತೆಯನ್ನು ತೋರಿಸಿವೆ ಮತ್ತು ಚುನಾವಣೆಯ ಪ್ರತಿ ಹಂತ ಆಗುತ್ತಿದ್ದಂತೆ ಅದು ತರಗೆಲೆಯಂತೆ ಬಿದ್ದು ಹೋಗುತ್ತಿವೆ ಎಂದು ಟೀಕಿಸಿದರು. ಎನ್ ಡಿಎ ಮೈತ್ರಿಕೂಟ ಮೂರನೇ ಬಾರಿ ಇನ್ನಷ್ಟು ಬಲದೊಂದಿಗೆ ಅಧಿಕಾರಕ್ಕೆ ಮರಳಲಿದ್ದು, ಮುಂದಿನ ಅವಧಿಯಲ್ಲಿ ಬಡವರಿಗೆ, ಯುವ ಜನಾಂಗಕ್ಕೆ, ಮಹಿಳೆಯರಿಗೆ ಹಾಗೂ ಕೃಷಿಕರಿಗೆ ಇನ್ನಷ್ಟು ಸೌಲಭ್ಯ ನೀಡಲು ಬದ್ಧ ಎಂದು ತಿಳಿಸಿದರು.
ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ ನವಮಿಯ ದಿನ ರಾಮ ಮಂದಿರ ಅಪ್ರಯೋಜಕವಾಗಿರುವುದು ಎಂದು ಹೇಳಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ ಮಂದಿರದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪನ್ನೇ ಉರುಳಿಸುವ ಮಟ್ಟಕ್ಕೆ ಹೋಗಲಿದೆ ಎಂದು ಮೋದಿ ಹೇಳಿದ್ದಾರೆ. ಕೆಲವು ಪಕ್ಷಗಳಿಗೆ ತಮ್ಮ ಕುಟುಂಬ ಮಾತ್ರ ಮುಖ್ಯ, ಎಸ್ ಪಿ- ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ರಾಮಲಲ್ಲಾ ಮತ್ತೆ ಟೆಂಟಿಗೆ ಹೋಗಬೇಕಾಗುತ್ತದೆ ಎಂದು ಮೋದಿ ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಬುಲ್ಡೋಜರ್ ಬಾಬಾ ಎಂದೇ ಖ್ಯಾತಿ ಪಡೆದಿದ್ದು, ಅಪರಾಧಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳ ಮನೆ, ಕಟ್ಟಡಗಳ ಮೇಲೆ ಬುಲ್ಡೋಜರ್ ಏರಿಸುವ ಮೂಲಕ ಯುಪಿಯಲ್ಲಿ ಗಣನೀಯ ಪ್ರಮಾಣದಲ್ಲಿ ಅಪರಾಧಿಕ ಕೃತ್ಯಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಸಫಲರಾಗಿದ್ದಾರೆ.
Leave A Reply