ಕರ್ನಾಟಕದಲ್ಲಿ 40% ಅಪರಾಧ ಈ ವರ್ಷದಲ್ಲಿ ಜಾಸ್ತಿ – ಆರ್.ಅಶೋಕ್
ಟಿಪ್ಪು ಮೈಮೇಲೆ ಬಂದಂತೆ ವರ್ತಿಸುವ ಸಿದ್ಧರಾಮಯ್ಯ
ರಾಜ್ಯದಲ್ಲಿ ತಾಲಿಬಾನ್ ಸರಕಾರ ನಡೆಸುತ್ತಿದ್ದಾರೆ : ಆರ್.ಅಶೋಕ್ ಆರೋಪ
ಉಳ್ಳಾಲ: ಬೋಳಿಯಾರು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದಿರುವುದು ಪೂರ್ವಯೋಜಿತ ಕೃತ್ಯ, ಟಿಪ್ಪು ಮೈಮೇಲೆ ಬಂದಂತೆ ನಡೆದುಕೊಳ್ಳುತ್ತಿರುವ ಸಿದ್ದರಾಮಯ್ಯ ರಾಜ್ಯದಲ್ಲಿ ತಾಲಿಬಾನ್ ಸರಕಾರ ನಡೆಸುತ್ತಿದ್ದಾರೆ ಎಂದು ರಾಜ್ಯ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬೋಳಿಯಾರು ಚೂರಿ ಇರಿತ ಪ್ರಕರಣದಲ್ಲಿ ಹಲ್ಲೆಗೊಳಗಾದ ನಂದನ್ ಮತ್ತು ಹರೀಶ್ ಅವರ ಆರೋಗ್ಯ ಕ್ಷೇಮ ವಿಚಾರಿಸಿದ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದರು.
ಮಾರಣಾಂತಿಕ ಹಲ್ಲೆ ಡ್ರಾಗನ್ ಚೂರಿ ಹಿಡಿದುಕೊಂಡು ನಡೆಸಿರುವುದು ಗಮನಿಸಿದರೆ ಇದೊಂದು ಪೂರ್ವಯೋಜಿತ ಕೃತ್ಯ. ತಕ್ಷಣಕ್ಕೆ ಡ್ರಾಗನ್ ಚೂರಿ ಎಲ್ಲಿಂದ ಬರುತ್ತೇ. ಭಾರತ್ ಮಾತಾ ಕಿ ಜೈ ಅನ್ನುವ ಘೋಷಣೆ ವೀಡಿಯೋ ಗಮನಿಸಿದ್ದೇನೆ. ಮಸೀದಿ ಮುಂದೆ ಭಾರತ್ ಮಾತಾ ಕಿ ಜೈ ಅಂದಿದ್ದಾರೆ. ದೇಶದಲ್ಲಿ ಎಲ್ಲಿಯೂ ದೇಶಕ್ಕೆ ಜೈ ಅಂದಲ್ಲಿ ಸನ್ಮಾನ ಮಾಡ್ತಾರೆ, ಕರ್ನಾಟಕದಲ್ಲಿ ಹಾಗೂ ಮಂಗಳೂರು- ಉಡುಪಿ ಭಾಗದಲ್ಲಿ ಭಾರತ್ ಮಾತಾ ಕಿ ಜೈ ಅಂದಲ್ಲಿ ಡ್ರಾಗನ್ ಹಾಕುವ ಕೃತ್ಯಗಳಾಗುತ್ತಿದ್ದು, ರಾಜ್ಯದಲ್ಲಿ ತಾಲಿಬಾನ್ ಸರಕಾರ ಇದೆ . ಸರಕಾರವನ್ನು ಪ್ರಶ್ನಿಸಲು ಹೇಳೋರೂ ಕೇಳೋರು ಯಾರು ಇಲ್ಲದಾಗಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಟಿಪ್ಪು ಮೈಮೇಲೆ ಬಂದಂತೆ ಆಟ ಆಡ್ತಾ ಇದಾರೆ. ನಡವಳಿಕೆಗಳೆಲ್ಲವೂ ಟಿಪ್ಪು ರೀತಯಲ್ಲೇ ಇದೆ. ಹಿಂದಿನ ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ
ಬೆಂಗಳೂರು ಶಿವಾಜಿನಗರ ಕೊಲೆಗಳಾಯಿತು. ಅಲ್ಲದೆ ಇಡೀ ರಾಜ್ಯದಲ್ಲೇ 30-40 ಕೊಲೆಗಳೇ ನಡೆದಿದೆ. ಇದೀಗ ಮತ್ತೆ ಕರ್ನಾಟಕ ಕೊಲೆಗಳ ರಾಜ್ಯ ಆಗುತ್ತಿದೆ. ನ್ಯಾಷನಲ್ ಕ್ರೈಂ ಅಂಕಿ ಅಂಶದ ಪ್ರಕಾರ ಕರ್ನಾಟಕದಲ್ಲಿ 40% ಅಪರಾಧ ಈ ವರ್ಷದಲ್ಲಿ ಜಾಸ್ತಿಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಗೂಂಡಾಗಳಿಗೆ, ತಾಲಿಬಾನುಗಳಿಗೆ ಪಾಕಿಸ್ತಾನದ ಏಜೆಂಟರುಗಳಿಗೆ ಹಬ್ಬ ಆಗುತ್ತದೆ. ಪೊಲೀಸರು ಖುದ್ದಾಗಿ ಕೌಂಟರ್ ಕೇಸ್ ಕೊಡಿಸುವ ಮೂಲಕ ಕಾಂಪ್ರಮೈಸ್ ಮಾಡುವ ಕಾರ್ಯಗಳಾಗುತ್ತಿದೆ. ಬೋಳಿಯಾರು ಪ್ರಕರಣದಲ್ಲಿ ಕಾಂಗ್ರೆಸ್ ಬೆಲೆ ತೆರಲೇಬೇಕಾಗುತ್ತದೆ. ಹಲ್ಲೆಗೊಳಗಾದವರು ಪಾಕಿಸ್ತಾನದ ಕುನ್ನಿಗಳೇ ಅಂದಿರುವ ದಾಖಲೆಗಳನ್ನು ಪೊಲೀಸ್ ಕಮೀಷನರ್ ಬಳಿಯೇ ಕೇಳುತ್ತೇನೆ. ಜೈ ಶ್ರೀ ರಾಮ್, ಭಾರತ್ ಮಾತಾ ಕಿ ಜೈ ಅನ್ನೋರಿಗೆ ಡ್ರಾಗನ್ ನಿಂದ ಕೊಲೆಯತ್ನ ಮಾಡಲಾಗ್ತ ಇದೆ. ವಿಧಾನಸೌಧಲ್ಲಿ ಪಾಕಿಸ್ತಾನ ಜೈ ಅಂದವರಿಗೆ ಬಿರಿಯಾನಿ ನೀಡಿ ಬೇಲ್ ಕೊಟ್ಟು ವಾಪಸ್ಸು ಕಳುಹಿಸ್ತಾ ಇದಾರೆ. ಗೃಹಸಚಿವರೇ ಜವಾಬ್ದಾರಿ ಅರ್ಥಾಗ್ತಿಲ್ಲ. ಇಡೀ ಪ್ರಕರಣದ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತೇನೆ. ಪರಿಹಾರ ಕ್ರಮದ ಕುರಿತು ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸುತ್ತೇನೆ ಎಂದರು.
ಈ ಸಂದರ್ಭ ಸಂಸದ ಬೃಜೇಶ್ ಚೌಟ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಶಾಸಕರುಗಳಾದ ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ವಿದಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮುಖಂಡರುಗಳಾದ ಹೇಮಂತ್ ಶೆಟ್ಟಿ ದೇರಳಕಟ್ಟೆ, ಅನಿಲ್ ಬಗಂಬಿಲ ಮೊದಲಾದವರು ಉಪಸ್ಥಿತರಿದ್ದರು.
Leave A Reply