ಕುವೈಟ್ ಅಗ್ನಿ ಅವಘಡ: ಮೃತರಲ್ಲಿ ಇಬ್ಬರು ಕಾಸರಗೋಡಿನವರು..
ಕುವೈಟ್ ನ ಬಹುಮಹಡಿ ಕಟ್ಟಡದಲ್ಲಿ ನಡೆದ ಅಗ್ನಿ ಅವಘಡ ಪ್ರಕರಣದಲ್ಲಿ ಮೃತರಾದ ಇಬ್ಬರು ಕರ್ನಾಟಕ ಗಡಿ ಭಾಗದ ಕಾಸರಗೋಡಿನವರು ಎಂದು ತಿಳಿದುಬಂದಿದೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಚರ್ಕಳ ಹಾಗೂ ತ್ರಿಕ್ಕರಿಪುರ ನಿವಾಸಿಗಳಾಗಿದ್ದಾರೆ. ಚೆರ್ಕಳ ಕುಂಡಡ್ಕದ ರಂಜಿತ್ (34) ಮತ್ತು ತ್ರಿಕ್ಕರಿಪುರ ಎಳಂಬಚ್ಚಿಯ ಪಿ.ಕುಂಞಿ ಕೇಳು (55) ಎಂದು ಗುರುತಿಸಲಾಗಿದೆ.
ಕುವೈಟ್ ನ ಕಾರ್ಮಿಕ ವಸತಿ ಗೃಹದಲ್ಲಿ ಜೂನ್ 12ರ ಮುಂಜಾನೆ ಸಂಭವಿಸಿದ ಭೀಕರ ದುರಂತದಲ್ಲಿ ಒಂಭತ್ತು ಕೇರಳಿಗರು ಮೃತಪಟ್ಟಿರೋ ಮಾಹಿತಿ ಇದೆ. ಇವರಲ್ಲಿ ಇಬ್ಬರು ಕರ್ನಾಟಕ ಗಡಿ ಭಾಗದ ಕಾಸರಗೋಡು ನಿವಾಸಿಗಳಾಗಿದ್ದಾರೆ.
ಮೃತ ಪಿ.ಕುಂಞಿ ಕೇಳು ಕುವೈಟ್ ನಲ್ಲಿ ಪ್ರೊಡಕ್ಷನ್ ಇಂಜಿನಿಯರ್ ಆಗಿದ್ದರು. 20 ವರ್ಷಗಳಿಂದ ವಿದೇಶದಲ್ಲಿ ನೆಲೆಸಿದ್ದ ಅವರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಊರಿಗೆ ಬಂದಿದ್ದರು. ಪತ್ನಿ ಮಣಿ ಕೇರಳದ ಪಿಲಿಕೋಡ್ ಪಂಚಾಯತ್ ಕಚೇರಿಯಲ್ಲಿ ಗುಮಾಸ್ತರಾಗಿದ್ದಾರೆ. ಇನ್ನು ಮೃತ ಚೆರ್ಕಳದ ರಂಜಿತ್ ಕುವೈಟ್ ನಲ್ಲಿ ಸ್ಟೋರ್ ಕೀಪರ್ ಆಗಿದ್ದಾರೆ. ವರ್ಷದ ಹಿಂದೆ ಗೃಹಪ್ರವೇಶಕ್ಕೆಂದು ಮನೆಗೆ ಬಂದಿದ್ದರು.
Leave A Reply