G7 ಶೃಂಗ ಸಭೆಯ ಗ್ರೂಪ್ ಫೋಟೋ, ಮೋದಿ ವಿರೋಧಿಗಳಿಗೆ ಬಿಸಿ ತುಪ್ಪ
ಇಟಲಿಯಲ್ಲಿ G7 ಶೃಂಗಸಭೆ ಆಯೋಜನೆಯಾಗಿ ಯಶಸ್ವಿಗೊಂಡ ವಿಚಾರ ನಮಗೆಲ್ಲ ಗೊತ್ತೇ ಇದೆ. ಹೌದು ನಿನ್ನೆ ಅಂದರೆ ಜೂನ್ 14 ರಂದು ಇಟಲಿಯ ಪ್ರಧಾನಿ ಮೆಲೋನಿ ಅವರ ನೇತೃತ್ವದಲ್ಲಿ ಸಂಪನ್ನಗೊಂಡಿದೆ. ಈ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಭಾಗವಹಿಸಿದರು, ಚುನಾವಣೆಯ ಪೂರ್ವದಲ್ಲೇ ಈ ಸಭೆಯ ಆಮಂತ್ರಣವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲಾಗಿತ್ತು.
ಮೋದಿ ಮೂರನೇ ಬಾರಿಗೆ ಪ್ರಧಾನಿ ಆದ ಬಳಿಕ ಕೈಗೊಂಡ ಮೊದಲ ವಿದೇಶ ಪಯಣವಿದು.ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರನ್ನು ಇಟಲಿಯ ಪ್ರಧಾನಿ ಗೌರವದಿಂದ ಸ್ವಾಗತಿಸಿದರು.ಉಕ್ರೈನ್, ಯುಕೆ, ಫ್ರಾನ್ಸ್, ಆಫ್ರಿಕಾ ಹೀಗೆ ಅನೇಕ ದೇಶದ ನಾಯಕರನ್ನು ಭೇಟಿ ಮಾಡಿದ ಪ್ರಧಾನಿ ಭಾರತದ ವಿದೇಶ ನೀತಿಗೆ ಮತ್ತಷ್ಟು ಗಟ್ಟಿ ಬಾಂಧವ್ಯ ಬೆಸೆದರು.
ಜಗತ್ತಿನ ಬೇರೆ ಬೇರೆ ದೇಶದ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರೂ ಭಾರತಕ್ಕೆ ವಿಶೇಷ ಗೌರವ ಸಿಕ್ಕಿದೆ ಎಂದರೆ ತಪ್ಪಾಗದು. ಅದೇನಪ್ಪ ಆ ವಿಶೇಷ ಗೌರವ ಅಂದ್ರೆ G7 ಶೃಂಗ ಸಭೆ ಮುಗಿದ ನಂತರ ನಡೆದ ಫೋಟೋ ಸೆಶನ್ ನಲ್ಲಿ ಭಾರತದ ಪ್ರತಿನಿಧಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶ್ವ ನಾಯಕರ ಮಧ್ಯದಲ್ಲಿ ಸ್ಥಾನಕೊಟ್ಟು ವಿಶೇಷ ಗೌರವ ನೀಡಲಾಗಿದೆ. ಅಮೇರಿಕಾ, ಫ್ರಾನ್ಸ್ ನಂತಹ ದೊಡ್ಡ ರಾಷ್ಟ್ರಗಳ ಅಧ್ಯಕ್ಷರುಗಳಿದ್ದರೂ ಮೋದಿಯವರಿಗೆ ಈ ವಿಶೇಷ ಗೌರವ ದೊರಕಿದ್ದು ಮೋದಿ ವಿರೋಧಿಗಳಿಗೆ ನುಂಗಲಾರದ ತುತ್ತಾಗಿದೆ.
Leave A Reply