ಇವಿಎಂ ಹ್ಯಾಕ್ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ!
ವಿದ್ಯುನ್ಮಾನ ಮತಯಂತ್ರ (ಇವಿಎಂ) ಹ್ಯಾಕ್ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ನವರು 136 ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸುವಂತಾಯಿತೇ ಎಂದು ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದ್ದಾರೆ. ಇತ್ತೀಚಿಗೆ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಶಿವಸೇನೆ (ಉದ್ದವ್ ಠಾಕ್ರೆ) ಮುಖಂಡರು ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ಇವಿಎಂನನ್ನು ಬ್ಲ್ಯಾಕ್ ಬಾಕ್ಸ್ ಎಂದು ತಮ್ಮ ಏಕ್ಸ್ ನಲ್ಲಿ ಬರೆದಿದ್ದಾರೆ. ಅದರ ಪಾರದರ್ಶಕತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಆದಿತ್ಯ ಠಾಕ್ರೆ ಕೂಡ ಇವಿಎಂ ಬಗ್ಗೆ ತಮ್ಮ ಅನುಮಾನವನ್ನು ಹೇಳಿದ್ದರು.
ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರು ” ಇವಿಎಂ ಹ್ಯಾಕ್ ಮಾಡಬಹುದು ಎಂದು ಹೇಳುತ್ತಿರುವವರು ಮೊದಲು ಸಾಕ್ಷಿ ಕೊಡಲಿ. ಆ ನಂತರ ಸತ್ಯ ಏನೆಂಬುದು ಗೊತ್ತಾಗುತ್ತದೆ” ಎಂದರು.
ಈ ಬಗ್ಗೆ ಹಲವು ವರ್ಷಗಳಿಂದ ಆರೋಪ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಯಾರೂ ಖಚಿತಪಡಿಸಲು ಸಾಧ್ಯವಾಗಿಲ್ಲ. ಇದೆಲ್ಲ ಊಹಾಪೂಹವೆಂದು ಚುನಾವಣಾ ಆಯೋಗವೂ ಹೇಳಿದೆ. ಸುಪ್ರೀಂಕೋರ್ಟ್ ನಲ್ಲೂ ಚರ್ಚೆಗಳು ನಡೆದಿವೆ ಎಂದು ಹೇಳಿದರು.
100 ಆಡುಗಳ ಜೀವ ಉಳಿಸಿದ ಜೈನ ಸಮುದಾಯ!
ಅಹಿಂಸಾ ಪರಮ ಧರ್ಮ ಎನ್ನುವ ತತ್ವವನ್ನು ಪಾಲಿಸಿಕೊಂಡು ಬರುತ್ತಿರುವ ಜೈನ ಸಮುದಾಯ ಮತ್ತೊಂದು ಮಹತ್ಕಾರ್ಯವನ್ನು ಮಾಡಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದೆ. ಬಕ್ರೀದ್ ದಿನದಂದು ಇಡೀ ಪ್ರಪಂಚದಲ್ಲಿ ಅಸಂಖ್ಯಾತ ಪಶು, ಪ್ರಾಣಿಗಳನ್ನು ವಧಿಸಲ್ಪಡುವುದು ನಿಜಕ್ಕೂ ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ಪ್ರಾಣಿಪ್ರಿಯರಿಗೆ ಇದರಿಂದ ನೋವಾದರೂ ಕೂಡ ಇದನ್ನು ಯಾರೂ ಕೂಡ ತಡೆಯಲು ಸಾಧ್ಯವಿಲ್ಲ ಎನ್ನುವ ಭಾವನೆ ಇದೆ. ಪ್ರಾಣಿದಯಾ ಸಂಘಗಳು ಕೂಡ ಯಾವ ವಿಷಯದಲ್ಲಿ ಧ್ವನಿ ಎತ್ತಬೇಕೋ ಆ ವಿಷಯದಲ್ಲಿ ಎತ್ತುವುದಿಲ್ಲ ಎನ್ನುವುದು ನಾಗರಿಕರು ಆಡಿಕೊಳ್ಳುವ ಮಾತುಗಳು. ಇಂತಹ ಪರಿಸ್ಥಿತಿ ಇರುವಾಗ ಜೈನ ಸಮುದಾಯದ ಒಂದಿಷ್ಟು ಹಿರಿಕಿರಿಯರು ದೆಹಲಿಯ ಚಾಂದಿನಿ ಚೌಕದಲ್ಲಿ ಸೇರಿ ನೂರು ಆಡುಗಳನ್ನು 11 ಲಕ್ಷ ರೂಪಾಯಿಗಳನ್ನು ನೀಡಿ ಖರೀದಿಸಿದರು.
ನಂತರ ಅವುಗಳನ್ನು ತಮ್ಮ ಫಾರಂಗೆ ತೆಗೆದುಕೊಂಡು ಹೋಗಿ ಅಲ್ಲಿ ಸ್ವಚ್ಚಂದವಾಗಿ ಬಿಡುವ ಯೋಜನೆ ಇದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
Leave A Reply