ಪಾಕಿಗಳು ಸೋತು ಸುಣ್ಣವಾಗಿದ್ದರೂ ಅಮೇರಿಕಾದಲ್ಲಿ ಜಾಲಿ!
ಟಿಟ್ವೆಂಟಿ ವಿಶ್ವಕಪ್ ನಲ್ಲಿ ಗೆದ್ದರೆ ಪ್ರತಿ ಆಟಗಾರನಿಗೆ ಒಂದು ಕೋಟಿ ಅಮೇರಿಕನ್ ಡಾಲರ್ ನೀಡುತ್ತೇನೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಪಾಕಿಸ್ತಾನದ ಆಟಗಾರರಿಗೆ ಭರವಸೆ ನೀಡಿತ್ತು. ಒಂದು ಹಂತಕ್ಕೆ ಪಾಕ್ ಆಟಗಾರರು ಪ್ರಾಕ್ಟೀಸ್ ಮಾಡುತ್ತಿದ್ದ ರೀತಿಗೆ ಅವರಲ್ಲಿ ಅಗಾಧ ಶಿಸ್ತು ಬೆಳೆದಿರುವಂತೆಯೂ ಕಾಣಿಸುತ್ತಿತ್ತು. ಆದರೆ ಅಮೇರಿಕಾದಲ್ಲಿ ಇಳಿಯುತ್ತಿದ್ದಂತೆ ಶಿಸ್ತು, ಆಟ ಎಲ್ಲವನ್ನು ಮರೆತಂತಿರುವ ಪಾಕಿಗಳು ಅಲ್ಲಿ ಜಾಲಿ ಮೂಡ್ ನಲ್ಲಿ ದಿನ ಕಳೆಯುತ್ತಿದ್ದಾರೆ.
ಪ್ರಸ್ತುತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ – ಎ ನಲ್ಲಿದ್ದ ಪಾಕ್ ತಂಡ 4 ಪಂದ್ಯಗಳ ಪೈಕಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ, ಲೀಗ್ ಸುತ್ತಿನಲ್ಲಿ ಹೊರಬಿದ್ದಿತ್ತು. ಈ ಬಗ್ಗೆ ಪಾಕಿಸ್ತಾನದ ಮಾಜಿ ಆಟಗಾರ ಹಾಗೂ ಹಾಲಿ ಕೋಚ್ ಆಗಿರುವ ಅತೀಕ್ ಉಝ್ ಝಮಾನ್ ಅವರು ಮಾತನಾಡಿ ” ಹಿಂದೆ ಪಾಕ್ ತಂಡಕ್ಕೆ ಒಬ್ಬ ಕೋಚ್ ಹಾಗೂ ಒಬ್ಬ ಮ್ಯಾನೇಜರ್ ಮಾತ್ರ ನೇಮಕವಾಗುತ್ತಿದ್ದರು. ಅವರೊಂದಿಗೆ ಇಡೀ ತಂಡ ಯಾವುದೇ ಕ್ರಿಕೆಟ್ ಪಂದ್ಯಾವಳಿಗೂ ಶಿಸ್ತಿನಿಂದ ಹೋಗಿ ಬರುತ್ತಿತ್ತು. ಆದರೆ ಈಗ ಹಾಗಿಲ್ಲ. ಪ್ರತಿ ಆಟಗಾರ ತನ್ನೊಂದಿಗೆ ಒಬ್ಬ ಪ್ರತ್ಯೇಕ ಮ್ಯಾನೇಜರ್ ನನ್ನು ಕರೆದುಕೊಂಡು ಹೋಗುತ್ತಾನೆ. ಅದರೊಂದಿಗೆ ಆಟಗಾರರ ಪತ್ನಿಯರು ಕೂಡ ಇಂತಹ ಸರಣಿಗಳಿಗೆ ಹೋಗುತ್ತಾರೆ. 17 ಅಧಿಕಾರಿಗಳು, 60 ಹೋಟೇಲ್ ರೂಂ, ಕುಟುಂಬಗಳು ಇದೆಲ್ಲವನ್ನು ನೋಡುವಾಗ ಇವರು ದೇಶಕ್ಕಾಗಿ ಆಡಲು ಹೋಗುತ್ತಿದ್ದಾರೋ ಅಥವಾ ರಜಾದಿನಗಳನ್ನು ಎಂಜಾಯ್ ಮಾಡಲು ಹೋಗುತ್ತಿದ್ದಾರೋ ಎಂದು ತಿಳಿಯುವುದಿಲ್ಲ. ಇವರು ಆಡುವುದಕ್ಕಿಂತ ಹೆಚ್ಚಾಗಿ ಮೈದಾನದ ಹೊರಗಿರುವ ಹೆಂಡತಿ, ಮಕ್ಕಳ ಬಗ್ಗೆ ಗಮನ ಹರಿಸಿದರೆ ಆಟದ ಮೇಲೆ ಮನ ಕೇಂದ್ರಿಕರಿಸುವುದು ಹೇಗೆ? ಇವರಿಗಾಗಿ ಪ್ರತಿ ವರ್ಷ ಕೋಟಿಗಟ್ಟಲೆ ಹಣವನ್ನು ಪಾಕ್ ಖರ್ಚು ಮಾಡುತ್ತಿದ್ದರೂ ಇವರು ಹೀಗೆ ಮಾಡಿದರೆ ಇವರ ಬಗ್ಗೆ ಗೌರವ ಎಲ್ಲಿ ಉಳಿಯುತ್ತದೆ” ಎಂದು ಝಮಾನ್ ಪ್ರಶ್ನಿಸಿದ್ದಾರೆ.
ಸದ್ಯ ಪಾಕ್ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದರೂ ತವರಿಗೆ ಮರಳದೇ ಅಮೇರಿಕಾದಲ್ಲಿ ಉಳಿದಿದ್ದಾರೆ. ಐಷಾರಾಮಿ ರೂಂಗಳನ್ನು ಬುಕ್ ಮಾಡಿಕೊಂಡಿದ್ದು, ಹಾಲಿಡೆ ಗಮ್ಮತ್ತಿನಲ್ಲಿದ್ದಾರೆ. ಇದರಿಂದ ಪಾಕ್ ಆಟಗಾರರ ವಿರುದ್ಧ ಅಲ್ಲಿನ ಹಿರಿಯ ಆಟಗಾರರ ಆಕ್ರೋಶ ಮುಂದುವರೆದಿದೆ.
Leave A Reply