ತುಳುನಾಡ ಚೆಲುವೆಯೊಂದಿಗೆ ತರುಣ್ ಮದುವೆ ಅಗಸ್ಟ್ 10 ಕ್ಕೆ ಫಿಕ್ಸಾ?
ಚೌಕ, ರಾಬರ್ಟ್, ಕಾಟೇರ ಕನ್ನಡದ ಹಿಟ್ ಸಿನೆಮಾಗಳ ನಿರ್ದೇಶಕ ತರುಣ್ ಸುಧೀರ್ ಅವರ ಜೊತೆ ತುಳು ಸಿನೆಮಾಗಳಾದ ಎಕ್ಕ ಸಕ್ಕ, ಜೈ ತುಳುನಾಡ್, ಪಿಲಿಬೈಲ್ ಯಮುನಕ್ಕ ಸೇರಿ ಕನ್ನಡದ ರಾಬರ್ಟ್ ಸಹಿತ ಕೆಲವು ಸಿನೆಮಾಗಳಲ್ಲಿ ಮಿಂಚಿದ್ದ ಸೋನಾಲ್ ಮೊಂತೆರೋ ಅವರು ಸಪ್ತಪದಿ ತುಳಿಯಲಿದ್ದಾರೆ ಎನ್ನುವ ಗುಸುಗುಸು ಚಂದನವನದಿಂದ ಕೇಳಿಬರುತ್ತಿದೆ. ಇಬ್ಬರೂ ಚಂದನವನದಲ್ಲಿ ದೃಢ ಹೆಜ್ಜೆಗಳನ್ನು ಇಟ್ಟು ಉತ್ತಮ ಭವಿಷ್ಯವನ್ನು ಹೊಂದಿದ್ದಾರೆ.
ಈಗ ಬರುತ್ತಿರುವ ವದಂತಿಯ ಪ್ರಕಾರ ಸೋನಾಲ್ ಅವರು ದರ್ಶನ್ ನಟನೆಯ ರಾಬರ್ಟ್ ಸಿನೆಮಾದ ನಿರ್ದೇಶಕ ತರುಣ್ ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಬಹಳ ದಟ್ಟವಾಗಿ ಹರಡಿದೆ. ಇನ್ನು ಅಗಸ್ಟ್ 10 ರಂದು ಈ ಜೋಡಿ ಹಸೆಮಣೆ ಏರಲಿದ್ದಾರೆ ಈಗ ಬರುತ್ತಿರುವ ಲೇಟೆಸ್ಟ್ ಸುದ್ದಿ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ತರುಣ್ ಈ ಬಗ್ಗೆ ಸದ್ಯ ಹರಡುತ್ತಿರುವ ವಿಷಯಗಳ ಬಗ್ಗೆ ನಿಖರವಾಗಿ ಮಾತನಾಡಲು ಕಾಲಾವಕಾಶ ಇದೆ ಎನ್ನುವ ಅರ್ಥದ ಮಾತುಗಳನ್ನು ಆಡಿದ್ದಾರೆ. ಇವರಿಬ್ಬರೂ ರಾಬರ್ಟ್ ಸಿನೆಮಾದ ಚಿತ್ರೀಕರಣದ ಸಮಯದಲ್ಲಿ ಸ್ನೇಹಿತರಾಗಿದ್ದು, ಅದು ನಂತರ ಪ್ರೇಮವಾಗಿ ಬದಲಾಗಿ ಈಗ ಮದುವೆಯ ಹಂತಕ್ಕೆ ಬಂದು ನಿಂತಿದೆ ಎನ್ನುವುದು ಈಗ ಎದ್ದಿರುವ ಊಹೆ. ಸೋನಾಲ್ ಅವರು ಈ ಬಗ್ಗೆ ಇನ್ನು ಕೂಡ ಸ್ಪಷ್ಟನೆ ನೀಡಬೇಕಿದ್ದು, ಇವರಿಬ್ಬರೂ ಮದುವೆಯಾದರೆ ಸ್ಯಾಂಡಲ್ ವುಡ್ ನ ಮತ್ತೊಂದು ತಾರಾ ಜೋಡಿ ಎನಿಸಲಿದೆ.
Leave A Reply