• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಅನಂತ್ ಅಂಬಾನಿ ಮದುವೆಗೆ ಎಲ್ಲರೂ ಬಂದ್ರೂ ಅಕ್ಷಯ್ ಕುಮಾರ್ ಬಂದಿಲ್ಲ, ಯಾಕೆ?

Tulunadu News Posted On July 12, 2024
0


0
Shares
  • Share On Facebook
  • Tweet It

ಬಹಳ ಅದ್ದೂರಿ ಮದುವೆಗಳಲ್ಲಿ ಒಂದಾಗಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೆ ದೇಶ, ವಿದೇಶದಿಂದ ವಿವಿಐಪಿಗಳು ಸಾಲಾಗಿ ಬರುತ್ತಿದ್ದಾರೆ. ಆಹ್ವಾನ ಸಿಕ್ಕಿದ ಯಾರೂ ಕೂಡ ಈ ಮದುವೆಯನ್ನು ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ಯಾಕೆಂದರೆ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಶ್ರೀಮಂತರು, ಪ್ರಭಾವಿಗಳು ಎಲ್ಲರೂ ಒಂದೆಡೆ ಸೇರುವ ಈ ವಿಶೇಷ ಮದುವೆಯಲ್ಲಿ ಭಾಗವಹಿಸುವುದು ಎಂದರೆ ಅದು ಗಣ್ಯರಿಗೆ ಒಂದು ರೀತಿಯ ಸ್ಟೇಟಸ್ ಸಿಂಬಲ್ ಇದ್ದ ಹಾಗೆ. ಭಾರತದಲ್ಲಿ ವಿಐಪಿಗಳಾಗಿರುವ ಬಹುತೇಕರಿಗೆ ಈ ಮದುವೆಗೆ ಆಮಂತ್ರಣ ಸಿಕ್ಕಿದೆ. ಅದು ಮನೋರಂಜನಾ ಕ್ಷೇತ್ರ, ಕ್ರೀಡೆ, ಸಂಗೀತ, ರಾಜಕೀಯ, ವ್ಯಾಪಾರ, ವ್ಯವಹಾರ, ಆಡಳಿತ ಹೀಗೆ ಮುಕ್ಕಾಲು ಬಾಲಿವುಡ್ ಅಂಬಾನಿ ಮನೆಯ ಅಂಗಳದಲ್ಲಿದೆ. ಇಷ್ಟಿರುವಾಗ ಹಿಂದಿ ಸಿನೆಮಾ ರಂಗದ ಕಿಲಾಡಿ ಅಕ್ಷಯ್ ಕುಮಾರ್ ಈ ಮದುವೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ಹಾಗಾದರೆ ಅಕ್ಷಯ್ ಕುಮಾರ್ ಅವರಿಗೆ ಆಹ್ವಾನ ನೀಡಿಲ್ಲವೇ? ನೀಡಿದ್ದರೂ ಅವರಿಗೂ ಅಂಬಾನಿ ಪರಿವಾರಕ್ಕೂ ಏನಾದರೂ ಮುನಿಸಿದೆಯಾ? ಈ ಪ್ರಶ್ನೆ ನಿಮ್ಮನ್ನು ಕಾಡಬಹುದು. ಹಾಗೇನಿಲ್ಲ. ನಟ ಅಕ್ಷಯ್ ಕುಮಾರ್ ಅವರಿಗೆ ಜ್ವರ ಕಾಣಿಸಿಕೊಂಡಿದೆ. ಬಾಲಿವುಡ್ ಫಿಟ್ ನಟನಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಅವರು ಸದ್ಯ ಕ್ವಾರಂಟೈನ್ ನಲ್ಲಿದ್ದು, ವೈದ್ಯರು ಶಿಫಾರಸ್ಸು ಮಾಡಿದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವರದಿಯ ಪ್ರಕಾರ ಅನಂತ್ ಅಂಬಾನಿ – ರಾಧಿಕಾ ಮದುವೆಯ ದಿನವೇ ಕೋವಿಡ್ ಗೆ ತುತ್ತಾಗಿರುವ ಅಕ್ಷಯ್ ಕುಮಾರ್ ಸದ್ಯ ಮದುವೆಗೆ ಗೈರಾಗಿದ್ದಾರೆ. ಎಲ್ಲಾ ಕಡೆ ಡೆಂಘೆ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಅವರ ಕಚೇರಿ ಮೂಲಗಳು ತಿಳಿಸಿವೆ.

0
Shares
  • Share On Facebook
  • Tweet It




Trending Now
ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
Tulunadu News March 5, 2026
ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
Tulunadu News March 3, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
  • Popular Posts

    • 1
      ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • 2
      ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:

  • Privacy Policy
  • Contact
© Tulunadu Infomedia.

Press enter/return to begin your search