ಅನಂತ್ ಅಂಬಾನಿ – ರಾಧಿಕಾ ಮರ್ಚಂಟ್ ಮದುವೆಯ ದಿನ ಬೆಳಗ್ಗಿನ ತಿಂಡಿಯ ಮೆನು ಏನಿತ್ತು?
ದಕ್ಷಿಣ ಭಾರತದ ತಿಂಡಿ, ತಿನಿಸುಗಳಿಗೆ ಖ್ಯಾತವಾಗಿರುವ ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಅನಂತ್ ಅಂಬಾನಿ – ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವದಲ್ಲಿ ವಿವಿಧ ಬಗೆಯ ರುಚಿರುಚಿಯಾದ ಅಡುಗೆ ಮಾಡಿ ಬಡಿಸಿದೆ. ಮುಂಬೈ – ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಜಿಯೋ ವಲ್ಡ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ದೇಶ ವಿದೇಶದ ವಿಶೇಷ ಗಣ್ಯರು ಭಾಗವಹಿಸಿದ್ದರು. ಆದ್ದರಿಂದ ಅವರಿಗೆಲ್ಲರಿಗೂ ರುಚಿಕಟ್ಟಾಗಿರುವ ಮತ್ತು ಭಾರತದ ಬ್ರಾಂಡ್ ನಾಷ್ಟಾ ತಯಾರಿಸುವ ದೊಡ್ಡ ಜವಾಬ್ದಾರಿ ಅಂಬಾನಿ ಪರಿವಾರದ ಮೇಲಿತ್ತು. ಅದಕ್ಕಾಗಿ ದೇಶದ ವಿವಿಧ ಪ್ರಖ್ಯಾತ ಹೋಟೇಲ್, ಕ್ಯಾಟರಿಂಗ್ ನವರಿಗೆ ಈ ಅವಕಾಶ ಸಿಕ್ಕಿದ್ದು, ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಹಾಗೂ ಬೆಂಗಳೂರು ಕೆಫೆಗಳಿಗೂ ಇದರಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ.
ಈ ಹಿಂದೆ ರಾಮೇಶ್ವರಂ ಕೆಫೆ ಇಟಲಿಯಲ್ಲಿ ನಡೆದ ಅಂಬಾನಿ ಕುಟುಂಬದ ಎರಡನೇ ಪೂರ್ವ ಸಮಯದಲ್ಲಿ ತನ್ನ ಪಾಕ ಕೌಶಲ್ಯವನ್ನು ಉಣಬಡಿಸಿತ್ತು. ಜುಲೈ 8 ರಂದು ಮುಂಬೈನಲ್ಲಿರುವ ಅಂಬಾನಿ ಮನೆ ಆಂಟಿಲಿಯಾದಲ್ಲಿ ವಿವಾಹಪೂರ್ವ ಸಾಂಪ್ರದಾಯಿಕ ಕಾರ್ಯಕ್ರಮ ಮೆಹಂದಿ ಸಮಾರಂಭಕ್ಕೂ ರಾಮೇಶ್ವರಂ ಕೆಫೆಯಿಂದ ದಕ್ಷಿಣದ ಅಡುಗೆ ಇತ್ತು ಎಂದು ಕೆಫೆ ತಿಳಿಸಿದೆ.
ಬೆಳಗ್ಗಿನ ಚಾ ಮೆನುವಿನಲ್ಲಿ ತೆಂಗಿನ ಪುರನ್ ಪೋಲಿ, ಪೆಸರಟ್ಟು ದೋಸೆ, ತಟ್ಟೆ ಇಡ್ಲಿ, ಬೋಂಡಾ ಸೂಪ್ ಮತ್ತು ಅತ್ಯುತ್ತಮ ಫಿಲ್ಟರ್ ಕಾಫಿ ಮತ್ತು ಚಹಾ ಇತ್ತು ಎಂದು ರಾಮೇಶ್ವರಂ ಕೆಫೆ ಕಡೆಯಿಂದ ಮಾಹಿತಿ ಸಿಕ್ಕಿದೆ.
ಆಹಾರಕ್ಕಿಂತ ಹೆಚ್ಚಾಗಿ ಅದರಲ್ಲಿ ಭಾಗವಹಿಸಿದ ಗಣ್ಯರ ಪೋಷಾಕು, ನೃತ್ಯ ಮತ್ತು ಸಂಭ್ರಮ ಕಣ್ಣುಕುಕ್ಕುವಂತಿತ್ತು ಎನ್ನುವುದಕ್ಕೆ ಯಾವುದೇ ಅಡ್ಡಿಯಿಲ್ಲ
Leave A Reply