‘ಚೀನಾ ಭಾರತ ಸ್ನೇಹ ಸಮರ’ಕಾರ್ಯಾಗಾರ ಸೆ.9ರಂದು
ಮಂಗಳೂರು: ಪ್ರತಾಪ ನಗರದ ಸಂಘನಿಕೇತನದಲ್ಲಿ ಸಿಟಿಜನ್ಸ್ ಕೌನ್ಸಿಲ್‌ನಿಂದ ಸೆ.9 ರಂದು ಸಂಜೆ 5 ಗಂಟೆಗೆ ‘ಚೀನಾ ಭಾರತ ಸ್ನೇಹ ಸಮರ’ ವಿಷಯದ ಮೇಲೆ ವಿಶೇಷ ಕಾರ್ಯಾಗಾರ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಬಿ.ಎಲ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಚೀನಾ ಭಾರತದೊಂದಿಗೆ ಎಷ್ಟೇ ಸ್ನೇಹದಿಂದ ಇರುವಂತೆ ತೋರಿದರೂ ಬೆನ್ನಿಗೆ ಚೂರಿ ಹಾಕುವ ಸಂಸ್ಕೃತಿ ಮುಂದುವರಿಸಿ ರುವುದು, ಚೀನಾ ಮೋಸ ಮಾಡಿದರೂ ನೆಹರೂ ಸರಕಾರ ಹಿಂದೀ ಚೀನಿ ಭಾಯಿ ಭಾಯಿ ಎಂದು ಹೆಗಲ ಮೇಲೆ ಕೈ ಹಾಕಿ ದೋಸ್ತಿಬೆಳೆಸಿದ್ದು, ಚೀನಾ ಭಾರತದ ಜುಟ್ಟನ್ನು ತನಗಿಷ್ಟ ಬಂದಂತೆ ಹಿಡಿದು 1962 ರಲ್ಲಿ ಯುದ್ಧ ಸಾರಿದ್ದು, 1962 ರಿಂದ ಪದೇ ಪದೆ ಭಾರತವನ್ನು ಕೆಣಕುತ್ತಿರುವ, ಬೆದರಿಕೆಗಳನ್ನು ಹಾಕುತ್ತಿರುವ ಕುರಿತು ಕಾರ್ಯಾಗಾರದಲ್ಲಿ ಚರ್ಚೆ ನಡೆಯಲಿದೆ.
ಅಲ್ಲದೇ ಪ್ರಸ್ತುತ ಕೇಂದ್ರ ಸರಕಾರ ಚೀನಾ ವಿರುದ್ಧ ಕೈಗೊಂಡ ರಾಜತಾಂತ್ರಿಕ ನಡೆಗಳು, ಸೂಕ್ಷ್ಮ ಹೆಜ್ಜೆಗಳು, ಚೀನಾ ವಿರುದ್ಧ ಕೈಗೊಂಡ ಪ್ರತಿಸವಾಲು, ಸಮಸ್ತ ಭಾರತೀಯರು ಚೀನಾ ವಿರುದ್ಧ ಸೆಟೆದು ನಿಂತು, ಚೀನಾ ವಸ್ತುಗಳ ಬಹಿಷ್ಕರಿಸುತ್ತಿರುವುದು, ಭಾರತೀಯರಲ್ಲಿ ಸ್ವದೇಶಿ ಚಿಂತನೆ ಮೂಡುತ್ತಿರುವುದು, ಚೀನಾ ಎದುರಿಸಲು ಯುದ್ಧಕ್ಕಿOತ, ತಂತ್ರವೇ ಮುಖ್ಯ ಎಂಬುದು ಸೇರಿ ನಾನಾ ವಿಷಯಗಳ ಕುರಿತು ಕಾರ್ಯಾಗಾರದಲ್ಲಿ ಚರ್ಚೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಬಿ.ಎಲ್, ಬಿಜೆಪಿ ರಾಷ್ಟ್ರೀಯ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave A Reply