20 ವರ್ಷದ ಯುವತಿಯ ಬರ್ಬರ ಹತ್ಯೆ… ಪ್ರಿಯತಮನ ಮೇಲೆ ಶಂಕೆ..
ಅವಳ ಹೆಸರು ಯಶಶ್ರೀ ಸಿಂಧೆ. ಮುಂಬೈಯಲ್ಲಿ ವಾಸ. ಕಳೆದ ಶನಿವಾರ ಮನೆಯಲ್ಲಿ ಗೆಳೆಯರ ಭೇಟಿಗೆಂದು ತೆರಳಿದವಳು ಮನೆಗೆ ಹಿಂತಿರುಗದ ಹಿನ್ನಲೆಯಲ್ಲಿ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎರಡು ದಿನಗಳ ನಂತರ ಆಕೆಯ ಮೃತದೇಹ ನವಿ ಮುಂಬೈಯ ಉರನ್ ರೈಲ್ವೆ ನಿಲ್ದಾಣದ ಸನಿಹದಲ್ಲಿ ಪೊದೆಗಳ ರಾಶಿಗಳ ನಡುವೆ ಸಿಕ್ಕಿದೆ. ದೇಹದ ಮೇಲೆ ಹಲವು ಕಡೆ ಗಾಯಗಳ ಗುರುತು ಮತ್ತು ಆಯುಧದಿಂದ ಇರಿದ ಚಿನ್ನೆಗಳು ಪತ್ತೆಯಾಗಿವೆ. ಬೀದಿ ನಾಯಿಗಳು ದೇಹವನ್ನು ಅಲ್ಲಲ್ಲಿ ಸೀಳಿದ್ದು ದೇಹ ಭಯಾನಕವಾಗಿ ಇದೆ.
ಅದು ಜುಲೈ ತಿಂಗಳ 25 ನೇ ದಿನ. ಸುಮಾರು ಬೆಳಿಗ್ಗೆ 10.30 ಗಂಟೆಯ ಸಮಯ. ಯಶಶ್ರೀ ಸಿಂಧೆ ಮನೆಯಿಂದ ಹೊರಗೆ ಹೋಗಿದ್ದಾಳೆ. ಪ್ರಾಥಮಿಕ ವರದಿಗಳ ಪ್ರಕಾರ ಅವಳ ಮೊಬೈಲ್ ನಲ್ಲಿ ದೌಡ್ ಶೇಖ್ ಎನ್ನುವ ವ್ಯಕ್ತಿಯೊಂದಿಗೆ ಬಿರುಸಿನ ಮಾತುಕತೆಗಳು ನಡೆದಿರುವುದು ಪತ್ತೆಯಾಗಿದೆ. ಅವನ ಮೂಲವನ್ನು ಪತ್ತೆ ಹಚ್ಚಿರುವ ಪೊಲೀಸರು ಆತ ಕರ್ನಾಟಕ ಮೂಲದ ದೌಡ್ ಶೇಖ್ ಎನ್ನುವುದು ಗೊತ್ತಾಗಿದೆ. ಅದಕ್ಕೆ ಪೂರಕ ಎನ್ನುವಂತೆ ಮೃತಳ ದೇಹದ ಮೇಲೆ ದೌಡ್ ಎನ್ನುವ ಟ್ಯಾಟೂ ಕೂಡ ಕಂಡುಬಂದಿದೆ.
ಮಾಹಿತಿಯ ಪ್ರಕಾರ ” ಮೃತ ಯಶಶ್ರೀ ಈ ದೌಡ್ ಶೇಖ್ ನೊಂದಿಗೆ 2019 ರಿಂದಲೇ ಗೆಳೆತನದಲ್ಲಿದ್ದಳು. ಆದರೆ ಈ ಸಂಬಂಧವನ್ನು ಆಕೆಯ ಮನೆಯವರು ಒಪ್ಪಿರಲಿಲ್ಲ. ಕೆಲವು ಕಾಲದ ನಂತರ ಶೇಖ್ ತನ್ನ ಮೂಲ ಕರ್ನಾಟಕಕ್ಕೆ ಹಿಂತಿರುಗಿದ್ದ. ಅದಕ್ಕಿಂತ ಮೊದಲು ಇವನು ಮುಂಬೈಯ ಉರನ್ ನಲ್ಲಿ ವಾಸವಿದ್ದ” ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಇತ್ತೀಚೆಗೆ ಆತ ಉರನ್ ಗೆ ಮತ್ತೆ ವಾಪಾಸಾಗಿದ್ದ. ಅದರ ಕಾರಣವನ್ನು ತಿಳಿಯಬೇಕಿದೆ. ಸದ್ಯ ಇದನ್ನು ಯಾವುದೇ ಕೋಮಿನ ಆಯಾಮದಲ್ಲಿ ನೋಡಬಾರದಾಗಿ ವಿನಂತಿ. ನಾವು ಎಲ್ಲಾ ದೃಷ್ಟಿಕೋನದಲ್ಲಿಯೂ ಪರಿಶೀಲನೆ ನಡೆಸುತ್ತಿದ್ದೇವೆ. ಅದಕ್ಕಾಗಿ ಈಗಾಗಲೇ ಮೂರು ತಂಡಗಳನ್ನು ರಚಿಸಿದ್ದೇವೆ. ಶೀಘ್ರ ಆರೋಪಿಯನ್ನು ಬಂಧಿಸುತ್ತೇವೆ. ಸದ್ಯ ಆಕೆಯ ಪ್ರಿಯಕರನ ಮೇಲೆ ಸಂಶಯ ಇದೆ” ಎಂದು ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ ವಿವೇಕ್ ಪಾನ್ಸರೆ ತಿಳಿಸಿದ್ದಾರೆ.
Leave A Reply