ಸಂಪುಟಕ್ಕೆ ಸರ್ಜರಿ, ಗುರಿ ಮುಟ್ಟದವರ ಸ್ಥಾನಕ್ಕೆ ಕತ್ತರಿ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಳಗ್ಗೆ 10 ಗಂಟೆಗೆ ಸಚಿವ ಸಂಪುಟ ಪುನರ್ ರಚನೆ ಮಾಡಲು ನಿರ್ಧರಸಿದ್ದು, ನಿಗದಿತ ಗುರಿ ಮುಟ್ಟದ ಸಚಿವರ ಸ್ಥಾಾನಕ್ಕೆ ಕತ್ತರಿ ಪ್ರಯೋಗ ಮಾಡಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ 2019ರ ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಪುನರ್ ರಚನೆಗೆ ಮುಂದಗಿದ್ದು, ಭಾನುವಾರ ಜೆಡಿಯು ಹಾಗೂ ಎಐಎಡಿಎಂಕೆ ಸದಸ್ಯರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.
ಇನ್ನು ಅದಾಗಲೇ ಕೇಂದ್ರ ಸಚಿವರಾದ ಉಮಾಭಾರತಿ, ರಾಜೀವ್ ಪ್ರತಾಪ್ ರೂಢಿ, ಸಂಜೀವ್ ಬಾಲ್ಯಾನ್ ರಾಜೀನಾಮೆ ನೀಡಿದ್ದು, ಇನ್ನಿಬ್ಬರು ರಾಜೀನಾಮೆ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಆದಾಗ್ಯೂ, ರಾಜೀವ್ ಪ್ರತಾಪ್ ರೂಢಿ ಅವರು ಸರಕಾರ ನಿಗದಿಪಡಿಸದ ಗುರಿ ಮುಟ್ಟದ ಹಿನ್ನೆಲೆಯಲ್ಲಿ ರಾಜೀನಾಮೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಜತೆಗೆ ರೂಢಿ ಸಹ ನನ್ನ ರಾಜೀನಾಮೆ ನಿರ್ಧಾರ ಸರಕಾರದ್ದೇ ಎಂದಿದ್ದಾರೆ.
ನಿತೀನ್ ಗಡ್ಕರಿಗೆ ರೈಲ್ವೆ ಖಾತೆ?
ಮೂಲಗಳ ಪ್ರಕಾರ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರಿಗೆ ಹೆಚ್ಚುವರಿಯಾಗಿ ರೈಲ್ವೆ ಹಾಗೂ ವಿಮಾನಯಾನ ಖಾತೆ ಸಿಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸುರೇಶ್ ಪ್ರಭು ಸಹ ರಾಜೀನಾಮೆ ನೀಡುವ ಮುನ್ಸೂಚನೆ ಇರುವುದರಿಂದ ರೈಲ್ವೆ ಖಾತೆಯನ್ನು ನಿತೀನ್ ಗಡ್ಕರಿಗೆ ನೀಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅರುಣ್ ಜೇಟ್ಲಿ ಸಹ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಸಚಿವರ ಕೈಬಿಡಲು ಕಾರಣಗಳೇನು?
* ಜವಾಬ್ದಾರಿ ನೀಡಿದಂದಿನಿಂದ ಇದುವರೆಗಿನ ಅಭಿವೃದ್ಧಿ ಪರಿಶೀಲನೆ.
* ಕೆಲಸ ಮಾಡದವರು ಬೇಡ ಎಂಬ ಧೋರಣೆ
* ಜೆಡಿಯು, ಎಐಎಡಿಎಂಕೆ ಸಂಪುಟಕ್ಕೆ ಸೇರ್ಪಡೆ ಹಿನ್
* ಸರಕಾರ ನೀಡಿದ ಗುರಿ ತಲುಪದೇ ಇರುವುದು.
Leave A Reply