ಮನು ಬಾಕರ್ ಮತ್ತೊಂದು ದಾಖಲೆ! ಏನು ಗೊತ್ತಾ?
ಖ್ಯಾತ ಪರಿಣಿತ ಶೂಟರ್ ಮನು ಬಾಕರ್ ಅವರು ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡೆಯಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಒಂದೇ ಒಲಿಂಪಿಕ್ಸ್ ನಲ್ಲಿ ಎರಡು ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಮೊದಲ ಕ್ರೀಡಾಪಟು ಆಗಿ ಮನು ಬಾಕರ್ ಹೊರಹೊಮ್ಮಿದ್ದಾರೆ. ಮಿಕ್ಸಡ್ ಡಬಲ್ ನಲ್ಲಿ 10 ಎಂ ಏರ್ ಪಿಸ್ತೂಲ್ ವಿಭಾಗದಲ್ಲಿ ಸರ್ಬಜ್ಯೋತ್ ಸಿಂಗ್ ಜೊತೆ ಅವರು ಕಂಚಿನ ಪದಕವನ್ನು ಗೆಲ್ಲುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಇದೇ ಪಂದ್ಯಾವಳಿಯಲ್ಲಿ ಅವರು ಈಗಾಗಲೇ ಮಹಿಳಾ 10 ಎಂ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕಗಳನ್ನು ಗೆದ್ದು ಭಾರತದ ಪದಕಗಳ ಬೇಟೆಗೆ ನಾಂದಿ ಹಾಡಿದ್ದಾರೆ.
ಮನು ಬಾಕರ್ ಮೊದಲ ಪದಕವನ್ನು ಗೆದ್ದಾಗ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕರೆ ಮಾಡಿ ಅಭಿನಂದಿಸಿದ್ದರು. ಅದಾದ ಎರಡೇ ದಿನಕ್ಕೆ ಮನು ಬಾಕರ್ ಮಿಕ್ಸಡ್ ಡಬಲ್ಸ್ ನಲ್ಲಿ ಮತ್ತೊಂದು ಪದಕ ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಮಗಳ ವಿಶಿಷ್ಟ ಸಾಧನೆಗೆ ಮೋದಿಜಿಯವರ ಸ್ಫೂರ್ತಿಯ ಮಾತುಗಳೇ ಕಾರಣ ಎಂದು ಮನು ಬಾಕರ್ ತಂದೆ ರಾಮಕಿಶನ್ ಬಾಕರ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
“ಪ್ರಧಾನಿ ಮೋದಿಯವರು ಯಾವುದೇ ಕ್ರೀಡಾಪಟುವಿನ ಬಳಿ ಮಾತನಾಡಿದರೆ ಅದರಿಂದ 80% ಹೆಚ್ಚು ಶಕ್ತಿ ದೊರಕುತ್ತದೆ. ಅದನ್ನು ನೀವು ಯಾವತ್ತೂ ನೋಡಬಹುದು. ಮೋದಿಯವರು ಮಾತನಾಡಿದ ಬಳಿಕ ಮನು ಇನ್ನೊಂದು ಪದಕ ಗೆಲ್ಲುವಂತಾಯಿತು ” ಎಂದು ಹೇಳಿದ್ದಾರೆ.
Leave A Reply