ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ನಿಧನ..
1974 – 84 ರ ನಡುವೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತದ ಪರ ಆಡಿರುವ ಅಂಶುಮಾನ್ ಗಾಯಕ್ವಾಡ್ ಅವರು ಒಟ್ಟು 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 1983 ರಲ್ಲಿ ಪಾಕಿಸ್ತಾನದ ವಿರುದ್ಧ ಜಲಂಧರ್ ನಲ್ಲಿ ಡಬಲ್ ಸೆಂಚೂರಿ ಹೊಡೆದ ದಾಖಲೆ ಇವರ ಹೆಸರಿನಲ್ಲಿದೆ. ಇನ್ನು ಏಕದಿನ ಪಂದ್ಯಗಳಲ್ಲಿ ಎರಡು ಶತಕಗಳೊಂದಿಗೆ 1154 ರನ್ ಕೂಡ ಗಾಯಕ್ವಾಡ್ ಬಾರಿಸಿದ್ದಾರೆ. ಗಾಯಕ್ವಾಡ್ 1997 ರಲ್ಲಿ ಮತ್ತು 2000 ರಲ್ಲಿ ಎರಡು ಬಾರಿ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರ ತರಬೇತಿಯಲ್ಲಿ ಭಾರತ 2000 ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್ ಅಪ್ ಆಯಿತು.
ಗಾಯಕ್ವಾಡ್ ರಕ್ತದ ಕ್ಯಾನ್ಸರ್ ನಿಂದ ಬಳಲಿ ಸುಧೀರ್ಘ ಹೋರಾಟದ ಬಳಿಕ ತಮ್ಮ 71 ವಯಸ್ಸಿನಲ್ಲಿ ನಿಧನರಾದರು. ಕೆಲವು ಸಮಯ ಲಂಡನ್ ನಲ್ಲಿಯೂ ಅವರು ಚಿಕಿತ್ಸೆ ಪಡೆದಿದ್ದರು. ಗಾಯಕ್ವಾಡ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಟೀ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಹಿತ ಅನೇಕ ಕ್ರಿಕೆಟಿಗರು ಸಂತಾಪ ವ್ಯಕ್ತಪಡಿಸಿದ್ದಾರೆ.
Leave A Reply