ಬೆಳ್ಳಿ ಪದಕವಾದರೂ ಕೊಡಿ, ವಿನೇಶ್ ಮನವಿ.. ಸಿಎಸ್ ಎ ಅರ್ಜಿ ವಿಚಾರಣೆ!

ವಿನೇಶ್ ಪೋಗೋಟ್ ಅವರಿಗೆ ಬೆಳ್ಳಿಯಾದರೂ ಸಿಗುವ ಸಾಧ್ಯತೆ ಇದೆಯಾ? ಇಂತಹ ಒಂದು ಸಾಧ್ಯತೆಯನ್ನು ಏಕಾಏಕಿ ಅಲ್ಲಗಳೆಯಲು ಸಾಧ್ಯವಿಲ್ಲ. ಯಾಕೆಂದರೆ ಅವರ ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಸ್ ಎ) ಸ್ವೀಕರಿಸಿದೆ. ವಿನೇಶ್ ಅವರ ಮನವಿಯ ವಿಚಾರಣೆ 5.30 ಕ್ಕೆ ಆರಂಭವಾಗಿದ್ದು, ವಿನೇಶ್ ಪರ ಜೊಯೆಲ್ ಮೊನ್ಲೂಯಿಸ್, ಎಸ್ಟೆಲ್ಲೆ ಇವನೊವಾ, ಹಬ್ಬೈನ್ ಎಸ್ಟೆಲ್ಲೆ ಕಿಮ್ ಮತ್ತು ಚಾಲ್ಸ್ ಆಮ್ಸನ್ ವಾದ ಮಂಡಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳಾ ಕುಸ್ತಿಯ 53 ಕೆಜಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ತೂಕ ಪರೀಕ್ಷೆಯಲ್ಲಿ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ನಿಗದಿಗಿಂತ ಹೆಚ್ಚಿನ ತೂಕ ಹೊಂದಿದ್ದಕ್ಕಾಗಿ ಫೈನಲ್ ಗೆ ಅರ್ಹತೆ ಪಡೆದುಕೊಳ್ಳಲು ವಿಫಲರಾಗಿದ್ದರು. ಇದರಿಂದಾಗಿ ಅವರ ಒಲಿಂಪಿಕ್ಸ್ ಚಿನ್ನದ ಪದಕದ ಆಸೆ ಕಮರಿ ಹೋಗಿತ್ತು. ನೀರು ಸೇವನೆಯಿಲ್ಲದೇ ದೇಹ ನಿರ್ಲಜೀಕರಣದಿಂದ, ಸರಿಯಾದ ಆಹಾರ ಸೇವನೆ ಇಲ್ಲದೇ ಬಳಲಿ ಬೆಂಡಾಗಿತ್ತು. ಅದರಿಂದ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಬಳಿಕ ವಿನೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಒಟ್ಟು ಘಟನೆಯಿಂದ ನೋವಿನ ಮಡುವಿಗೆ ಜಾರಿದ್ದ ವಿನೇಶ್ ಅವರು ಕುಸ್ತಿಗೆ ವಿದಾಯವನ್ನು ಘೋಷಿಸಿದ್ದರು. ಆದರೆ ಈಗ ಒಲಿಂಪಿಕ್ಸ್ ನಿಂದ ಬಂದ ಸುದ್ದಿಯಿಂದ ಕ್ರೀಡಾಪ್ರೇಮಿಗಳು ಸಂತಸದ ನಿಟ್ಟುಸಿರು ಬಿಡುವಂತಾಗಿದೆ. ವಿನೇಶ್ ಅವರಿಗೆ ಬೆಳ್ಳಿ ಪದಕ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.