ಸುಧಾಮೂರ್ತಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮಾಡಿದ ವಿಶೇಷ ಮನವಿ ಏನು?
ರಾಜ್ಯಸಭಾ ಸದಸ್ಯರಾಗಿರುವ ಶ್ರೀಮತಿ ಸುಧಾಮೂರ್ತಿಯವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಅದು ಏನು ಎಂದು ಈಗ ತಿಳಿಯೋಣ. ನಮ್ಮ ದೇಶದಲ್ಲಿ ಪ್ರಸ್ತುತ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಅದರ ಚಾಲಕ, ಮಾಲೀಕರಿಗೆ ಯಾವಾಗಲೂ ಇರುವ ಏಕೈಕ ಒತ್ತಡ ಎಂದರೆ ಬ್ಯಾಟರಿ ಮುಗಿದಾಗ ಏನು ಮಾಡುವುದು? ನಮಗೆ ಬ್ಯಾಟರಿ ಖಾಲಿಯಾಗುವ ಪರಿಸ್ಥಿತಿ ಬಂದಾಗ ಚಾರ್ಜಿಂಗ್ ಸ್ಟೇಶನ್ ಎಲ್ಲಿ ಸಿಗುತ್ತದೆ ಎಂಬ ಪ್ರಶ್ನೆ ಯಾವತ್ತೂ ಎದಿರಾಗಿರುತ್ತದೆ.
ಒಂದು ವೇಳೆ ಚಾರ್ಜಿಂಗ್ ಸ್ಟೇಶನ್ ಸಿಕ್ಕಾಗ ಅಲ್ಲಿ ದೊಡ್ಡ ಕ್ಯೂ ಇರುತ್ತದಾ? ಇದ್ದರೆ ಏನು ಮಾಡುವುದು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಇನ್ನು ಶೀತ ಸಮಯದಲ್ಲಿ ಬ್ಯಾಟರಿಗಳು ಸರಿಯಾಗಿ ಚಾರ್ಜ್ ಆಗುವುದಿಲ್ಲ, ಇಂತಹ ಆತಂಕ, ಸವಾಲುಗಳು ಕೂಡ ಇರುತ್ತವೆ. ಮೂರನೇಯದಾಗಿ ನಮ್ಮ ವಾಹನದ ಬ್ಯಾಟರಿ ಚಾರ್ಜ್ ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎನ್ನುವ ಯೋಚನೆಯೂ ಸುಳಿಯುತ್ತಾ ಇರುತ್ತದೆ.
ಇದಕ್ಕೆಲ್ಲಾ ಇರುವ ಅತ್ಯುತ್ತಮ ಪರಿಹಾರ ಎಂದರೆ ನಮ್ಮ ದೇಶದಲ್ಲಿ ನಾವೇ ಬ್ಯಾಟರಿಗಳ ಉತ್ಪಾದನೆ ಮಾಡುವ ಕಾರ್ಯಕ್ಕೆ ಮುಂದಾಗುವುದು. ಇದು ನಾವು ಸ್ವತಂತ್ರವಾಗಿ ಮತ್ತು ಯಾರ ಮೇಲೆಯೂ ಅವಲಂಬನೆ ಆಗದೇ ಇರುವ ಏಕೈಕ ವಿಧಾನವೂ ಆಗಿದೆ. ಪೆಟ್ರೋಲಿಯಂ ಉತ್ಪನ್ನಗಳಂತೆ ಯಾರ ಮೇಲೆಯೂ ನಾವು ಅವಲಂಬಿತರಾಗಿರಬೇಕಾಗಿಲ್ಲ. ಇನ್ನು ಉತ್ತಮ ಡಿಸೈನಿನ ಬ್ಯಾಟರಿಯಿಂದ ನಾವು ಉತ್ಪಾದಿಸುವ ವಿದ್ಯುತ್ ಚಾಲಿತ ವಾಹನಗಳು ಹೆಚ್ಚು ದೂರ ಚಲಿಸಲು ಸಾಧ್ಯವಾಗುತ್ತದೆ. ಇಂತಹ ವಿಚಾರಗಳನ್ನು ರಾಜ್ಯಸಭೆಯಲ್ಲಿ ಸುಧಾಮೂರ್ತಿಯವರು ಮಂಡಿಸಿದ್ದಾರೆ. ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಪ್ರೋತ್ಸಾಹಿಸುವ ಕೇಂದ್ರ ಸರಕಾರ ಈ ವಿಷಯದಲ್ಲಿಯೂ ಯೋಜನೆ ಹಾಕಿಕೊಳ್ಳಬೇಕಾಗಿದೆ.
Leave A Reply