ಕರಾವಳಿಯಲ್ಲಿ ಮೀನುಗಳ ಕೊರತೆ.. ಸಿಗಡಿ ಮೀನುಗಳು ಸಿಗುತ್ತಿಲ್ಲ!
ಪರ್ಸಿನ್ ಬೋಟ್ ಗಳು ಅಗಸ್ಟ್ 10 ರಿಂದ ಕಡಲಿಗೆ ಇಳಿದಿದ್ದು, ಅವುಗಳಿಗೆ ಮೀನು ಲಭಿಸುತ್ತಿಲ್ಲ. ಕಾರ್ಮಿಕರು ಆಳ ಸಮುದ್ರದಲ್ಲಿ ಮೀನಿನ ಗುಂಪಿಗೆ ಹುಡುಕಾಟ ನಡೆಸಿದ್ದಾರೆ.
ಎರಡು ವಾರವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗದೇ ಬಹುತೇಕ ಬೋಟ್ ಗಳು ಬಂದರಿನಲ್ಲೇ ಲಂಗರು ಹಾಕಿವೆ. ಯಾಂತ್ರೀಕೃತ ಮೀನುಗಾರಿಕೆ ಆರಂಭಿಕ ಅವಧಿಯಲ್ಲೇ ಹೇರಳ ಪ್ರಮಾಣದಲ್ಲಿ ಮೀನು ಬೇಟೆಯಾಡುತ್ತಿದ್ದ ಟ್ರಾಲ್ ಬೋಟ್ ಮೀನುಗಾರರಿಗೆ ಈ ಬಾರಿ ನಿರಾಸೆಯಾಗಿದೆ.
ಕರಾವಳಿಯಲ್ಲಿ ಸಾವಿರಾರು ಟ್ರಾಲ್ ಬೋಟ್ ಗಳಿವೆ. ಕೆಲ ಬೋಟ್ ನವರಿಗೆ ಅಲ್ಪ ಪ್ರಮಾಣದಲ್ಲಿ ಸಿಗಡಿ ಮತ್ತು ಇತರೆ ಮೀನುಗಳು ಸಿಕ್ಕವು. ಉಳಿದ ಬೋಟ್ ನವರು ಬರಿಗೈಯಲ್ಲಿ ಮರಳಿದ್ದಾರೆ.
ಟ್ರಾಲ್ ಬೋಟುಗಳಿಗೆ ಅಗಸ್ಟ್ ಆರಂಭದ 20 ದಿನ ಮಾತ್ರ ಸಿಗಡಿ ಮೀನು ಸಿಗುತ್ತವೆ. ಪ್ರತಿ ವರ್ಷ ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಂಡ ಅವಧಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ಸಿಗಡಿ ಮೀನು ಲಭಿಸುತ್ತಿತ್ತು. ಇದೇ ಮೊದಲ ಬಾರಿಗೆ ಆರಂಭಿಕ ಅವಧಿಯಲ್ಲೇ ಮೀನಿನ ಕೊರತೆ ಕಾಡುತ್ತಿದೆ. ಸಮುದ್ರ ಪ್ರಕ್ಷುಬ್ಧವಾಗಿದೆ. ಎರಡು ವಾರದಲ್ಲಿ ಎಂಟು ದಿನ ಬೋಟ್ ಗಳು ಮೀನು ಬೇಟೆಗೆ ತೆರಳಿದರೂ ಖಾಲಿ ಮರಳಿವೆ. ಡಿಸೀಲ್, ಕಾರ್ಮಿಕ ವೆಚ್ಚ ಸೇರಿ ಲಕ್ಷಾಂತರ ಮೊತ್ತ ವ್ಯಯಿಸಿದ್ದೇವೆ. ಕನಿಷ್ಟ 15 ಸಾವಿರ ಗಳಿಸಲು ಸಾಧ್ಯವಾಗಿಲ್ಲ.
Leave A Reply