ತುಳು ರಂಗಭೂಮಿ ನಟ ಅಶೋಕ್ ಶೆಟ್ಟಿ ಅಂಬ್ಲಿಮೊಗರು ಹಠಾತ್ ನಿಧನ
Posted On August 13, 2024
ತುಳು ಭಾಷೆಯ ಜನಪ್ರಿಯ ನಾಟಕ ಒರಿಯರ್ದೋರಿ ಅಸಲ್ ನಲ್ಲಿ ತೆಂಗಿನಕಾಯಿ ಕೀಳುವ ನಾಥು ಪಾತ್ರದ ಮೂಲಕ ಪ್ರಖ್ಯಾತಿ ಪಡೆದ ಅಶೋಕ್ ಶೆಟ್ಟಿ ಅಂಬ್ಲಿಮೊಗರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.
ಅಶೋಕ್ ಸೋಮವಾರ ಬೆಳಿಗ್ಗೆ ಅಂಬ್ಲಿಮೊಗರುವಿನ ತಮ್ಮ ಮನೆಯಲ್ಲಿ ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಗೆ ತಲುಪುವ ಮೊದಲೇ ಅವರು ಮೃತಪಟ್ಟರು.
ವೃತ್ತಿಪರ ನಾಟಕರಂಗದ ನಟರಾಗಿ, ಬರಹಗಾರರಾಗಿ ಗುರುತಿಸಿಕೊಂಡಿದ್ದ ಅಶೋಕ್ ಅವರು ಖ್ಯಾತ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮ ನಾಟಕ ತಂಡದಲ್ಲಿ ಆರಂಭದಿಂದಲೂ ಸೇವೆ ಸಲ್ಲಿಸಿದ್ದಾರೆ. ನಾಟಕಗಳನ್ನು ಬರೆಯುವ ಹವ್ಯಾಸ ಹೊಂದಿದ ಇವರ ಹಠಾತ್ ನಿಧನ ತುಳು ನಾಟಕ ಮತ್ತು ತುಳು ಸಿನೆಮಾ ರಂಗಕ್ಕೆ ದೊಡ್ಡ ನಷ್ಟ ಎಂದು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ತುಳುನಾಡು ನ್ಯೂಸ್ ಅವರ ಆತ್ಮಕ್ಕೆ ಸದ್ಗತಿ ಕೋರುತ್ತದೆ.
- Advertisement -
Trending Now
ದೇಶದ್ರೋಹಿ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ.
August 30, 2024
Leave A Reply