ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ ಧರಿಸಿದ ವಾಚ್ ಬೆಲೆ ಎಷ್ಟು?
Posted On August 14, 2024
0
ಜಾವಲೆನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವಾಗ ವಿಶೇಷ ವಾಚ್ ಒಂದನ್ನು ಧರಿಸಿದ್ದರು. 2024 ರ ಒಲಿಂಪಿಕ್ಸ್ ನಲ್ಲಿ ನೀರಜ್ ಭಾರತಕ್ಕೆ ಬೆಳ್ಳಿಪದಕ ಗೆಲ್ಲಿಸಿಕೊಟ್ಟಿದ್ದರು. ಪಾಕಿಸ್ತಾನದ ಅರ್ಶದ್ ನದೀಮ್ ಅವರು ಬಂಗಾರವನ್ನು ಗೆದ್ದಿದ್ದರು.
ಆ ಪಂದ್ಯದಲ್ಲಿ ನೀರಜ್ ಚೋಪ್ರಾ ಅವರು ಧರಿಸಿದ ವಾಚ್ ಒಮೇಗಾ ಸಿಮಾಸ್ಟರ್ ಅಕ್ವಾ ಟೇರಾ ಅಲ್ಟ್ರಾಲೈಟ್ ಟೀಟಾನಿಯಂ ಕಂಪೆನಿಯದ್ದು.
ಈ ವಾಚ್ ಅನ್ನು ಸ್ವಿಸ್ ವಾಚ್ ಕಂಪೆನಿ ಓಮೇಗಾ ನಿರ್ಮಿಸಿದ್ದು, ನೀರಜ್ ಚೋಪ್ರಾ ಈ ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಆಗಿ ಈ ವರ್ಷದ ಆರಂಭದಿಂದಲೇ ನೇಮಕಗೊಂಡಿದ್ದಾರೆ. ಅಂದ ಹಾಗೆ ನೀರಜ್ ಚೋಪ್ರಾ ಧರಿಸಿದ ವಾಚ್ ಬೆಲೆ ಕೇವಲ 52 ಲಕ್ಷ ರೂಪಾಯಿ.
Trending Now
ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
December 9, 2025
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
November 21, 2025









