ಅರುಣ್ ಯೋಗಿರಾಜ್ ಅವರಿಗೆ ವೀಸಾ ನಿರಾಕರಿಸಿದ ಅಮೇರಿಕಾ!
ಅಯೋಧ್ಯೆಯ ರಾಮಲಲ್ಲಾ ಶಿಲ್ಪಿ ಯೋಗಿರಾಜ್ ಅವರಿಗೆ ಅಮೇರಿಕಾ ಹೀಗೆ ಮಾಡುತ್ತದೆ ಎಂದು ಯಾರಿಗೂ ಊಹಿಸಲು ಸಾಧ್ಯವಿರಲಿಲ್ಲ. ಯಾಕೆಂದರೆ ಅಯೋಧ್ಯೆಯ ಬಾಲರಾಮನ ಮೂರ್ತಿಯನ್ನು ಕೆತ್ತಿ ಅಂತರಾಷ್ಟ್ರೀಯವಾಗಿ ಪ್ರಖ್ಯಾತಿಗೊಂಡಿರುವ ಯೋಗಿರಾಜ್ ಅವರ ವಿಷಯದಲ್ಲಿ ಅಮೇರಿಕಾ ವೀಸಾ ನಿರಾಕರಣೆ ಮಾಡುವ ಯಾವುದೇ ಸಾಧ್ಯತೆ ಇರಲಿಲ್ಲ.
ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಅಮೇರಿಕಾದ ಅಕ್ಕಾ ಸಮ್ಮೇಳನದಲ್ಲಿ ಭಾಗಿಯಾಗಲು ಮುಖ್ಯ ಅತಿಥಿಯಾಗಿ ಅವಕಾಶ ಬಂದಿದೆ. ಅಲ್ಲಿನ ಸಹ್ಯಾದ್ರಿ ಕನ್ನಡ ಸಂಘದಿಂದಲೂ ಸನ್ಮಾನ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ಇದೇ ನಿಟ್ಟಿನಲ್ಲಿ ಅಮೇರಿಕಾಕ್ಕೆ ತೆರಳಲು ಶಿಲ್ಪಿ ಅರುಣ್ ಯೋಗಿರಾಜ್ ವೀಸಾಗೆ ಅರ್ಜಿ ಹಾಕಿದ್ದಾರೆ. ಅದ್ರೆ ಅಮೇರಿಕಾ ಯಾವುದೇ ಕಾರಣ ನೀಡದೇ ವೀಸಾ ರಿಜೆಕ್ಟ್ ಮಾಡಿದೆ.
ಅಮೇರಿಕಾ ತಮ್ಮ ವೀಸಾ ತಿರಸ್ಕರಿಸಿರುವುದಕ್ಕೆ ಅರುಣ್ ಯೋಗಿರಾಜ್ ಬೇಸರಗೊಂಡಿದ್ದಾರೆ. ನಾನೇನೂ ಟೆರಿರಿಸ್ಟ್ ಅಲ್ಲ, ನಮ್ಮಂತಹ ಕಲಾವಿದರಿಗೆ ವೀಸಾ ನಿರಾಕರಿಸಿರುವುದು ಯಾಕೆ ಎಂದು ಗೊತ್ತಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮೈಸೂರು – ಕೊಡಗು ಸಂಸದ ಯದುವೀರ್ ಒಡೆಯರ್ ಅವರು ಯೋಗಿರಾಜ್ ಅವರಿಗೆ ಕರೆ ಮಾಡಿದ್ದಾರೆ. ಅವರು ಅವಕಾಶ ಮಾಡಿಕೊಟ್ಟರೆ ನಾನು ಅಮೇರಿಕಾಕ್ಕೆ ಹೋಗುತ್ತೇನೆ. ಹೊಸದಾಗಿ ಅರ್ಜಿ ಹಾಕಿ ಹೋಗಲ್ಲ ಎಂದು ಅರುಣ್ ಹೇಳಿದ್ದಾರೆ.
Leave A Reply