ಗೋರಖ್‌ಪುರ ದುರಂತ ಆರೋಪಿ ಡಾ.ಖಫೀಲ್ ಖಾನ್ ಬಂಧನ
ಗೋರಖ್‌ಪುರ: ಗೋರಖ್‌ಪುರದ ಸರಕಾರಿ ಸ್ವಾಮ್ಯದ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನಲ್ಲಿ ಆಮ್ಲಜನಕ ಕೊರತೆಯಿಂದ ಮಕ್ಕಳು ಮೃತಪಡಲು ಕಾರಣನಾದ ಆರೋಪದ ಮೇಲೆ ಶನಿವಾರ ಬೆಳಗ್ಗೆೆ ಆಸ್ಪತ್ರೆೆಯ ಡಾ.ಖಫೀಲ್ ಖಾನ್‌ನನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಆಸ್ಪತ್ರೆೆಯಲ್ಲಿರುವ ಆಮ್ಲಜನಕವನ್ನು ಅಕ್ರಮವಾಗಿ ತಮ್ಮ ಖಾಸಗಿ ಕ್ಲಿನಿಕ್‌ಗಾಗಿ ದುರ್ಬಳಕೆ ಮಾಡಿಕೊಂಡಿದ್ದು ಮತ್ತು ಸರಕಾರಿ ಆಸ್ಪತ್ರೆಯ ಹಣಕಾಸಿನ ವಿಚಾರದಲ್ಲಿ ಅವ್ಯವಹಾರ ನಡೆಸಿದ್ದ ಎಂದು ಖಫೀಲ್ ಖಾನ್ ವಿರುದ್ಧ ಆರೋಪಗಳಿವೆ. ಖಾಸಗಿ ಕ್ಲಿನಿಕ್‌ಗಾಗಿ ಆಮ್ಲಜನಕ ದುರ್ಬಳಕೆ ಮಾಡಿಕೊಂಡಿದ್ದರಿಂದ ನೂರಾರು ಮಕ್ಕಳು ಮೃತಪಟ್ಟಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ.
ಆರಂಭದಲ್ಲಿ ನೂರಾರು ಮಕ್ಕಳ ಪ್ರಾಣ ಉಳಿಸಲು ಡಾ. ಖಫೀಲ್ ಖಾನ್ ತಮ್ಮ ಖಾಸಗಿ ಆಸ್ಪತ್ರೆೆಯಿಂದ ಆಮ್ಲಜನಕ ತರಿಸಿ ಚಿಕಿತ್ಸೆೆ ನೀಡಿ ಹೀರೋ ಆಗಿದ್ದರು .ಆದರೆ ಆಸ್ಪತ್ರೆೆಯ ಸರಬರಾಜು ವಿಭಾಗದ ಮುಖ್ಯಸ್ಥ ಆಗಿದ್ದ ಖಫೀಲ್ ಖಾನ್ ಸರಿಯಾದ ನಿರ್ವಹಣೆ ಮಾಡಿರಲಿಲ್ಲ. ಆಗಸ್‌ಟ್ 9ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಸ್ಪತ್ರೆೆಗೆ ಭೇಟಿ ನೀಡಿದ್ದಾಗ ಆಸ್ಪತ್ರೆೆಯಲ್ಲಿ ಆಮ್ಲಜನಕ ಕೊರತೆ ಇದೆ ಎಂಬುದರ ಕುರಿತು ಸರಿಯಾದ ಮಾಹಿತಿ ನೀಡಿರಲಿಲ್ಲ ಎಂಬ ಆರೋಪವೂ ಡಾ.ಖಫೀಲ್ ಖಾನ್ ವಿರುದ್ಧ ಇದೆ. ಸದ್ಯ ಆರೋಫಿ ಖಫೀಲ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನಲ್ಲಿ ಆಗಸ್ಟ್ ನಲ್ಲಿ 415 ಮಕ್ಕಳು ಮೃತಪಟ್ಟಿದ್ದರು.
Leave A Reply