ಕರ್ನಾಟಕದ ಕ್ಷೀರಭಾಗ್ಯ ಹಾಲಿನ ಹುಡಿ ಹೈದ್ರಾಬಾದಿನಲ್ಲಿ ಪತ್ತೆ!
ಹೈದ್ರಾಬಾದಿನ ಪೊಲೀಸ್ ಕಮೀಷನರ್ ಅವರ ವಿಶೇಷ ಟಾಸ್ಕ್ ಪೋರ್ಸ್ ತಂಡ ಹೈದ್ರಾಬಾದಿನ ದಕ್ಷಿಣ – ಪೂರ್ವ ವಲಯದಲ್ಲಿ ಆಹಾರ ಸುರಕ್ಷತಾ ನಿಗಮದ ಅಧಿಕಾರಿಗಳೊಂದಿಗೆ ಸೇರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಹಳ ಮಹತ್ತರವಾದ ವಸ್ತುಗಳನ್ನು ಪತ್ತೆ ಮಾಡಿದ್ದಾರೆ. ವಿಜಯಪುರ ಕಾಲೋನಿಯ ತಾರನಕ ಎಂಬ ಏರಿಯಾದಲ್ಲಿ ನಡೆದ ಈ ದಾಳಿಯಲ್ಲಿ 5,280 ಕೆಜಿ ಅವಧಿ ಮೀರಿದ ಹಾಲಿನ ಪೌಡರ್ ಗಳ ಪೊಟ್ಟಣಗಳನ್ನು ಪತ್ತೆ ಮಾಡಿದ್ದಾರೆ. ಇದು ಸುಮಾರು 11.5 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳಾಗಿದ್ದು, ಈ ಪ್ರಕರಣದಲ್ಲಿ ಚಿತ್ತಬೊಯಿನ ದಾಮೋದರ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಈ ಹಾಲಿನ ಪೌಡರ್ ಕರ್ನಾಟಕದ ಕ್ಷೀರ ಭಾಗ್ಯ ಯೋಜನೆಯಲ್ಲಿ ಹಂಚಬೇಕಾಗಿತ್ತು. ಇದರ ಪ್ಯಾಕೇಟ್ ಗಳ ಮೇಲೆ ” ನಾಟ್ ಫಾರ್ ಸೇಲ್” ಎಂದು ಬರೆಯಲಾಗಿದೆ. ಅದನ್ನು ಮಾರುವುದು ಕಾನೂನು ಪ್ರಕಾರ ಅಪರಾಧ ಎಂದು ಗೊತ್ತಿದ್ದರೂ ಮಾರಲಾಗುತ್ತಿರುವುದನ್ನು ಗಮನಿಸುವಾಗ ಇದರ ಹಿಂದೆ ಬಹಳ ದೊಡ್ಡ racket ಇರುವ ಸಂಶಯ ಮೂಡಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಟಾಸ್ಕ್ ಪೋರ್ಸ್ ಡಿಸಿಪಿ ವೈ ವಿ ಎಸ್ ಸುಧೀಂದ್ರ ” ಆರೋಪಿ ಸಿಕಂದರಾಬಾದಿನ ಬೋಳಕಪುರದ ನಿವಾಸಿಯಾಗಿದ್ದು, ಅವಧಿ ಮೀರಿದ ನಂದಿನಿ ಹಾಲಿನ ಪೌಡರ್ ಪ್ಯಾಕೆಟ್ ಗಳನ್ನು ಕರ್ನಾಟಕದ ಶೋಲಾಪುರದ ರವಿಕಿರಣ್ ಅವರಿಂದ ಖರೀದಿಸುತ್ತಿದ್ದ. ಇದನ್ನು ಪ್ರತಿ ಕೆಜಿಗೆ 210 ರೂಪಾಯಿಯಂತೆ ಮಾರುತ್ತಿದ್ದ. ಅದರ ಮೇಲೆ ಮಾರುವಂತಿಲ್ಲ ಎನ್ನುವ ಲೇಬಲ್ ಇದ್ದರೂ ಜನರು ಅದನ್ನು ಖರೀದಿಸುತ್ತಿದ್ದರು. ಪನ್ನೀರ್, ಸ್ಪೀಟ್ಸ್ ಮತ್ತು ರೋಡ್ ಸೈಡ್ ಟೀ ಮಾರುವವರು ಇವನಿಂದ ಈ ಅವಧಿ ಮೀರಿದ ಹಾಲಿನ ಪೌಡರ್ ಖರೀದಿಸುತ್ತಿದ್ದರು. ಕರ್ನಾಟಕದ ಕ್ಷೀರಭಾಗ್ಯ ಹಾಲಿನ ಹುಡಿ ಅವಧಿ ಮೀರಿದ ಬಳಿಕ ಅಲ್ಲಿಗೆ ಹೋಗಿ ಹೋಯಿತು ಎನ್ನುವುದರ ತನಿಖೆ ನಡೆಯಬೇಕಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ, 2009 ಈ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ
Leave A Reply