ಕಾಶ್ಮೀರದಲ್ಲಿ ಲಷ್ಕರೆ ಉಗ್ರನ ಹತ್ಯೆ
Posted On September 2, 2017
ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಶನಿವಾರ ಬೆಳಗ್ಗೆ ಲಷ್ಕರೆ ತಯ್ಯಬಾ ಉಗ್ರನೊಬ್ಬನನ್ನು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದಾರೆ.
ಉಗ್ರ ಮತ್ತು ಸೈನಿಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ದಕ್ಷಿಣ ಕಾಶ್ಮೀರ ವ್ಯಾಾಪ್ತಿಯ ಡಿಐಜಿ ತಿಳಿಸಿದ್ದಾರೆ. ಎಲ್‌ಇಟಿ ಉಗ್ರನನ್ನು ಇಶ್ಫಾಕ್ ಪದ್ದಾರ್ ಎಂದು ಗುರುತಿಸಲಾಗಿದ್ದು, ಬಳಿ ಇದ್ದ ಎಕೆ 47 ಗನ್ ವಶಪಡಿಸಿಕೊಳ್ಳಲಾಗಿದೆ ಎಂದು ಸೈನ್ಯದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾಾರೆ. ಶಕ್ರವಾರ ಸಂಜೆ ಉಗ್ರರು ನಡೆಸಿದ ದಾಳಿಯಲ್ಲಿ ಒಬ್ಬ ಪೊಲೀಸ್ ಮೃತಪಟ್ಟು, ಮೂವರು ನಾಗರಿಕರಿಗೆ ಗಾಯಗಳಾಗಿದ್ದವು. ಈ ದಾಳಿಗೆ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಉಗ್ರನನ್ನು ಹತ್ಯೆ ಮಾಡಲಾಗಿದೆ.
- Advertisement -
Leave A Reply