ಕಮಲ ಹಾಸನ್ ರಾಜಕೀಯ ಎಳಸು ಸಾಬೀತು
‘ನಾನು ಕೋಟ್ಯಂತರ ಅಭಿಮಾನಿಗಳನ್ನು ನನ್ನ ನಟನೆಯ ಮೂಲಕ ಗಳಿಸಿದ್ದೇನೆ. ಅವರಲ್ಲಿ ಅರ್ಧದಷ್ಟು ಜನರ ಬೆಂಬಲವನ್ನು ರಾಜಕೀಯದಲ್ಲಿ ಪಡೆಯುತ್ತೇನೆ ಎಂಬ ಭರವಸೆ ಇದೆ. ನನ್ನದು ಕೇಸರಿ ಬಣ್ಣ ಅಲ್ಲ.’ ಇದು ಕಮಲ ಹಾಸನ ಇತ್ತೀಚೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ಬಳಿಕ ನೀಡಿದ ಹೇಳಿಕೆ. ಇಲ್ಲಿ ಕಮಲ್ ಹಾಸನ್ ಎರಡನ್ನು ಸ್ಪಷ್ಟಪಡಿಸಲು ಯತ್ನಿಸಿದ್ದಾಾರೆ. ಆದರೆ ಅದರಲ್ಲಿ ಯಶಸ್ವಿಯಾಗುವಲ್ಲಿ ವಿಫಲರಾಗಿ, ತಾವೂ ಇನ್ನು ರಾಜಕೀಯದಲ್ಲಿ ಎಳಸು ಎಂಬುದನ್ನು ಸಾಬೀತು ಮಾಡಿದ್ದಾರೆ.
ಒಂದು ತಾನು ಬಿಜೆಪಿ, ಆರ್‌ಎಸ್‌ಎಸ್ ಜತೆ ಸೇರುವುದಿಲ್ಲ, ಎರಡನೇಯದಾಗಿ ನನ್ನ ಅಭಿಮಾನಿಗಳು ನನ್ನ ಜತೆ ರಾಜಕೀಯದಲ್ಲೂ ಇರುತ್ತಾರೆ ಎಂಬುದನ್ನು. ಆದರೆ ಅವಕಾಶ ಸಿಕ್ಕಾಗಲೆಲ್ಲಾಾ ರಾಜಕಾರಣಿಗಳ ಮತ್ತು ಅಧಿಕಾರ, ನೀತಿ ನಿಯಮಗಳ ಕುರಿತು ಟೀಕೆ, ವಿಮರ್ಶೆ ಮಾಡುತ್ತಿದ್ದ ಕಮಲ್ ಹಾಸನ್ ‘ತಮ್ಮ ಅಭಿಮಾನಿಗಳಲ್ಲಿ ಅರ್ಧದಷ್ಟು ಅಭಿಮಾನಿಗಳ ಬೆಂಬಲ ರಾಜಕೀಯದಲ್ಲಿ ಪಡೆಯುತ್ತೇನೆ ಎಂಬುದರ ಹಿಂದೆ, ತಾವೂ ಇಂದು ರಾಜಕೀಯದಲ್ಲಿ ಅಪ್ರಸ್ತುತ ಯೋಚನೆಯನ್ನು ಬಿತ್ತುತ್ತಿದ್ದೇನೆ, ಜತೆಗೆ ನಾನು ಮೋದಿ, ಬಿಜೆಪಿ ಜತೆ ಹೋಗುವುದಿಲ್ಲ ಎಂದು ಕಂಠಶೋಷಣೆ ಮಾಡಿಕೊಂಡಿದ್ದಾರೆ. ಹೊರತು ಇದರಲ್ಲಿ ಅವರು ಸಾಧಿಸಿದ್ದು ಶೂನ್ಯ.
ಥೇಟರ್‌ನಲ್ಲಿ ಸಿಳ್ಳೆ ಹೊಡೆಯುವ, ನಟನೆಗೆ ಜೈ ಕಾರ ಹಾಕುವ ಜನರು, ವೋಟು ಹಾಕುತ್ತಾರೆ ಎಂದು, ಅದರಲ್ಲೂ ಒಂದು ಸ್ಪಷ್ಟ ಗುರಿ, ನಿರ್ದೇಶನವಿಲ್ಲದೇ ಬೆಂಬಲ ನೀಡುತ್ತಾರೆ ಎಂದು ಹೇಳುತ್ತಾ ತಿರುಗಾಡುವ ಕಮಲ್ ಹಾಸನ್‌ಗೆ ಜನ ಬೆಂಬಲಿಸುತ್ತಾರೆ ಎಂಬುದು ವಾಸ್ತವಕ್ಕೆೆ ಬಹು ದೂರ.
62 ವಯಸ್ಸಿನ ಕಮಲ್ ಹಾಸನ್ ಹಲವು ದಿನಗಳಿಂದ ರಾಜಕೀಯ ಸೇರ್ಪಡೆಯಾಗುವ ಮಾತು ಅವರ ವಯಸ್ಸಿನಷ್ಟೇ ಹಳತಾಗಿದೆ. ವೃತ್ತಿ ಜೀವನದ ನಿವೃತ್ತಿಯ ಹೊತ್ತಿನಲ್ಲಿ ಅತ್ತ ಡಿಎಂಕೆ ಸಮಾವೇಶದಲ್ಲಿ ಭಾಗಿಯಾಗುವುದು, ಇತ್ತ ಕಮ್ಯುನಿಸ್ಟ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಭೇಟಿಯಾಗುವುದು ಮಾಡುತ್ತಾ ತಮಗೆ ಒಂದು ಸ್ಪಷ್ಟ ದಿಕ್ಕು ದಿಸೆ ಇಲ್ಲ ಎಂಬುದು ಪದೇಪದೆ ಸಾಬೀತು ಮಾಡುತ್ತಿದ್ದಾರೆ.
ಮಂಜುನಾಥ್, ಎಸ್.ಎಂ,
ಖಾಸಗಿ ಉದ್ಯೋಗಿ ಮೈಸೂರು.
Leave A Reply