• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?

Tulunadu News Posted On October 2, 2024


  • Share On Facebook
  • Tweet It

ನಳಿನ್ ಕುಮಾರ್ ಕಟೀಲ್ ಈಗ ಯಾರು? ಅವರಿಗೆ ಈಗ ಪಕ್ಷದಲ್ಲಿ ಇರುವ ಜವಾಬ್ದಾರಿ ಏನು? ಅವರಿಗೆ ನಾಲ್ಕನೇ ಬಾರಿ ಲೋಕಸಭಾ ಟಿಕೆಟ್ ಯಾಕೆ ಕೊಟ್ಟಿಲ್ಲ? ಕೋಟಾ ಶ್ರೀನಿವಾಸ್ ಪೂಜಾರಿ ಅವರಿಂದ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ಅವರ ಹೆಸರು ಮುಂಚೂಣಿಯಲ್ಲಿದ್ದರೂ ಅವರಿಗೆ ಯಾಕೆ ಟಿಕೆಟ್ ಸಿಗಲಿಲ್ಲ? ವಿಧಾನಸಭೆಯಲ್ಲಿ ಸೋತು ಮನೆಯಲ್ಲಿ ಸುಮ್ಮನೆ ಇದ್ದವರಿಗೆ ಲೋಕಸಭಾ ಸ್ಥಾನ, ಒಂದು ಕ್ಷೇತ್ರದಲ್ಲಿ ಗೆಲ್ಲಲ್ಲ ಎಂದಾದರೆ ಬೇರೆ ಕ್ಷೇತ್ರದಲ್ಲಿ ಟಿಕೆಟ್, ವಿಧಾನಪರಿಷತ್ ಸ್ಥಾನದಲ್ಲಿದ್ದರೂ ಲೋಕಸಭೆಯಲ್ಲಿ ಅವಕಾಶ ಪಕ್ಷ ಹೀಗೆ ಅವಕಾಶ ಯಾರ್ಯಾರಿಗೋ ಸಿಗುತ್ತಿದ್ದರೂ ನಳಿನ್ ಯಾಕೆ ಎಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಈ ಎಲ್ಲಾ ಪ್ರಶ್ನೆಗಳು ದಕ್ಷಿಣ ಕನ್ನಡದ ರಾಜಕೀಯ ವಲಯದಲ್ಲಿ ಸುತ್ತಾಡುತ್ತಿದ್ದರೂ ನಳಿನ್ ಮಾತ್ರ ಸ್ಥಿತಪ್ರಜ್ಞ. ಯಾಕೆಂದರೆ ಅಂತಹ ಸ್ಥಿತಪ್ರಜ್ಞತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕನಿಗೆ ಮಾತ್ರ ಸಾಧ್ಯ.

ಪ್ರಚಾರಕನಿಂದ ಪ್ರಸ್ತುತದ ತನಕ, ನಳಿನ್ ಎಂಬ ಸ್ಥಿತಪ್ರಜ್ಞ!

ಗಾಳಿ ಬಂದ ಕಡೆ ತೂರುವ ಇವತ್ತಿನ ರಾಜಕೀಯ ಎಂಬ ಸಾಗರದಲ್ಲಿರುವ ಎಲ್ಲಾ ವರ್ಗದ ಜೀವಚರಗಳ ಮುಂದೆ ಸಾಗರ ತಳದಲ್ಲಿರುವ ಹವಳದಂತೆ ನಳಿನ್ ಕುಮಾರ್ ಕಟೀಲ್ ಸಾಗರಗರ್ಭದಲ್ಲಿದ್ದು ಶಾಂತಚಿತ್ತತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದೆಲ್ಲಾ ಅವರಿಗೆ ಹೇಗೆ ಸಾಧ್ಯವಾಯಿತು? ಅದಕ್ಕೆ ಕಾರಣ ಅವರೊಳಗೆ ಇರುವ ಸ್ವಯಂ ಸೇವಕ ಅವರನ್ನು ಹಾಗೆ ನೈತಿಕತೆ ಎಂಬ ಶ್ವೇತವಸ್ತ್ರದೊಳಗೆ ಕಾಪಾಡಿಕೊಂಡು ಬಂದಿದ್ದಾನೆ. ಸಾಮಾನ್ಯ ಹಳ್ಳಿಯ ಒಬ್ಬ ಯುವಕ ಸಂಘದ ತತ್ವ, ಸಿದ್ಧಾಂತಗಳಿಂದ ಆಕರ್ಷಿತನಾಗಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕನಾಗಿ, ಪಕ್ಷದಲ್ಲಿದ್ದರೆ ಮುಂದೆ ಶಾಸಕ, ಸಂಸದನಾಗುತ್ತೇನೆ ಎನ್ನುವ ಕನಿಷ್ಟ ನಿರೀಕ್ಷೆಗಳೂ ಇಲ್ಲದೆ ಪಕ್ಷ ಕಟ್ಟುವ ಕಾಯಕದಲ್ಲಿ ಇದ್ದ ವ್ಯಕ್ತಿಯನ್ನು ಸಂಸದ ಸ್ಥಾನಕ್ಕೆ ಟಿಕೆಟ್ ನೀಡುವ ಘೋಷಣೆ ಪಕ್ಷ ಮಾಡುವಾಗ ನಾನು ಪಕ್ಷದ ಸೇವೆ ಮಾಡುತ್ತೇನೆ, ಬೇರೆ ಯಾವ ಸ್ಥಾನಮಾನ ಬೇಡಾ ಎಂದು 2009 ರಲ್ಲಿ ಸ್ಪಷ್ಟವಾಗಿ ಹೇಳಿ ನಂತರ ಪಕ್ಷದ ವರಿಷ್ಠರ ಸೂಚನೆಯನ್ನು ಪಾಲಿಸಿ ಕಣಕ್ಕೆ ಇಳಿದು 15 ವರ್ಷ ಸಂಸದರಾಗಿ 2024 ರಲ್ಲಿ ಪಕ್ಷ ಬೇರೆಯವರಿಗೆ ಟಿಕೆಟ್ ಘೋಷಿಸಿದಾಗ ಹೊಸ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮ ವಹಿಸಿದ್ದು ಇದೇ ನಳಿನ್ ಕುಮಾರ್ ಕಟೀಲ್. ಆ ಬಳಿಕ ಯಾವುದೇ ಪದವಿ, ಹುದ್ದೆ ಇಲ್ಲದೆಯೂ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವೆ ಎಂದು ಹೃದಯಪೂರ್ವಕವಾಗಿ ಘೋಷಿಸಿರುವ ನಳಿನ್ ಅವರ ಬದುಕಿನ ಕಥೆಯ ಬಗ್ಗೆ ಪುಸ್ತಕ ಬಂದರೆ ಅದು ಸಂಘಟನೆ ಮತ್ತು ರಾಜಕೀಯಕ್ಕೆ ಬರುವವರಿಗೆ ಸ್ಫೂರ್ತಿಯಾಗಬಹುದು ಮತ್ತು ದಾರಿದೀಪವಾಗಬಹುದು.

ಈ ಎತ್ತರ ಸದ್ಯಕ್ಕೆ ಅಸಾಧ್ಯ!

ಇತ್ತೀಚೆಗೆ ಮುಂಬೈಯಲ್ಲಿ ಯುವಾ ಬ್ರಿಗೇಡ್ ನಳಿನ್ ಕುಮಾರ್ ಕಟೀಲ್ ಹಾಗೂ ಗೋಪಾಲ್ ಶೆಟ್ಟಿಯವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿ ನಳಿನ್ ಅವರ ಮಾತು ಕೇಳುವಾಗ ನಿಜಕ್ಕೂ ಇವರಿಗೆ ಮೋದಿಯವರ ಸಾಮೀಪ್ಯದಲ್ಲಿಯೇ ಇನ್ನಷ್ಟು ವರ್ಷಗಳ ಕಾಲ ಸೇವೆ ಮಾಡುವ ಅವಕಾಶ ಸಿಗಬೇಕಿತ್ತು ಎಂದು ಅನಿಸಿದ್ದು ಸಹಜ. ಅಧಿಕಾರದಲ್ಲಿದ್ದಾಗ ಎಲ್ಲರೂ ಕರೆಯುತ್ತಾರೆ. ಆದರೆ ನೀವು ಮಾಜಿಗಳಾದ ನಮ್ಮನ್ನು ಕರೆದು ಸನ್ಮಾನ ಮಾಡುತ್ತಿದ್ದಿರಿ, ತುಂಬಾ ಆಶ್ಚರ್ಯವಾಯಿತು. ನಮ್ಮಿಂದ ಈಗ ಯಾವುದೇ ಲಾಭ ಆಗುವುದಿಲ್ಲ ಎಂದು ಗೊತ್ತಿದ್ದರೂ ಹೀಗೆ ಕರೆದು ಪ್ರೀತಿ ನೀಡಿದ್ದಕ್ಕೆ ಅಭಿವಂದನೆ ಎಂದು ನಳಿನ್ ಭಾಷಣದಲ್ಲಿ ಹೇಳಿದಾಗ ಆ ಮನುಷ್ಯನ ಮಾತೃ ಹೃದಯ ಅನೇಕರಿಗೆ ನೆನಪಾದದ್ದು ನಿಜ. ಆದರೆ ನಳಿನ್ ಅವರು ಪ್ರಚಾರ ಪಡೆಯದೇ ಸಂಸದರಾಗಿ ಮಾಡಿದ ಕೆಲಸಗಳು, ಪಕ್ಷದ ಅಧ್ಯಕ್ಷರಾಗಿ ರಾಜ್ಯವ್ಯಾಪಿ ಓಡಾಟ, ಹಿಂದೂ ಮುಖಂಡರಿಗೆ, ಕಾರ್ಯಕರ್ತರಿಗೆ ಮಾಡಿದ ವಿವಿಧ ಸಹಾಯ ಎಲ್ಲವೂ ಬಲ್ಲವರಿಗೆ ಗೊತ್ತೇ ಇದೆ. ಏನೂ ಗೊತ್ತಿಲ್ಲದವರು ಯಾರದ್ದೋ ಅಸಹಕಾರ, ವಿರೋಧ ಪಕ್ಷದ ರಾಜಕೀಯ, ಇನ್ಯಾರದ್ದೋ ನಿರ್ಲಕ್ಷತೆಯಿಂದ ಹದಗೆಟ್ಟಿರುವ ಮಂಗಳೂರು – ಬೆಂಗಳೂರು ಹೆದ್ದಾರಿಗೆ ಇವರನ್ನು ಪರೋಕ್ಷವಾಗಿ ದೂಷಿಸಿ ಟಾಂಗ್ ನೀಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ರಾಜಕೀಯ ಮಾಡುತ್ತಿರುವ ಭಾರತೀಯ ಜನತಾ ಪಾರ್ಟಿ ಆಗಲಿ ಕಾಂಗ್ರೆಸ್ ಆಗಲಿ ನಳಿನ್ ಅವರು ಏರಿದ್ದ ಎತ್ತರಕ್ಕೆ ಏರುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ. ಒಂದೇ ಗಂಟಿನಲ್ಲಿ ಹದಿನೈದು ವರ್ಷ ಲೋಕಸಭಾ ಸಂಸದರಾಗಿ ನಮ್ಮ ಜಿಲ್ಲೆಯಿಂದ ಯಾರೂ ದೆಹಲಿಗೆ ಹೋಗಿಲ್ಲ. ದೇಶದ ಅತೀ ದೊಡ್ಡ ರಾಜಕೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡದ ಬಿಜೆಪಿಯಲ್ಲಿ ಯಾರಿಗೂ ನಾಲ್ಕೂವರೆ ವರ್ಷ ಪಕ್ಷ ಜವಾಬ್ದಾರಿ ನೀಡಿಲ್ಲ. ಇಷ್ಟು ಸ್ಥಾನಮಾನ ಸಿಕ್ಕಿರುವುದು ಅವಿಭಜಿತ ದಕ್ಷಿಣ ಕನ್ನಡದಲ್ಲಿ ನಳಿನ್ ಅವರಿಗೆ ಮಾತ್ರ.

ಮೌನದಲ್ಲಿಯೇ ರಾಷ್ಟ್ರವ್ಯಾಪಿ ಇನ್ನಷ್ಟು ಸೇವೆ!

ಇಷ್ಟಾಗಿಯೂ ಸೋಲಿಲ್ಲದ ಸರದಾರನಿಗೆ ಈ ಬಾರಿ ಟಿಕೆಟ್ ಸಿಗದೇ ಇದ್ದಾಗ ನಳಿನ್ ಪಕ್ಷದ ಕಾರ್ಯವನ್ನು ಮಾಡಲು ಯಾವತ್ತೂ ಹಿಂದೇಟು ಹಾಕಲಿಲ್ಲ. ಅವರ ಸೇವೆಯನ್ನು ಜಿಲ್ಲೆ ಬಯಸಿದಾಗ ಇಲ್ಲಿಯೂ ಮನ:ಪೂರ್ವಕವಾಗಿ ಕೆಲಸ ಮಾಡಿದ್ದಾರೆ. ಒಡಿಶಾ ರಾಜ್ಯದಲ್ಲಿ ಪಕ್ಷದ ಸದಸ್ಯತ್ವ ಅಭಿಯಾನದ ಮೇಲು ಉಸ್ತುವಾರಿಯಾಗಿ ಪಕ್ಷ ಕಳುಹಿಸಿಕೊಟ್ಟಾಗ ಅಲ್ಲಿಯೂ ದಿನಗಟ್ಟಲೆ ಇದ್ದು ಅಲ್ಲಿನ ಕಾರ್ಯಕರ್ತರೊಂದಿಗೆ, ಮುಖಂಡರಿಗೆ ತಮ್ಮ ಅನುಭವವನ್ನು ಧಾರೆ ಎರೆದಿದ್ದಾರೆ. ಮಹಾರಾಷ್ಟ್ರದಲ್ಲಿರುವ ತುಳು-ಕನ್ನಡಿಗರು ತೊಂದರೆ ಅನುಭವಿಸಿದಾಗ ಅಲ್ಲಿನ ಉಪಮುಖ್ಯಮಂತ್ರಿ ಪಡ್ನವೀಸ್ ಅವರನ್ನು ಮಾತನಾಡಿಸಿ ನಿಯೋಗ ತೆಗೆದುಕೊಂಡು ಹೋಗಿ ಸಂಕಷ್ಟವನ್ನು ಪರಿಹರಿಸಿದ್ದಾರೆ. ಇದೆಲ್ಲಾ ಕಾರ್ಯವನ್ನು ಅವರು ಯಾವುದೇ ನಿರೀಕ್ಷೆ ಇಟ್ಟುಕೊಂಡು ಮಾಡಿಲ್ಲ. ಅದನ್ನೇ ಇಟ್ಟುಕೊಂಡು ಲಾಬಿ ಕೂಡ ಮಾಡಿಲ್ಲ. ನಳಿನ್ ಅವರ ಹೆಸರು ವಿಧಾನಪರಿಷತ್ ಉಪಚುನಾವಣೆಯ ಈ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದರೂ ಅವರದ್ದು ಮಾತ್ರ “ಪಕ್ಷ ಹೇಳಿದರೆ ಮಾತ್ರ ಸ್ಪರ್ಧೆ. ಇಲ್ಲದಿದ್ದರೆ ಯಾರಿಗೆ ಟಿಕೆಟ್ ನೀಡುತ್ತಾರೋ ಅವರನ್ನು ಗೆಲ್ಲಿಸಲು ಕೆಲಸ.”

ಸಂಘನಿಷ್ಠೆ, ಪಕ್ಷನಿಷ್ಟೆಯೊಂದಿಗೆ ಯಾವತ್ತೂ ದೃಢ!

ವಿಧಾನ ಪರಿಷತ್ ಉಪ ಚುನಾವಣೆಗೆ ಕಿಶೋರ್ ಕುಮಾರ್ ಪುತ್ತೂರು ಅವರಿಗೆ ಟಿಕೆಟ್ ನೀಡಿದಾಗ ಪುತ್ತೂರಿನಲ್ಲಿ ಪಕ್ಷ ಮತ್ತೆ ಸಂಘಟನಾತ್ಮಕವಾಗಿ ಬಲಿಷ್ಟವಾಗಬೇಕು, ಕಾರ್ಯಕರ್ತರ ಧ್ವನಿಗೆ ವೇದಿಕೆ ಸಿಗಬೇಕು ಎನ್ನುವ ಕಾರಣಕ್ಕೆ ಮತ್ತೆ ಟೊಂಕ ಕಟ್ಟಿ ಪಕ್ಷ ಮೊದಲು ಎನ್ನುವ ಸಿದ್ಧಾಂತದಡಿ ಕೆಲಸ ಮಾಡಲು ನಳಿನ್ ಮುಂದಾಗಿದ್ದಾರೆ. ಭಾರತವನ್ನು ಪರಮ ವೈಭವಕ್ಕೆ ತೆಗೆದುಕೊಂಡು ಹೋಗುತ್ತಿರುವ ನರೇಂದ್ರ ಮೋದಿಜಿಯವರು ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಸಂಸತ್ತಿನಲ್ಲಿ ರಾಮ ಮಂದಿರದ ವಿಷಯ, ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿಯ ವಿಷಯ, ತ್ರಿವಳಿ ತಲಾಖ್ ಸಹಿತ ಅನೇಕ ಮೈಲಿಗಲ್ಲುಗಳಿಗೆ ಸಂಸದನಾಗಿ ಸಾಕ್ಷಿಯಾಗಿರುವ ಖುಷಿಯೊಂದಿಗೆ ನಳಿನ್ ಮತ್ತೆ ಶಕ್ತಿಯಿರುವ ತನಕ ಪಕ್ಷದ ಸೇವೆ ಮಾಡಲು ಮುಂದಾಗಿದ್ದಾರೆ. ಯಾವುದೇ ನಿರೀಕ್ಷೆಗಳಿಲ್ಲದೇ, ಸೇವೆಯಲ್ಲಿ ತೊಡಗುವ ವ್ಯಕ್ತಿ ಯಾವುದೇ ಅಧಿಕಾರಕ್ಕೆ ಕೊರಗುವುದಿಲ್ಲ. ನಳಿನ್ ಅವರದ್ದು ಅದೇ ಮನಸ್ಥಿತಿ, ಭಾರತದ ಅಸ್ಮಿತೆಯಾಗಿರುವ ಹಿಂದೂತ್ವದ ಕೆಲಸದಲ್ಲಿ ಹೋರಾಟಗಾರನಾಗಿ ಕೆಲಸ ಮಾಡುವುದರಲ್ಲಿ ಯಾವತ್ತೂ ಖುಷಿಯಿದೆ. ನಾವು ಹಿಂದೂ ಮುಖಂಡರಲ್ಲ, ಹಿಂದೂ ಧರ್ಮಕ್ಕೆ ಬೇಕಾಗಿರುವುದು ಮುಖಂಡರಲ್ಲ, ಹೋರಾಟಗಾರರು. ಅದಕ್ಕೆ ನಾವು ಯಾವತ್ತೂ ಸಿದ್ಧ ಎಂದು ಹೇಳುವ ನಳಿನ್ ಕುಮಾರ್ ಕಟೀಲ್ ಎನ್ನುವ ಸಂಘ ನಿಷ್ಠ, ಪಕ್ಷ ನಿಷ್ಠರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡಿ ಜನಸೇವೆಯಲ್ಲಿ ಯಥಾಪ್ರಕಾರ ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿಯವರೆಗೆ ಜನರ ಮಧ್ಯದಲ್ಲಿ ಇರಲು ಪಕ್ಷ ಅವಕಾಶ ಮಾಡಿಕೊಟ್ಟೇ ಕೊಡುತ್ತದೆ ಎಂಬ ಅಪೇಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷಕ್ಕಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವವರು ಇದ್ದಾರೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search