ಪುರುಷ ಟೈಲರ್ ಮಹಿಳೆಯ ಅಳತೆ ತೆಗೆಯುವಂತಿಲ್ಲ – ಯುಪಿ ಮಹಿಳಾ ಆಯೋಗ
Posted On November 8, 2024

ಉತ್ತರ ಪ್ರದೇಶದ ಮಹಿಳಾ ಆಯೋಗ ರಾಜ್ಯದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ತೆಗೆದುಕೊಳ್ಳಬಹುದಾದ ಅನೇಕ ಕ್ರಮಗಳ ಬಗ್ಗೆ ವರದಿಯನ್ನು ತಯಾರಿಸಿದೆ. ಅದರಲ್ಲಿ ಪ್ರಮುಖವಾಗಿರುವ ಕೆಲವು ವಿಷಯಗಳು ಇಲ್ಲಿವೆ. ಮೊದಲನೇಯದಾಗಿ ಮಹಿಳೆಯರ ಬಟ್ಟೆಯ ಅಳತೆಯನ್ನು ಪುರುಷರು ತೆಗೆದುಕೊಳ್ಳುವಂತಿಲ್ಲ. ಇನ್ನು ಜಿಮ್ ಗಳಲ್ಲಿ ಮತ್ತು ಯೋಗ ತರಗತಿಗಳಲ್ಲಿ ಮಹಿಳೆಯರಿಗೆ ಮಹಿಳೆಯರೇ ತರಬೇತಿ ನೀಡಬೇಕು. ಮೂರನೇಯದಾಗಿ ಬಸ್ ಗಳಲ್ಲಿ ಮಹಿಳಾ ಸುರಕ್ಷತಾ ಸಿಬ್ಬಂದಿಗಳನ್ನೇ ನೇಮಿಸಬೇಕು. ಇನ್ನು ಮಹಿಳಾ ಉಡುಗೆಗಳ ಮಳಿಗೆಗಳಲ್ಲಿ ಮಹಿಳಾ ಸಿಬ್ಬಂದಿಗಳನ್ನೇ ನೇಮಿಸಬೇಕು.
ಇಂತಹ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಮಹಿಳಾ ಆಯೋಗ ಅಕ್ಟೋಬರ್ 28 ರಂದು ಲಕ್ನೋದಲ್ಲಿ ಸಭೆ ಸೇರಿ ಚಿಂತನೆ ನಡೆಸಿದೆ. ಇದೇ ಸಂದರ್ಭದಲ್ಲಿ ಬೇರೆ ಬೇರೆ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಯುಪಿ ಮಹಿಳಾ ಆಯೋಗದ ಸದಸ್ಯರು ಸಮಾಲೋಚನೆ ನಡೆಸಿದರು.
ಆಯೋಗದ ಸದಸ್ಯೆ ಮನೀಶಾ ಅಹ್ಲಾವಟ್ ಮಾತನಾಡಿ ” ಈ ನಿಯಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಸದ್ಯ ಈ ವಿಷಯ ಪ್ರಾಥಮಿಕ ಹಂತದಲ್ಲಿದೆ. ಇದರ ಸಾಧ್ಯಾಸಾಧ್ಯತೆಯ ಬಗ್ಗೆ ಯೋಚಿಸಬೇಕಾಗಿದೆ. ಒಂದು ವೇಳೆ ಅದು ಸಮಂಜಸ ಎಂದು ತಿಳಿದುಬಂದರೆ ಅದರ ಮಸೂದೆ ರಚನೆ ಮಾಡಿ ಸರಕಾರಕ್ಕೆ ಸಲ್ಲಿಸಬೇಕಾಗುವುದು. ನಂತರ ಸರಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ” ಎಂದು ತಿಳಿಸಿದರು. ಇತ್ತ ಈ ಕ್ರಮಗಳು ಯೋಚನಾ ಹಂತದಲ್ಲಿ ಇರುವಾಗಲೇ ಅತ್ತ ಶಾಮ್ಲಿ ಜಿಲ್ಲೆಯ ಜಿಲ್ಲಾ ಪ್ರೊಭೆಶನರಿ ಅಧಿಕಾರಿ ಹಮೀದ್ ಹುಸೇನ್ ಅವರು ಸುತ್ತೋಲೆ ಹೊರಡಿಸಿದ್ದು ಮಹಿಳಾ ತರಬೇತುದಾರರನ್ನೇ ಜಿಮ್, ಯೋಗ ಮತ್ತು ನಾಟಕ ಕಲಿಕಾ ಕೇಂದ್ರಗಳಲ್ಲಿ ಮಹಿಳೆಯರ ತರಬೇತಿಗಾಗಿ ನೇಮಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ. ಇನ್ನು ಇಂತಹ ಕಡೆಗಳಲ್ಲಿ ಸಿಸಿಟಿವಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು ಎಂದು ಸೂಚಿಸಿದ್ದಾರೆ.
ಇನ್ನು ಹುಸೇನ್ ಅವರು ” ಮಹಿಳಾ ಸುರಕ್ಷಾಕರ್ಮಿ ಮತ್ತು ಶಿಕ್ಷಕಿಯನ್ನು ಶಾಲಾ ಬಸ್ಸುಗಳಲ್ಲಿ ನೇಮಿಸಲು ಮತ್ತು ಮಹಿಳಾ ಬಟ್ಟೆ ಹೊಲಿಗೆ ಕೇಂದ್ರಗಳಲ್ಲಿ ಅಳತೆಗೆ ಮಹಿಳೆಯರನ್ನೇ ನೇಮಿಸಲು ಸೂಚಿಸಿದ್ದಾರೆ. ಯುಪಿಯ ಸಾಮಾಜಿಕ ಕಾರ್ಯಕರ್ತೆ ವೀಣಾ ಅಗರ್ವಾಲ್ ಅವರು ಈ ನಿಯಮಗಳನ್ನು ಸ್ವಾಗತಿಸಿದ್ದು, ಮಹಿಳಾ ಸುರಕ್ಷತೆಗಾಗಿ ಈ ಕ್ರಮಗಳು ಅತ್ಯಗತ್ಯ ಎಂದು ಹೇಳಿದ್ದಾರೆ.

- Advertisement -
Trending Now
ಕಾಶಿಯಲ್ಲಿ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಗಂಗಾಸ್ನಾನ
March 15, 2025
ಮಲ್ಟಿಪ್ಲೆಕ್ಸ್ ಟಿಕೆಟ್ ದರ ಗರಿಷ್ಟ 200 ರೂಗೆ ಫಿಕ್ಸ್ ಯಾವಾಗ?
March 14, 2025
Leave A Reply