ಹಿಂದೂಸ್ಥಾನದಲ್ಲಿ ಇಸ್ಲಾಂ ಧ್ವಜ ಹಾರುವುದು ನಿಶ್ಚಿತ: ಉಗ್ರ ಮುಸಾ ಸವಾಲು
ದೆಹಲಿ: ಭಾರತವನ್ನು ಗೋರಕ್ಷ ಮೋದಿ ಮತ್ತು ಹಿಂದುಗಳಿಂದ ಮೋಕ್ಷ ನೀಡಲಾಗುವುದು. ಇದನ್ನು ತಡೆಯಲು ಯಾವನಿಂದಲೂ ಸಾಧ್ಯವಿಲ್ಲ. ನರೇಂದ್ರ ಮೋದಿಗೆ ತಾಕತ್ತಿದ್ದರೇ ಹಿಂದೂಸ್ಥಾನದಲ್ಲಿ ಮುಸ್ಲಿಂ ಧ್ವಜ ಹಾರಾಡುವುದನ್ನು ತಡೆಯಲಿ ಎಂದು ಅಲ್‌ಕೈದಾ ಕಾಶ್ಮೀರ ಘಟಕ ಅನ್ಸರ್ ಘಜಾವತ್ ಉಲ್ ಹಿಂದ್‌ನ ಉಗ್ರ ಝಾಕೀರ್ ಮುಸಾ ಸವಾಲು ಹಾಕಿದ್ದಾನೆ.
ಭಾರತದಲ್ಲಿ ಇಸ್ಲಾಾಂ ಧರ್ಮ ಸ್ಥಾಾಪನೆ ಖಚಿತ. ಹಿಂದೂ ಆಡಳಿತಗಾರರನ್ನು ಕಟ್ಟಿ ಎಳೆದೊಯ್ಯುವ ಕಾಲ ಬರಲಿದೆ. ಸರಪಳಿ ಹಾಕಿ ದರದರನೆ ಎಳೆದೊಯಲಾಗುವುದು ಎಂದು ಆಡಿಯೋದಲ್ಲಿ ಹೇಳಿದ್ದು, ಈ ಮಾತುಗಳು ಯ್ಯೂಟೂಬ್‌ನಲ್ಲಿ ಬಹಿರಂಗವಾಗಿವೆ.
ರೋಯಿಂಗ್ ಹ್ಯಾಾಮ್ ಮುಸ್ಲಿಂರನ್ನು ಕಾಶ್ಮೀರದಿಂದ ಗಡೀಪಾರು ಮಾಡುವುದಕ್ಕೂ ಎಚ್ಚರಿಕೆ ನೀಡಿದ್ದಾನೆ. ಗೋ ಪೂಜಕ ನರೇಂದ್ರ ಮೋದಿ ರಾಜಕಾರಣದ ಮೂಲಕ ಎಷ್ಟೇ ಶಕ್ತಿ ಸಂಪಾದಿಸಿದರೂ ಇಸ್ಲಾಂ ರಾಷ್ಟ್ರ ಸ್ಥಾಪನೆ ತಡೆಯಲು ಸಾಧ್ಯವಿಲ್ಲ ಎಂದು ಉರ್ದು ಭಾಷೆಯಲ್ಲಿ ಬಿಡುಗಡೆಯಾಗಿರುವ ಆಡಿಯೋದಲ್ಲಿ ಎಚ್ಚರಿಕೆ ನೀಡಿದ್ದಾಾನೆ.
ಭಾರತದ ಸೇನೆ, ಕಾಶ್ಮೀರ ಪೊಲೀಸರು, ಸರಕಾರದ ಅಧಿಕಾರಿಗಳು, ರಾಜತಾಂತ್ರಿಕ ಕಚೇರಿಗಳು ನಮ್ಮ ಗುರಿ. ಅಲ್ಲದೇ ಜಿಹಾದಿ ಹೋರಾಟಕ್ಕೆೆ ಅಡ್ಡಿಯಾಗುವ ಯಾವುದೇ ವ್ಯಕ್ತಿಯನ್ನು ಬೀಡುವುದಿಲ್ಲ ಎಂದು ಶಪಥಗೈದಿದ್ದಾನೆ.
ಪಾಕಿಸ್ತಾನದ ವಿರುದ್ಧವೂ ಆಕ್ರೋಶ
ಪಾಕಿಸ್ತಾನವನ್ನು ಇಸ್ಲಾಾಂ ಜಿಹಾದ್ ಹೋರಾಟಗಾರರಿಗೆ ಮೋಸ ಮಾಡಿದೆ. ಅಮೆರಿಕವನ್ನು ಮೆಚ್ಚಿಸಲು ಪಾಕಿಸ್ತಾನ ಕಾಶ್ಮೀರಿ ಜಿಹಾದ್ ಹೋರಾಟಗಾರರಿಗೆ ಅನ್ಯಾಯ ಮಾಡಿದೆ. ಪಾಕಿಸ್ತಾನ ಸರಕಾರ ಜಿಹಾದ್ ತರಬೇತಿ ಶಿಬಿರ ಮುಚ್ಚಿದ್ದಲ್ಲದೇ, ಕಾಶ್ಮೀರಿ ಹೋರಾಟಗಾರರಿಗೆ ಬೆಂಬಲ ನೀಡದೇ ಬೆನ್ನಿಗೆ ಚೂರಿ ಹಾಕಿದೆ. ಜೀಹಾದ್ ಹೋರಾಟಕ್ಕೆೆ ಹುತಾತ್ಮರ ರಕ್ತ ಮತ್ತು ಅಲ್ಲಾನ ಆಶೀರ್ವಾದ ಇದ್ದರೇ ಸಾಕು ಎಂದು ಪಾಕಿಸ್ತಾನದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಯಾರೀ ಉಗ್ರ ಮೂಸಾ?
ಕಾಶ್ಮೀರದ ಜಿಹಾದಿ ಉಗ್ರ ಝಾಕೀರ್ ರಶೀದ್ ಭಟ್ ಹಿಜ್ಬುಲ್ ಮುಜಾಹಿದ್ದೀನ್ ಮೂಲಕ ಉಗ್ರ ಚಟುವಟಿಕೆ ಆರಂಭಿಸಿದ. ನಂತರ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಿಂದ ಹೊರಬಂದಿದ್ದ. ಅಲ್‌ಕೈದಾ ಉಗ್ರ ಸಂಘಟನೆಗೆ ಬೆಂಬಲಿಸಿ, ಕಾಶ್ಮೀರದಲ್ಲಿ ಹೊಸ ಹರ್ಕತ್ ಉಲ್ ಮುಜಾಹಿದ್ದೀನ್ ಮತ್ತು ಕಾಶ್ಮೀರ್ ತಾಲಿಬಾನ್ ಎಂಬ ಸಂಘಟನೆಗಳನ್ನು ಸ್ಥಾಪಿಸಿದ. ಬುರ್ಹಾನ್ ಮುಜಾಫರ್ ವಾನಿ ಹತ್ಯೆೆ ನಂತರ ಆತನ ಪಟ್ಟಕ್ಕೆೆ ಈತನೇ ಎಂದು ಬಿಂಬಿಸಲಾಗಿದೆ.
Leave A Reply