ಖಾಲಿಸ್ತಾನಿ ಉಗ್ರ ನಿಜ್ಜರ್ ಆಪ್ತ ಕೆನಡಾದಲ್ಲಿ ಅರೆಸ್ಟ್ !
Posted On November 11, 2024
ಅಮೇರಿಕಾದಲ್ಲಿ ಸರಕಾರ ಬದಲಾಗುತ್ತಿದ್ದಂತೆ ಕೆನಡಾದಲ್ಲಿಯೂ ಅಲ್ಲಿನ ಆಡಳಿತಗಾರರ ಮನಸ್ಥಿತಿ ಬದಲಾದಂತೆ ಕಾಣುತ್ತಿದೆ. ಇಲ್ಲಿಯ ತನಕ ಖಾಲಿಸ್ತಾನಿ ಉಗ್ರರ ಪೋಷಕರಂತೆ ಮಾತನಾಡುತ್ತಿದ್ದ ಕೆನಡಾ ಪ್ರಧಾನಿ ಈಗ ಕೊಂಚ ಬದಲಾದಂತೆ ಕಾಣುತ್ತಿದ್ದಾರೆ. ಕೆನಡಾದ ಪೊಲೀಸರು ಅರ್ಷದೀಪ್ ಸಿಂಗ್ ಆಲಿಯಾಸ್ ಅರ್ಷ್ ಡಲ್ಲಾನನ್ನು ಬಂಧಿಸಿದ್ದಾರೆ. ಡಲ್ಲಾ ಭಾರತಕ್ಕೆ ಬೇಕಿರುವ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಆಗಿದ್ದು, ಖಾಲಿಸ್ತಾನದ ಭಯೋತ್ಪಾದಕ ನಿಜ್ಜಾರ್ ಆಪ್ತವಲಯದಲ್ಲಿಯೂ ಗುರುತಿಸಿಕೊಂಡಿದ್ದ. ಕಳೆದ ತಿಂಗಳು ಅಕ್ಟೋಬರ್ 28 ರಂದು ಮಿಲ್ಟನ್ ನಲ್ಲಿ ನಡೆದ ಒಂದು ಶೂಟೌಟ್ ನಲ್ಲಿ ಈತ ಭಾಗಿಯಾಗಿದ್ದಾನೆ ಎನ್ನುವ ಅನುಮಾನದ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇದೇ ಸಪ್ಟೆಂಬರ್ ನಲ್ಲಿ ಪಂಜಾಬಿನ ಮೊಗ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡ ಬಲ್ಜಿಂದರ್ ಸಿಂಗ್ ಬಲ್ಲಿಯವರ ಕೊಲೆಯ ಹೊಣೆಯನ್ನು ಡಲ್ಲಾ ವಹಿಸಿಕೊಂಡಿದ್ದ. ಇನ್ನು ಸಿಖ್ ಹೋರಾಟಗಾರ ಗುರುಪ್ರೀತ್ ಸಿಂಗ್ ಹರಿ ಹತ್ಯಾ ಪ್ರಕರಣದಲ್ಲಿ ಡಲ್ಲಾ ಆಪ್ತರನ್ನು ಬಂಧಿಸಲಾಗಿದೆ. ಇನ್ನು ಜಸ್ವಂತ್ ಗಿಲ್ ಎನ್ನುವ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಜೈಲುಹಕ್ಕಿಯ ಹತ್ಯಾ ಪ್ರಕರಣದಲ್ಲಿಯೂ ಡಲ್ಲಾ ಸೂಚನೆ ಮೇರೆಗೆ ನವೆಂಬರ್ ನಲ್ಲಿ ಹತ್ಯೆಗೈಯಲಾಗಿತ್ತು ಎಂದು ಹೇಳಲಾಗುತ್ತದೆ. ನಿಜ್ಜರ್ ಆಪ್ತರಲ್ಲಿ ಕೆನಡಾ ಪೊಲೀಸರು ಇತ್ತೀಚಿನ ದಿನಗಳಲ್ಲಿ ಬಂಧಿಸಿದ ಎರಡನೇ ಭಯೋತ್ಪಾದ ಡಲ್ಲಾ. ನವೆಂಬರ್ 8 ರಂದು ಬ್ರಂಟನ್ ನಿವಾಸಿ ಇಂದ್ರಜಿತ್ ಗೋಸಾಲ್ ಎನ್ನುವವನ್ನು ಹಲ್ಲೆ ಆರೋಪದಡಿ ಬಂಧಿಸಲಾಗಿತ್ತು. ನಿಜ್ಜರ್ ಸಾವಿನ ನಂತರ ಅವನ ಸ್ಥಾನವನ್ನು ಗೋಸಾಲ್ ತುಂಬಿದ್ದ ಎಂದು ಹೇಳಲಾಗುತ್ತದೆ.
ಸದ್ಯ ಖಾಲಿಸ್ಥಾನದ ಟೈಗರ್ ಫೋರ್ಸಿನ ಉತ್ತರಾಧಿಕಾರಿಯಾಗಿ ಡಲ್ಲಾ ಕಾರ್ಯ ನಿರ್ವಹಿಸುತ್ತಿದ್ದ.
ಸದ್ಯ ಖಾಲಿಸ್ಥಾನದ ಟೈಗರ್ ಫೋರ್ಸಿನ ಉತ್ತರಾಧಿಕಾರಿಯಾಗಿ ಡಲ್ಲಾ ಕಾರ್ಯ ನಿರ್ವಹಿಸುತ್ತಿದ್ದ.
ಅರ್ಷಾ ಡಲ್ಲಾ, ರಾಷ್ಟ್ರೀಯ ತನಿಖಾ ದಳದ ವಾಟೆಂಡ್ ಪಟ್ಟಿಯಲ್ಲಿ ಇದ್ದಾನೆ. ಪಂಜಾಬಿನಲ್ಲಿ ಇತನ ಅಣತಿಯ ಮೇಲೆ ಕ್ರಿಮಿನಲ್ ಚಟುವಟಿಕೆ ನಡೆಸುವ ಕ್ರಿಮಿನಲ್ ಗಳ ತಂಡ ಇರುವುದರಿಂದ ಇವನನ್ನು ಬಂಧಿಸಿದರೆ ಅದು ಕೂಡ ನಿಯಂತ್ರಣಕ್ಕೆ ಬರುತ್ತದೆ ಎನ್ನುವುದು ಪೊಲೀಸರ ಅಭಿಪ್ರಾಯ. ಕೆನಡಾದ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿದ ಕೆಲವೇ ದಿನಗಳ ಒಳಗೆ ಡಲ್ಲಾ ಬಂಧಿತನಾಗಿದ್ದಾನೆ. ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ನಿಜ್ಜಾರ್ ನನ್ನು ಭಾರತದ ಸರಕಾರದ ಪ್ರಚೋದನೆಯಿಂದಲೇ ಹತ್ಯೆ ಮಾಡಲಾಗಿದೆ ಎಂದು ಕೆನಡಾ ಪ್ರಧಾನಿ ಹೇಳಿ ಭಾರತ ಅದನ್ನು ನಿರಾಕರಿಸಿತ್ತು. ನಂತರ ಕೆನಡಾ ತನ್ನ ಹೇಳಿಕೆಯ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲದೇ ಇದ್ದ ಕಾರಣ ತನ್ನ ಸಾಕ್ಷ್ಯದಿಂದ ಹಿಂದೆ ಸರಿದಿತ್ತು.
- Advertisement -
Trending Now
ಪಿ.ವಿ.ಸಿಂಧೂ ಮದುವೆಯಾಗುತ್ತಿರುವ ಗಂಡು ಯಾರು?
December 3, 2024
ಪ್ರಧಾನಿಯಾದ ಬಳಿಕ ಮೋದಿ ನೋಡಿದ ಮೊದಲ ಸಿನೆಮಾ ಇದು!
December 3, 2024
Leave A Reply