ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆ ಅಬಾರ್ಶನ್ ಮಾತ್ರೆಗಳಿಗೆ ತುಂಬಾ ಡಿಮಾಂಡ್!
ಅಮೇರಿಕಾದ ನೂತನ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ ಎರಡನೇ ಬಾರಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಅಬಾರ್ಶನ್ ಮಾತ್ರೆಗಳಿಗೆ ಬೇಡಿಕೆ ಏಕಾಏಕಿ ಹೆಚ್ಚಿರುವ ಘಟನೆ ಅಮೇರಿಕಾದಲ್ಲಿ ನಡೆದಿದೆ. ಅದಕ್ಕೆ ಕಾರಣ ಅಮೇರಿಕಾದ ಸುಪ್ರೀಂಕೋರ್ಟ್ ಕಳೆದ ಜೂನ್ ನಲ್ಲಿ ನೀಡಿರುವ ಐತಿಹಾಸಿಕ ತೀರ್ಪು. ಜನರಿಗೆ ಗರ್ಭಪಾತದ ಹಕ್ಕನ್ನು ನಿರಾಕರಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ಮುಂದಿನ ದಿನಗಳಲ್ಲಿ ಅಮೇರಿಕಾದಲ್ಲಿ ಕಾನೂನುಗಳು ಬದಲಾಗುವ ಸಾಧ್ಯತೆ ಇದೆ. ಆಗ ಅಧಿಕಾರದಲ್ಲಿದ್ದ ಬೈಡೆನ್ ಸರಕಾರ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಆದರೆ ಆಗ ಮಾಜಿ ಅಧ್ಯಕ್ಷರಾಗಿದ್ದ ಡೋನಲ್ಡ್ ಟ್ರಂಪ್ ಮತ್ತು ಬೆಂಬಲಿಗರು ಮಾತ್ರ ಗರ್ಭಪಾತ ಹಕ್ಕು ರದ್ದು ಮಾಡಿದ ತೀರ್ಪನ್ನು ಸ್ವಾಗತಿಸಿದ್ದರು.
ಆಗಲೇ ಅಮೇರಿಕಾದಲ್ಲಿ ರಿಪಬ್ಲಿಕನ್ ಪಕ್ಷದವರು ಆಡಳಿತ ಇರುವ ರಾಜ್ಯಗಳು ಗರ್ಭಪಾತವನ್ನು ಅಕ್ರಮ ಎಂದು ಘೋಷಿಸಿದ್ದವು. ಅದರಿಂದ ಅಮೇರಿಕಾದ 11 ರಾಜ್ಯಗಳು ಗರ್ಭಪಾತ ನಿಷೇಧ ಕಾನೂನು ಜಾರಿ ಮಾಡಿವೆ. ಡೆಮಾಕ್ರಾಟ್ ಪಕ್ಷ ಆಡಳಿತ ಇರುವ ಇತರ ರಾಜ್ಯಗಳಲ್ಲಿ ಈ ಕಾನೂನು ಜಾರಿ ಮಾಡಲಾಗಿಲ್ಲ. ಕಟ್ಟರ್ ಮೂಲಭೂತವಾದವನ್ನೇ ಅನುಸರಿಸುವ ಇಸ್ಲಾಮಿಕ್ ದೇಶಗಳಲ್ಲಿ ಗರ್ಭಪಾತಕ್ಕೆ ವಿರೋಧ ಇದೆ. ಹೆಚ್ಚಿನ ಮುಸಲೀಯರ ದೇಶಗಳಲ್ಲಿ ಗರ್ಭಪಾತ ನಿಷೇಧ ಕಾನೂನು ಇದೆ.
ಈಗ ಟ್ರಂಪ್ ಅಧಿಕಾರಕ್ಕೆ ಬಂದಿರುವುದರಿಂದ ಅವರು ಈ ಕಾನೂನನ್ನು ಪ್ರಬಲವಾಗಿ ಜಾರಿಗೆ ತಂದರೆ ಏನು ಮಾಡುವುದು ಎಂದು ಹೆದರಿರುವ ಅಸಂಖ್ಯಾತ ಯುವತಿಯರು ಅಬಾರ್ಶನ್ ಮಾತ್ರೆಗಳನ್ನು ಖರೀದಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಅಬಾರ್ಶನ್ ಮಾತ್ರೆಗಳನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಆನ್ ಲೈನ್ ನಲ್ಲಿ ಕೇವಲ 24 ಗಂಟೆಗಳಲ್ಲಿ 10 ಸಾವಿರ ಅಬಾರ್ಶನ್ ಮಾತ್ರೆಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಅಬಾರ್ಶನ್ ಮಾತ್ರೆಗಳನ್ನು ಪೂರೈಸುವ ಕಂಪೆನಿಗಳಿಗೆ ಭರ್ಜರಿ ಡಿಮಾಂಡ್ ಬಂದಿದೆ. ಎಷ್ಟರಮಟ್ಟಿಗೆ ಅಂದರೆ ಏಡ್ ಆಕ್ಸೆಸ್ ಕಂಪೆನಿಯ ವೆಬ್ ಸೈಟ್ ಕ್ರ್ಯಾಶ್ ಆಗಿದೆ ಮತ್ತು ಪ್ಲ್ಯಾನ್ ಸಿ ಎನ್ನುವ ವೆಬ್ ಸೈಟಿಗೆ ಒಂದೇ ದಿನ 82,200 ಮಂದಿ ಲಾಗಿನ್ ಆಗಿದ್ದಾರೆ. ಅಮೇರಿಕಾದ ರಾಜ್ಯಗಳಲ್ಲಿರುವ ಅಬಾರ್ಶನ್ ಕಾನೂನು ಬದ್ಧತೆಯಿಂದ ತಾವು ಸಿಕ್ಕಿಬೀಳಬಹುದು ಎನ್ನುವ ಭಯದಿಂದ ಯುವತಿಯರು ಅಬಾರ್ಶನ್ ಮಾತ್ರೆ, ಔಷಧಿಯನ್ನು ಜನರು ಮುಗಿಬಿದ್ದು ಖರೀದಿಸಿ ಸ್ಟಾಕ್ ಇಟ್ಟುಕೊಂಡಿದ್ದಾರೆ.
Leave A Reply