ಹರಿಪ್ರಿಯಾ – ವಸಿಷ್ಠ ಸಿಂಹ ಶೀಘ್ರದಲ್ಲಿ ಅಮ್ಮ – ಅಪ್ಪ…
Posted On November 19, 2024
ಕನ್ನಡ ಚಿತ್ರರಂಗದ ಸ್ಟಾರ್ ಜೋಡಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮುಂದಿನ ವರ್ಷ ಹೆತ್ತವರಾಗಲು ಅಣಿಯಾಗುತ್ತಿದ್ದಾರೆ.
ಈಗ ದಂಪತಿ ಮತ್ತೊಂದು ಫೋಟೋ ಶೂಟ್ ಮಾಡಿಸಿಕೊಂಡು ಸಂಭ್ರಮಿಸಿದ್ದಾರೆ. ಆ ವಿಡಿಯೋಗಳನ್ನು ತಮ್ಮ ಇನ್ಟಾಗ್ರಾಂನಲ್ಲಿ ಹಾಕಿ ಸಂಭ್ರಮಿಸಿದ್ದಾರೆ. ಅದರಲ್ಲಿ ಕನ್ನಡ ಹಬ್ಬದ ಸಲುವಾಗಿ ನಾವು ಎಂದು ಬರೆದು ಮಗು ಹಾಗೂ ದೃಷ್ಟೀ ಬೀಳದ ಎಮೋಜಿ ಹಾಕಿ ಹರಿಪ್ರಿಯಾ ಸಂಭ್ರಮಿಸಿದ್ದಾರೆ. ಈ ಪೋಸ್ಟ್ ನಲ್ಲಿ ಹರಿಪ್ರಿಯಾ ಸುಂದರವಾದ ಕಡುಕೆಂಪು ಬಣ್ಣದ ಚೂಡಿದಾರ್ ಧರಿಸಿದ್ದಾರೆ. ವಸಿಷ್ಠ ಸಿಂಹ ಕುರ್ತಾ ಧರಿಸಿದ್ದಾರೆ. ವಿಡಿಯೋ ನೋಡಿದ ಫ್ಯಾನ್ಸ್ ದಂಪತಿಗೆ ಶುಭ ಕೋರಿದ್ದಾರೆ. ಮುದ್ದಾದ ಜೋಡಿಗೆ ಮುದ್ದಾದ ಮಗು ಬರಲಿ, ಮರಿಸಿಂಹಕ್ಕೆ ಕಾಯ್ತಿದ್ದೇವೆ ಎಂದು ಬರೆದಿದ್ದಾರೆ.
ಮಾಲ್ಡಿವ್ ಪ್ರವಾಸಕ್ಕೆ ಹೋಗಿದ್ದ ದಂಪತಿ ಅಲ್ಲಿ ಕೂಡ ಫೋಟೋಶೂಟ್ ಮಾಡಿಸಿದ್ದರು. ನಂತರ ಆ ಫೋಟೋ ಜೊತೆ ಶುಭಸುದ್ದಿಯನ್ನು ಕೂಡ ಹೇಳಿದ್ದರು. ನಿಮ್ಮಲ್ಲಿ ಅನೇಕರು ಊಹಿಸಿದಂತೆ ನಾವು ನಮ್ಮ ಕುಡಿಗಾಗಿ ಎದುರು ನೋಡುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ, ಆರ್ಶೀವಾದದ ನಿರೀಕ್ಷೆಯಲ್ಲಿ ಎಂದು ಕೂಡ ಬರೆದಿದ್ದರು. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆಯಾಗಿ ಮುಂದಿನ ಜನವರಿ ಬಂದರೆ ಎರಡು ವರ್ಷ ಭರ್ತಿಯಾಗುತ್ತದೆ. ಅದಕ್ಕೆ ಸರಿಯಾಗಿ ಈ ಬಾರಿಯ ಸಂಭ್ರಮ ಡಬ್ಬಲ್ ಆಗಿರುತ್ತದೆ.

- Advertisement -
Trending Now
ಪಿ.ವಿ.ಸಿಂಧೂ ಮದುವೆಯಾಗುತ್ತಿರುವ ಗಂಡು ಯಾರು?
December 3, 2024
ಪ್ರಧಾನಿಯಾದ ಬಳಿಕ ಮೋದಿ ನೋಡಿದ ಮೊದಲ ಸಿನೆಮಾ ಇದು!
December 3, 2024
Leave A Reply